ಪ್ಯಾನ್ ಇಂಡಿಯಾ ಸಿನಿಮಾ ‘ಸಲಾರ್’ ರಿಲೀಸ್‍ಗೆ ಡೇಟ್ ಫಿಕ್ಸ್

ಬೆಂಗಳೂರು: ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ತೆರೆ ಮೇಲೆ ಬರಲು ಡೇಟ್ ಫಿಕ್ಸ್ ಆಗಿದೆ. 2022ರ ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಕೆಜಿಎಫ್ ಚಾಪ್ಟರ್-1 ಮತ್ತು ಕೆಜಿಎಫ್-2 ಚಿತ್ರಗಳು ಭಾರತ ಸಿನಿಮಾ ರಂಗದಲ್ಲಿ ಸಖತ್ ಟ್ರೆಂಡ್ ಸೆಟ್ ಮಾಡಿವೆ. ಈ ಸಿನಿಮಾಗಳ ನಿರ್ದೇಶನ ಮತ್ತು ಮೇಕಿಂಗ್ ನೋಡಿದ ಎಲ್ಲರೂ ಪ್ರಶಾಂತ್ ನೀಲ್ ನಿರ್ದೇಶನಕ್ಕೆ ಬೌಲ್ಡ್ ಆಗಿದ್ದರು. ಕೆಜಿಎಫ್-2 ಸಿನಿಮಾ ಮುಗಿದ ಬಳಿಕ ಪ್ರಶಾಂತ್ ನೀಲ್ ಅವರು ಕೈಗೆತ್ತಿಕೊಂಡ ಸಿನಿಮಾ ಸಲಾರ್ ಇದೀಗ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ. ಈ ಕುರಿತು ಹೊಂಬಾಳೆ ಫಿಲ್ಮ್ ಮುಂದಿನ ವರ್ಷ ಏಪ್ರಿಲ್ 14 ರಂದು ಸಲಾರ್ ತೆರೆಗೆ ಬರಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

ಸಲಾರ್ ಸಿನಿಮಾದಲ್ಲಿ ಬಾಹುಬಲಿ ಖ್ಯಾತಿಯ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಹೀರೋ ಆಗಿ ಅಭಿನಯಿಸಿದ್ದಾರೆ. ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಜೋಡಿಯ ಮೊದಲ ಸಿನಿಮಾ ಸಲಾರ್ ಆಗಿದ್ದು ಇದೀಗ ಅಭಿಮಾನಿಗಳಲ್ಲಿ ಬಾರಿ ಕುತೂಹಲ ಕೆರಳಿಸಿದೆ. ಸಲಾರ್ ಚಿತ್ರ ಕೆಜಿಎಫ್ ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಸಿದ್ಧವಾಗಲಿದೆ.

ಟಾಲಿವುಡ್ ಬಹು ನಿರೀಕ್ಷಿತ ಸಲಾರ್ ಸಿನಿಮಾದ ಮೂಹೂರ್ತ ಪೂಜೆ ಕೆಲ ತಿಂಗಳ ಹಿಂದೆ ಹೈದರಾಬಾದ್ ನಲ್ಲಿ ನಡೆದಿತ್ತು. ಮೂಹೂರ್ತ ಪೂಜೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ಡಿಸಿಎಂ ಅಶ್ವತ್ಥ ನಾರಾಯಣ ಭಾಗವಹಿಸಿದ್ದರು.

Comments

Leave a Reply

Your email address will not be published. Required fields are marked *