ಮಗಳ ನೃತ್ಯ ಕಂಡು ಡಿ.ಕೆ.ಶಿವಕುಮಾರ್ ಆನಂದ ಭಾಷ್ಪ

ಬೆಂಗಳೂರು: ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪುತ್ರಿ ಐಶ್ವರ್ಯ ‘ಅಪ್ಪಾ ಐ ಲವ್ ಯು’ ಹಾಡಿಗೆ ನೃತ್ಯ ಮಾಡುತ್ತಿದ್ದರೆ, ಇತ್ತ ತಂದೆ ಶಿವಕುಮಾರ್ ಮಗಳ ನೃತ್ಯ ನೋಡಿ ಆನಂದಭಾಷ್ಪ ಸುರಿಸಿದ್ದಾರೆ.

ಡಿ.ಕೆ ಪುತ್ರಿ ಐಶ್ವರ್ಯ ಹಾಗೂ ಸಿದ್ಧಾರ್ಥ್ ಪುತ್ರ ಅಮಥ್ರ್ಯ ಸುಬ್ರಮಣ್ಯ ಹೆಗ್ಡೆ ಇವರಿಬ್ಬರ ಮದುವೆ ನಾಳೆ ನಡೆಯಲಿದೆ. ಈಗಾಗಲೇ ಡಿ.ಕೆ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದ್ದು, ಇಂದು ವೈಟ್ ಫೀಲ್ಡ್ ನ ಖಾಸಗಿ ಹೋಟೆಲ್‍ಗೆ ಎರಡು ಕುಟುಂಬಸ್ಥರು ತಲುಪಿದ್ದು, ಈಗಾಗಲೇ ವರಪೂಜೆ ನೆರವೇರಿಸಿ ಎರಡು ಕುಟುಂಬಸ್ಥರು ವಧು ವರರನ್ನು ಆರ್ಶೀವದಿಸಿದ್ದಾರೆ. ಬೆಳಗ್ಗೆ 9 ರಿಂದ 9-45 ರ ನಡುವಿನ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ನಡೆಯಲಿದ್ದು, ಎಲ್ಲಾ ಕಾರ್ಯಗಳನ್ನು ಸ್ವತಃ ಶಿವಕುಮಾರ್ ನೋಡಿಕೊಳ್ಳುತ್ತಿದ್ದಾರೆ.

ಬೆಳಗ್ಗೆ 9 ರಿಂದ 10-30 ರ ವರೆಗೆ ರಾಹುಕಾಲ ಇರುವ ಕಾರಣ 9 ಗಂಟೆಯೊಳಗೆ ಖಾಸಗಿ ಹೋಟೆಲ್ ತಲುಪಲು ಡಿ.ಕೆ ಕುಟುಂಬ ತಯಾರಿ ನಡೆಸಿದೆ. ಅತ್ತ 10-30ರ ರಾಹುಕಾಲ ಕಳೆದ ನಂತರ ತಮ್ಮ ನಿವಾಸದಿಂದ ಹೊರಡಲು ಎಸ್.ಎಂ.ಕೃಷ್ಣ ಕುಟುಂಬ ಸಿದ್ಧತೆ ನಡೆಸಿದೆ.

ಶಿವಕುಮಾರ್ ಮಗಳ ಮದುವೆ ಕಾರ್ಯಕ್ರಮದ ಎಲ್ಲಾ ಸಿದ್ಧತೆಯನ್ನು ಸ್ವತಃ ಡಿಕೆ ಶಿವಕುಮಾರ್ ಮುಂದೆ ನಿಂತು ಪರಿಶೀಲನೆ ಮಾಡುತ್ತಿದ್ದು ಮದುವೆಗೆ ಸಂಬಂಧಿಕರು ಮತ್ತು ಆತ್ಮೀಯ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ.

Comments

Leave a Reply

Your email address will not be published. Required fields are marked *