ಭಾರತದ ಪರ ದಾಖಲೆ ಬರೆದ ಅಶ್ವಿನ್‌

ಅಹಮದಾಬಾದ್‌: ಟೀಂ ಇಂಡಿಯಾದ ಸ್ಪಿನ್ನರ್‌ ಆರ್‌ ಅಶ್ವಿನ್‌ ಭಾರತದ ಪರ ದಾಖಲೆ ಬರೆದಿದ್ದಾರೆ.

ಅತಿ ಕಡಿಮೆ ಪಂದ್ಯದಲ್ಲಿ 400 ವಿಕೆಟ್‌ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಅಶ್ವಿನ್‌ ಪಾತ್ರವಾಗಿದ್ದಾರೆ. 77ನೇ ಪಂದ್ಯವನ್ನು ಆಡುತ್ತಿರುವ ಅಶ್ವಿನ್‌ ಇಂಗ್ಲೆಂಡಿನ ಎರಡನೇ ಇನ್ನಿಂಗ್ಸ್‌ನಲ್ಲಿ ಬೆನ್‌ ಸ್ಟೋಕ್ಸ್‌ ವಿಕೆಟ್‌ ಪಡೆಯುವ ಈ ಸಾಧನೆ ಮಾಡಿದ್ದಾರೆ.

ವಿಶ್ವದಲ್ಲಿ ಈ ಸಾಧನೆ ಮಾಡಿದ ಆಟಗಾರರ ಪಟ್ಟಿಯಲ್ಲಿ ಅಶ್ವಿನ್‌ ಎರಡನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರುಳೀಧರನ್‌(72) ಮೊದಲ ಸ್ಥಾನದಲ್ಲಿದ್ದಾರೆ.

400 ವಿಕೆಟ್‌ ಗಡಿ ದಾಟಿದ ಭಾರತದ 4ನೇ ಬೌಲರ್‌ ಅಶ್ವಿನ್‌ ಆಗಿದ್ದಾರೆ. ಲೆಗ್‌ ಸ್ಪಿನ್ನರ್‌ ಅನಿಲ್‌ ಕುಂಬ್ಳೆ 619, ಕಪಿಲ್‌ ದೆವ್‌ 434, ಹರ್ಭಜನ್‌ ಸಿಂಗ್‌ 417 ವಿಕೆಟ್‌ ಪಡೆದಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌, ಎರಡನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್‌ 4 ವಿಕೆಟ್‌ ಪಡೆದಿದ್ದಾರೆ. ಈ ಪಂದ್ಯಕ್ಕೂ ಮೊದಲು 76 ಪಂದ್ಯಗಳ 142 ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ ಮಾಡಿ 394 ವಿಕೆಟ್‌ ಪಡೆದಿದ್ದರು.

Comments

Leave a Reply

Your email address will not be published. Required fields are marked *