ಕೊರೊನಾ ಲಸಿಕೆ ಪಡೆದ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್

ಬೆಂಗಳೂರು: ಜಗತ್ತಿಗೆ ಮಾರಕವಾಗಿರೋ ಕೊರೊನಾ ಪಿಡುಗನ್ನ ಹೋಗಲಾಡಿಸಲು ಲಸಿಕೆ ಪಡೆಯೊದೇ ದಾರಿ. ತಾವು ಕೋವಿಶೀಲ್ಡ್ ಲಸಿಕೆ ಪಡೆದು ಎಲ್ಲರೂ ಲಸಿಕೆ ಪಡೆಯಬೇಕು ಎಂದು ಡಾ. ಸಿಎನ್ ಮಂಜುನಾಥ್ ಸಂದೇಶ ರವಾನಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದಿರೋ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶ ಡಾ. ಮಂಜುನಾಥ್, ಲಸಿಕೆ ಪಡೆಯಲು ಸಾಕಷ್ಟು ಜನ ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ಹೆಲ್ತ್ ಕೇರ್ ವರ್ಕರ್ಸ್ ಯಾವುದೇ ಭಯವಿಲ್ಲದೆ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ಕರೆನೀಡಿದ್ದಾರೆ. ನಾನು ವ್ಯಾಕ್ಸಿನ್ ತಗೆದುಕೊಂಡಿದ್ದೇನೆ. ನನಗೆ ಯಾವುದೇ ಸಮಸ್ಯೆಯಾಗಿಲ್ಲ. ಭಯ ಬಿಟ್ಟು ಲಸಿಕೆ ಪಡೆಯಿರಿ ಎಂದು ತಿಳಿಸಿದ್ದಾರೆ.

ಲಸಿಕೆ ಪಡೆದ ಮೇಲೆ ಸೈಡ್ ಎಫೆಕ್ಟ್ ಆಗುತ್ತೆ ಅನ್ನೋ ಭಯದಲ್ಲಿ ಫ್ರೆಂಟ್ ಲೈನ್ ವಾರಿಯರ್ಸ್ ಇದ್ದಾರೆ. ಜ್ವರ, ಅಲರ್ಜಿ, ಮೈಕೈ ನೋವು ಕಾಣಿಸಿಕೊಳ್ಳೊದು ಲಸಿಕೆಯಿಂದಾಗುವ ಪರಿಣಾಮವೇ ಹೊರತು, ಅದು ಅಡ್ಡ ಪರಿಣಾಮವಲ್ಲ. ಲಸಿಕೆ ಪಡೆಯುವುದರಿಂದ ಯಾರಿಗೂ ಸಮಸ್ಯೆಯಾಗಿಲ್ಲ ಎಂದರು.

ವ್ಯಾಕ್ಸಿನ್ ಬಗ್ಗೆ ಇರೋ ವದಂತಿಗಳನ್ನ ದೂರ ತಳ್ಳಿ ಲಸಿಕೆಯನ್ನ ಎಲ್ಲರೂ ಪಡೆದುಕೊಳ್ಳಬೇಕು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ಲಸಿಕೆಯನ್ನ ನಾನು ಪಡೆದಿದ್ದೇನೆ ಎಲ್ಲರು ಪಡೆಯಿರಿ ಎಂದು ನಮ್ಮ ನಾಡಿನ ಖ್ಯಾತ ವೈದ್ಯ ಡಾ. ಮಂಜುನಾಥ್ ಕರೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *