ಕೆಜಿಎಫ್‌ ಚಾಪ್ಟರ್‌ 2 ಜುಲೈ 16ಕ್ಕೆ ವಿಶ್ವಾದ್ಯಂತ ಬಿಡುಗಡೆ

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌ ಚಾಪ್ಟರ್‌ 2 ಸಿನಿಮಾ ಜುಲೈ 16 ರಂದು ಬಿಡುಗಡೆಯಾಗಲಿದೆ.

ನಿರ್ದೇಶಕ ಪ್ರಶಾಂತ್‌ ನೀಲ್‌ ಇಂದು ಸಂಜೆ ಟ್ವೀಟ್‌ ಮಾಡುವ ಮೂಲಕ ಬಿಡುಗಡೆ ದಿನಾಂಕವನ್ನು ಪ್ರಕಟ ಮಾಡಿದ್ದಾರೆ. 2021ರ ಜುಲೈ 16 ರಂದು ವಿಶ್ವಾದ್ಯಂತ ಕೆಜಿಎಫ್‌ ಚಾಪ್ಟರ್‌ 2 ಬಿಡುಗಡೆಯಾಗಲಿದೆ ಎಂದು ಪ್ರಶಾಂತ್‌ ನೀಲ್‌ ಟ್ವೀಟ್‌ ಮಾಡಿದ್ದಾರೆ.

https://twitter.com/prashanth_neel/status/1355139129101570049

ಪ್ರಶಾಂತ್‌ ನೀಲ್‌ ದಿನಾಂಕ ಪ್ರಕಟಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್‌ ಟ್ರೆಂಡಿಂಗ್‌ನಲ್ಲಿದೆ. ಕೆಜಿಎಫ್‌ ಚಾಪ್ಟರ್‌1 2018ರ ಡಿಸೆಂಬರ್‌1 ರಂದು ಬಿಡುಗಡೆಯಾಗಿತ್ತು. ಕನ್ನಡ, ಹಿಂದಿ, ತಮಿಳು, ತೆಲುಗು, ಮಲೆಯಾಳಂ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಯಶ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಜ.7 ರಂದು ಟೀಸರ್‌ ಬಿಡುಗಡೆಯಾಗಿತ್ತು. ಒಟ್ಟು 2 ನಿಮಿಷ 16 ಸೆಕೆಂಡ್‌ ವಿಡಿಯೋ ಇದ್ದು ಇದರರಲ್ಲಿ ರಾಕಿ ಬಾಯ್‌ ಯಶ್‌, ಅಧೀರ ಸಂಜಯ್‌ ದತ್‌, ರಮೀಕಾ ಸೇನ್‌ ರವೀನಾ ಟಂಡನ್‌, ರೀನಾ ದೇಸಾಯಿ ಶ್ರೀನಿಧಿ ಶೆಟ್ಟಿ ಪಾತ್ರವನ್ನು ತೋರಿಸಲಾಗಿತ್ತು. ವಿಶೇಷವಾಗಿ ರಾಕಿ ಬಾಯ್‌ ಮಿಷನ್‌ ಗನ್‌ನಿಂದ ಜೀಪುಗಳ ಮೇಲೆ ಫೈರ್‌ ಮಾಡಿದ್ದು ಎರಡು ಜೀಪುಗಳು ಮೇಲಕ್ಕೆ ಹಾರಿವೆ. ಬಳಿಕ ಫೈರ್‌ ಮಾಡಿದ ಕೆಂಪಾದ ಗನ್‌ನಿಂದ ರಾಕಿ‌ ಸಿಗರೇಟ್‌ ಹೊತ್ತಿಸುತ್ತಿರುವ ದೃಶ್ಯವನ್ನು ತೋರಿಸಲಾಗಿದೆ.

ಜ.8 ರಂದು ಯಶ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಗಿಫ್ಟ್‌ ನೀಡಲು ಟೀಸರ್‌ ರಿಲೀಸ್‌ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಜ.7ರ ರಾತ್ರಿ ದಿಢೀರ್‌ ಆಗಿ ಕೆಜಿಎಫ್‌ ಸಿನಿಮಾ ಟೀಸರ್‌ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮೊದಲೇ ಟೀಸರ್‌ ರಿಲೀಸ್‌ ಆಗಿತ್ತು.

Comments

Leave a Reply

Your email address will not be published. Required fields are marked *