ಅಪ್ರಾಪ್ತ ಬಾಲಕಿಗೆ ಮದ್ಯ ಕುಡಿಸಿ ರೇಪ್ ಮಾಡಿದ ಫುಟ್‍ಬಾಲ್ ಮಾಜಿ ಆಟಗಾರ!

– ಮೂರೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ಲಂಡನ್: ಫುಟ್‍ಬಾಲ್ ಮಾಜಿ ಆಟಗಾರನೊಬ್ಬ 14 ವರ್ಷದ ಬಾಲಕಿಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿ ನಂತರ ಅತ್ಯಾಚಾರ ಎಸಗಿದ ಘಟನೆಯೊಂದು ಲಂಡನ್ ನಲ್ಲಿ ನಡೆದಿದೆ.

ಕಾಮುಕನನ್ನು ಟೈರೆಲ್ ರಾಬಿನ್ಸನ್(23) ಎಂದು ಗುರುತಿಸಲಾಗಿದ್ದು, ಈತ ಬ್ರಿಟನ್ ಫುಟ್‍ಬಾಲ್ ಮಾಜಿ ಆಟಗಾರ. ಸದ್ಯ ಈತನಿಗೆ ಬ್ರಿಟನ್ ನ್ಯಾಯಾಲಯ ಮೂರೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ.

2018ರ ಆಗಸ್ಟ್ 13ರಂದು ಟೈರೆಲ್ 14 ವರ್ಷದ ಬಾಲಕಿಗೆ ವೊಡ್ಕಾ ಕುಡಿಸಿದ್ದನು. ನಂತರ ಮದ್ಯದ ಅಮಲಿನಲ್ಲಿ ತೇಲಾಡುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದನು. ಅಲ್ಲದೆ ಬಾಲಕಿಯ ನಗ್ನ ಫೋಟೋಗಳನ್ನು ತೆಗೆದು, ಸ್ನಾಪ್ ಚಾಟ್ ಆ್ಯಪ್ ಮೂಲಕ ಗೆಳೆಯರೊಂದಿಗೆ ಶೇರ್ ಮಾಡಿದ್ದನು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಟೈರೆಲ್ ನನ್ನು ಬಂಧಿಸಿದ್ದರು.

ಬಂಧಿಸಿ ತನಿಖೆಯ ನಡೆಸಿದ ವೇಳೆ ಟೈರೆಲ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದನು. ಅಲ್ಲದೆ ಕಳೆದ ವರ್ಷ ಜನವರಿಯಲ್ಲಿ ನ್ಯಾಯಾಲಯಕ್ಕೆ ತಪ್ಪೊಪ್ಪಿಗೆ ಪತ್ರ ಸಲ್ಲಿಸಿದ್ದನು. ಪತ್ರದಲ್ಲಿ ಬಾಲಕಿಯ ನಗ್ನ ಫೋಟೋಗಳನ್ನು ತಾನೇ ಶೆರ್ ಮಾಡಿರುವುದಾಗಿ ಪತ್ರದಲ್ಲಿ ತಿಳಿಸಿದ್ದನು. ಪ್ರಕರಣ ಸಂಬಂಧ ಮಂಗಳವಾರ ಅಂತಿಮ ವಿಚಾರಣೆ ನಡೆಸಿರುವ ಬ್ರಿಟನ್ ನ್ಯಾಯಾಲಯ ಆತನಿಗೆ ಮೂರೂವರೆ ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Comments

Leave a Reply

Your email address will not be published. Required fields are marked *