ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಸ್.ನಾರಾಯಣ್ ಪುತ್ರ ಪವನ್

ಬೆಂಗಳೂರು: ಕನ್ನಡ ನಿರ್ದೇಶಕ, ನಿರ್ಮಾಪಕ, ನಟ ಆಗಿರವ ಎಸ್. ನಾರಾಯಣ್ ಅವರ 2ನೇ ಪುತ್ರ ಪವನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಫೋಟೋವನ್ನು ನಟಿ ಸುಧಾರಾಣಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಚಂದನವನದಲ್ಲಿ ಮದುವೆ ಸಂಭ್ರಮ ಮನೆಮಾಡಿದೆ. ಒಬ್ಬರ ಹಿಂದೆ ಒಬ್ಬರು ಸೆಲೆಬ್ರಿಟಿಗಳು ಮತ್ತು ಅವರ ಮಕ್ಕಳ ಮದುವೆ ಆಗುತ್ತಲೇ ಇದೆ. ಎಸ್. ನಾರಾಯಣ್ ಪುತ್ರ ಪವನ್ ಶುಭ ಮುಹೂರ್ತದಲ್ಲಿ ಪವಿತ್ರಾ ಅವರನ್ನು ವರಿಸಿದ್ದಾರೆ.

 

View this post on Instagram

 

A post shared by Sudharani (@sudharanigovardhan)

ಎಸ್. ನಾರಾಯಣ್ ಮತ್ತು ಅವರ ಕುಟುಂಬವನ್ನು ಭೇಟಿ ಮಾಡುವುದು ಯಾವಾಗಲೂ ಸಂತೋಷದ ಸಂಗತಿಯಾಗಿದೆ. ಅವರ ಪುತ್ರ ಪವನ್ ದಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪವನ್, ಪವಿತ್ರಾ ಹ್ಯಾಪಿ ಮ್ಯಾರೀಡ್ ಲೈಫ್ ಎಂದು ಬರೆದುಕೊಂಡು ಮದುವೆಯಲ್ಲಿ ಭಾಗಿಯಾಗಿದ್ದ ಫೋಟೋವನ್ನು ಸುಧಾರಾಣಿ ಹಂಚಿಕೊಂಡಿದ್ದಾರೆ.

ಆರತಕ್ಷತೆಯಲ್ಲಿ ನಟ ಶರಣ್, ನಟ ಶ್ರೀಮುರಳಿ, ಸುಧಾರಾಣಿ, ಮಾಳವಿಕಾ ಅವಿನಾಶ್, ಅಮೂಲ್ಯ, ರಾಕ್ ಲೈನ್ ವೆಂಟೇಶ್, ಸುಮಲತಾ ಸೇರಿದಂತೆ ಹಲವು ಗಣ್ಯರು ಮದುವೆಯಲ್ಲಿ ಭಾಗಿಯಾಗಿ ನವವಧುವರರನ್ನು ಆಶಿರ್ವಧಿಸಿದ್ದಾರೆ. ಮದುವೆ ಸಂಭ್ರಮದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

Comments

Leave a Reply

Your email address will not be published. Required fields are marked *