ರೈತರಿಂದ ನಾಳೆ ದೇಶಾದ್ಯಂತ ರೈಲು ರೋಕೋ ಚಳವಳಿ – ಮಧ್ಯಾಹ್ನ 12ರಿಂದ 4ಗಂಟೆವರೆಗೆ ರೈಲು ಸ್ತಬ್ಧ

TRAIN

– ದಿಶಾ ರವಿ ಬಂಧನಕ್ಕೆ ರೈತರು, ಎಚ್‍ಡಿಕೆ ಖಂಡನೆ

ನವದೆಹಲಿ: ಕೃಷಿ ಕಾಯಿದೆ ರದ್ದತಿಗೆ ಆಗ್ರಹಿಸಿ ರೈತರು ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿದ್ದಾರೆ. ಟ್ರ್ಯಾಕ್ಟರ್ ರ್ಯಾಲಿ, ಹೆದ್ದಾರಿ ತಡೆ ಬಳಿಕ ಇದೀಗ ನಾಳೆ ದೇಶಾದ್ಯಂತ `ರೈಲ್ ರೋಕೋ’ ಚಳವಳಿ ಹಮ್ಮಿಕೊಂಡಿದ್ದಾರೆ.

ಗುರುವಾರ ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 4 ಗಂಟೆವರೆಗೆ 4 ಗಂಟೆಗಳ ಕಾಲ ಎಲ್ಲಾ ರೈಲುಗಳನ್ನು ತಡೆಯಲಿದ್ದಾರೆ. ರಾಜ್ಯದಲ್ಲೂ ರೈಲ್ ರೋಕೋ ಚಳವಳಿ ಮಾಡ್ತೇವೆ ಅಂತ ರೈತ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ರೈಲು ತಡೆ ಆಗಲಿದೆ. ‘ಟೂಲ್‍ಕಿಟ್’ ಕೇಸಲ್ಲಿ ಬಂಧನವಾಗಿರೋ ಬೆಂಗಳೂರಿನ ದಿಶಾ ರವಿ ಬಂಧನವನ್ನು ಮಾಜಿ ಸಿಎಂ ಕುಮಾರಸ್ವಾಮಿ ಖಂಡಿಸಿದ್ದಾರೆ. ಇದು ಅಘೋಷಿತ ತುರ್ತುಪರಿಸ್ಥಿತಿ ಅನ್ನಿಸ್ತಿದೆ ಅಂದಿದ್ದಾರೆ. ದಿಶಾರವಿ ವಾಟ್ಸಪ್ ಗ್ರೂಪ್‍ನಲ್ಲಿ ಖಲಿಸ್ತಾನಿ ಬೆಂಬಲಿತ ಪಿಜೆಎಫ್ (ಪೊಯೇಟಿಕ್ ಜಸ್ಟೀಸ್ ಫೌಂಡೇಷನ್) ಸದಸ್ಯರು ಇರೋದು ಕಂಡು ಬಂದಿದೆ.

ದಿಶಾ ಬಂಧನ ಖಂಡಿಸಿ ಬೆಂಗಳೂರಿನಲ್ಲಿ ಯೂತ್ ಕಾಂಗ್ರೆಸ್ ಮೊಂಬತ್ತಿ ಹಿಡಿದು ಪ್ರತಿಭಟನೆ ನಡೆಸಿದೆ. ಟೂಲ್‍ಕಿಟ್ ಸಂಬಂಧ ‘ಝೂಮ್’ ಲೈವ್‍ನಲ್ಲಿ ಪ್ಲಾನ್ ಆಗಿದೆ ಅಂತ ದೆಹಲಿ ಪೊಲೀಸರು ಹೇಳಿದ್ದಾರೆ. ಮುಂಬೈನಲ್ಲಿ ಸಾಮಾಜಿಕ ಕಾರ್ಯಕರ್ತೆ, ವಕೀಲೆಯಾಗಿರುವ ನಿಖಿತಾ ಜಾಕೋಬ್ ಅನ್ನೋವ್ರು ತಾವು ಟೂಲ್‍ಕಿಟ್ ಸಿದ್ಧಪಡಿಸೋದ್ರಲ್ಲಿ ಭಾಗಿಯಾಗಿದ್ದು ನಿಜ. ಆದರೆ ದೇಶ ವಿರೋಧವಾಗಿ ಅಲ್ಲ. ನಾನು ಮಾಹಿತಿ ನೀಡಿದ್ದೇನೆ ಅಷ್ಟೇ ಅಂದಿದ್ದಾರೆ. ಈ ಮಧ್ಯೆ, ದೆಹಲಿ ಕೆಂಪುಕೋಟೆಯಲ್ಲಿ ಕತ್ತಿ ಬೀಸಿ, ಹಿಂಸಾಚಾರಕ್ಕೆ ಪ್ರಚೋದಿಸಿದ್ದ ಮನಿಂದರ್ ಸಿಂಗ್ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *