ಹಿಂದಿ ಹೇರಿಕೆ ಮಾಡಿದ್ರೆ ರಕ್ತಪಾತವಾಗುತ್ತೆ: ಸಿದ್ದರಾಮಯ್ಯ

ಮಂಡ್ಯ: ಭಾರತ ದೇಶದಲ್ಲಿ ಕನ್ನಡವನ್ನು ಪಕ್ಕಕ್ಕೆ ತಳ್ಳಿ ಬಲವಂತವಾಗಿ ಹಿಂದಿ ಹೇರಿಕೆ ಮಾಡಿದ್ರೆ ರಕ್ತಪಾತವಾಗುತ್ತದೆ. ಕನ್ನಡಕ್ಕೆ ಪ್ರಥಮ ಸ್ಥಾನವನ್ನು ಕೊಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಡ್ಯದ ಕರ್ನಾಟಕ ಸಂಘದ ವತಿಯಿಂದ ಆಯೋಜಿಸಿದ್ದ ಡಾ.ಹಾಮಾನಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದಿ ಭಾಷೆ ಎಂದಿಗೂ ರಾಷ್ಟ್ರ ಭಾಷೆಯಾಗಲು ಸಾಧ್ಯವಿಲ್ಲ. ಹಿಂದಿ ಭಾಷೆ ಉತ್ತರ ಭಾರತದ 5 ರಾಜ್ಯಗಳಲ್ಲಿ ಮಾತ್ರ ಇದೆ. ದೇಶದ ಬೇರೆ ಯಾವ ರಾಜ್ಯದಲ್ಲೂ ಹಿಂದಿ ಇಲ್ಲ. ಹೀಗಿರುವಾಗ ಹಿಂದಿ ರಾಷ್ಟ್ರ ಭಾಷೆ ಆಗಲು ಹೇಗೆ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಂದಿ ಹೇರಿಕೆ ಟೀಕೆಗೆ ಉತ್ತರ – ರಾಷ್ಟ್ರೀಯ ಅನುವಾದ ಮಿಷನ್‌ ಆರಂಭ

ಒಂದು ವೇಳೆ ಹಿಂದಿ ಭಾಷೆಯನ್ನು ಭಾರತ ದೇಶದಲ್ಲಿ ಬಲವಂತವಾಗಿ ಹೇರಿಕೆ ಮಾಡಿದರೆ ರಕ್ತಪಾತವಾಗುತ್ತದೆ. ಎಲ್ಲಾ ಭಾಷೆ ಸಂಸ್ಕ್ರತಿ, ಜನಾಂಗ, ಆಚಾರವನ್ನು ಹೊಂದಿವರು ಇದ್ದಾರೆ. ಈ ಹಿಂದಿ ಏರಿಕೆಯ ಕನಸನ್ನು ಕೇಂದ್ರ ಸರ್ಕಾರ ಬಿಡಬೇಕು. ಭಾಷೆಯನ್ನು ಕಲಿಯಿರಿ ಬೇಡ ಎಂದು ಹೇಳುತ್ತಿಲ್ಲ ಆದರೆ ಕನ್ನಡ ಮಾತ್ರ ಕರ್ನಾಟಕದಲ್ಲಿ ಸಾರ್ವಭೌಮ ಭಾಷೆಯಾಗಿರಬೇಕು ಎಂದು ಸಿದ್ದರಾಮಯ್ಯ ಹೇಳಿದರು. ಇದನ್ನೂ ಓದಿ: ಶಿಕ್ಷಣದಲ್ಲಿ ಹಿಂದಿ ಹೇರಿಕೆ ಮಾಡಲ್ಲ – ಕೇಂದ್ರ ಸರ್ಕಾರ ಸ್ಪಷ್ಟನೆ: ಏನಿದು ವಿವಾದ?

Comments

Leave a Reply

Your email address will not be published. Required fields are marked *