ನಿರುದ್ಯೋಗದಿಂದ ಬೇಸತ್ತು ಪತ್ನಿ, ಇಬ್ಬರು ಮಕ್ಕಳಿಗೆ ವಿಷ ನೀಡಿ ತಾನೂ ಕುಡಿದ

– ದಂಪತಿ ಸಾವು, ಮಕ್ಕಳ ಸ್ಥಿತಿ ಗಂಭೀರ

ಚೆನ್ನೈ: ನಿರುದ್ಯೋಗಿ ವ್ಯಕ್ತಿ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ವಿಷ ಉಣಿಸಿ, ತಾನೂ ಸೇವಿಸಿರುವ ಆಘಾತಕಾರಿ ಘಟನೆ ಚೆನ್ನೈನ ಸೇಲಂನಲ್ಲಿ ನಡೆದಿದೆ.

ವಿಷ ಸೇವಿಸುತ್ತಿದ್ದಂತೆ ವ್ಯಕ್ತಿ ಹಾಗೂ ಆತನ ಪತ್ನಿ ಸಾವನ್ನಪ್ಪಿದ್ದು, ಅಲ್ಲದೆ ಇಬ್ಬರು ಮಕ್ಕಳಿಗೆ ಒತ್ತಾಯ ಪೂರ್ವಕವಾಗಿ ವಿಷ ಕುಡಿಸಿದ್ದಾರೆ. ಮಕ್ಕಳ ಸ್ಥಿತಿ ಗಂಭಿರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿರುದ್ಯೋಗಿ ವ್ಯಕ್ತಿಯನ್ನು ಪುಂಗವಾಡಿ ಗ್ರಾಮದ ಪಿ.ವೆಲ್ಮುರುಗನ್ ಎಂದು ಗುರುತಿಸಲಾಗಿದ್ದು, ಸತ್ಯ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಅಭಿನಯ ಹಾಗೂ ಸಂಜಯ್ ಇಬ್ಬರು ಮಕ್ಕಳಿದ್ದರು.

ವೆಲ್ಮುರುಗನ್ ಅವರು ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಆದರೆ ಕೆಲ ತಿಂಗಳಿಂದ ಅವರಿಗೆ ಕೆಲಸ ಸಿಕ್ಕಿರಲಿಲ್ಲ. ಅಲ್ಲದೆ ವ್ಯಕ್ತಿಯ ತಾಯಿ ತನ್ನ ಪತ್ನಿಯನ್ನು ಬೈಯುತ್ತಿದ್ದಳು. ಹೀಗೆ ಜಗಳವಾಡುತ್ತಿದ್ದಾಗ ವೆಲ್ಮುರುಗನ್ ಮಧ್ಯ ಪ್ರವೇಶಿಸಿದರೆ ಆತನನ್ನೂ ಬೈಯುತ್ತಿದ್ದರು. ಹೀಗೆ ಜಗಳದಿಂದಾಗಿ ಹತಾಶೆಗೊಂಡು ದಂಪತಿ ರಾತ್ರಿಯೇ ಮನೆ ಬಿಟ್ಟು ಬಂದಿದ್ದರು. ಬಳಿಕ ವೆಲ್ಮುರುಗನ್ ಆತ್ಮಹತ್ಯೆಗೆ ನಿರ್ಧರಿಸಿದ್ದ. ಇದಕ್ಕೆ ಪತ್ನಿ ಸತ್ಯ ಸಹ ಬೆಂಬಲ ಸೂಚಿಸಿದ್ದಳು. ಬಳಿ ವೆಲ್ಮುರುಗನ್ ಎಲ್ಲರ ಕಿವಿಗೆ ವಿಷ ಸುರಿದು ತಾನೂ ಕುಡಿದಿದ್ದಾನೆ.

ಈ ವೇಳೆ ದಂಪತಿ ಮಕ್ಕಳಿಗೂ ವಿಷ ನೀಡಲು ಮುಂದಾಗಿದ್ದು, ಈ ವೇಳೆ ಮಕ್ಕಳು ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಗ್ರಾಮಸ್ಥರು ಸ್ಥಳಕ್ಕೆ ತೆರಳುವಷ್ಟರಲ್ಲಿ ವೆಲ್ಮುರುಗನ್ ಹಾಗೂ ಸತ್ಯ ಸಾವನ್ನಪ್ಪಿದ್ದಾರೆ. ಬಳಿಕ ಗ್ರಾಮಸ್ಥರು ಅಟ್ಟೂರ್ ಪೊಲೀಸರಿಗೆ ಮಾಹಿತಿ ನೀಡಿದ್ದು, ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಬಾಲಕನ ಸ್ಥಿತಿ ಗಂಭಿರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಗೆ ಸಹ ಅಟ್ಟೂರ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Comments

Leave a Reply

Your email address will not be published. Required fields are marked *