ಸ್ಮಿತ್‌ಗೆ ಗೇಟ್‌ಪಾಸ್‌ ಸ್ಯಾಮನ್ಸ್‌ ಕ್ಯಾಪ್ಟನ್‌ – ಯಾವ ತಂಡದಿಂದ ಯಾರು ಔಟ್‌?

– ಚೆನ್ನೈನಿಂದ ಹರ್ಭಜನ್‌, ಮುಂಬೈನಿಂದ ಮಾಲಿಂಗ ಔಟ್‌
– ಫಿಂಚ್‌, ಮೋರಿಸ್‌ರನ್ನು ಕೈ ಬಿಟ್ಟ ಆರ್‌ಸಿಬಿ

ಬೆಂಗಳೂರು: ಅಚ್ಚರಿಯ ಬೆಳವಣಿಗೆಯಲ್ಲಿ ಈ ವರ್ಷದ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ತಂಡವನ್ನು ಸಂಜು ಸ್ಯಾಮ್ಸನ್‌ ಮುನ್ನಡೆಸಲಿದ್ದಾರೆ.

ಭಾರತದ ವಿರುದ್ಧದ ಟೆಸ್ಟ್‌ ವೇಳೆ ಕಳ್ಳಾಟವಾಡಿ ಟೀಕೆಗೆ ಗುರಿಯಾಗಿದ್ದ ಸ್ವೀವ್‌ ಸ್ಮಿತ್‌ ಅವರನ್ನು ತಂಡದಿಂದಲೇ ಕೈಬಿಟ್ಟು ಸಂಜು ಸಾಮ್ಸನ್‌ಗೆ ರಾಜಸ್ಥಾನ ತಂಡ ಹೊಣೆಗಾರಿಕೆ ನೀಡಿದೆ. ತಂಡದ ನಿರ್ದೇಶಕರಾಗಿ ಶ್ರೀಲಂಕಾದ ಮಾಜಿ ನಾಯಕ ಸಂಗಕ್ಕಾರ ಅವರನ್ನು ನೇಮಿಸಲಾಗಿದೆ.

ಐಪಿಎಲ್‌ನಲ್ಲಿ ಉಳಿಸಿಕೊಳ್ಳಲಿರುವ ಆಟಗಾರರ ವಿವರವನ್ನು ಇಂದು ತಂಡಗಳು ಪ್ರಕಟಿಸಿವೆ. ಈ ಪೈಕಿ ಮುಂಬೈ ತಂಡ ಲಸಿತ್‌ ಮಾಲಿಂಗ, ಚೆನ್ನೈ ತಂಡ ಹರ್ಭಜನ್‌ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ.

ಎಲ್ಲ 8 ತಂಡಗಳು ಉಳಿಸಿಕೊಳ್ಳಲಿರುವ ಆಟಗಾರರ ಪಟ್ಟಿಯನ್ನು ಇಂದು ಬಿಡುಗಡೆ ಮಾಡಬೇಕಿದ್ದು, ತಂಡದಿಂದ ಕೈ ಬಿಟ್ಟ ಆಟಗಾರರ ಹರಾಜು ಪ್ರಕ್ರಿಯೆ ಫೆ.11 ರಂದು ನಡೆಯಲಿದೆ.

ಯಾವ ತಂಡದಿಂದ ಯಾರು ಔಟ್‌?
ರಾಯಲ್ಸ್‌ ಚಾಲೆಂಜರ್ಸ್‌ ಬೆಂಗಳೂರು: ಕ್ರಿಸ್ ಮೋರಿಸ್, ಆರನ್ ಫಿಂಚ್, ಮೊಯೀನ್ ಅಲಿ, ಇಸುರು ಉದಾನಾ, ಡೇಲ್ ಸ್ಟೇನ್, ಶಿವಮ್ ದುಬೆ, ಉಮೇಶ್ ಯಾದವ್, ಪವನ್ ನೇಗಿ, ಗುರ್ಕೀರತ್ ಮನ್, ಪಾರ್ಥಿವ್ ಪಟೇಲ್

ಡೆಲ್ಲಿ ಕ್ಯಾಪಿಟಲ್ಸ್‌: ಕೀಮೋ ಪಾಲ್, ಸಂದೀಪ್ ಲಮಿಚಾನೆ, ಅಲೆಕ್ಸ್ ಕ್ಯಾರಿ, ಜೇಸನ್ ರಾಯ್, ಮೋಹಿತ್ ಶರ್ಮಾ, ತುಷಾರ್ ದೇಶ್‌ಪಾಂಡೆ

ಕಿಂಗ್ಸ್‌ ಇಲೆವನ್‌ ಪಂಜಾಬ್‌: ಗ್ಲೆನ್ ಮ್ಯಾಕ್ಸ್‌ವೆಲ್, ಕರುಣ್ ನಾಯರ್, ಹರ್ದಸ್ ವಿಲ್ಜೋಯೆನ್, ಜಗದೀಶ್‌ ಸುಚಿತ್, ಮುಜೀಬ್ ಉರ್ ರಹಮಾನ್, ಶೆಲ್ಡನ್ ಕಾಟ್ರೆಲ್, ಜಿಮ್ಮಿ ನೀಶಮ್, ಕೆ. ಗೌತಮ್, ತಜಿಂದರ್ ಸಿಂಗ್.

ಸನ್‌ ರೈಸರ್ಸ್‌ ಹೈದರಾಬಾದ್‌: ಸಂಜಯ್ ಯಾದವ್, ಬಿ ಸಂದೀಪ್, ಬಿಲ್ಲಿ ಸ್ಟ್ಯಾನ್ಲೇಕ್, ಫ್ಯಾಬಿಯನ್ ಅಲೆನ್, ಯರ್ರಾ ಪೃಥ್ವಿರಾಜ್

ಚೆನ್ನೈ ಸೂಪರ್‌ ಕಿಂಗ್ಸ್‌: ಹರ್ಭಜನ್‌ ಸಿಂಗ್‌, ಮುರಳಿ ವಿಜಯ್‌, ಕೇದಾರ್‌ ಜಾಧವ್‌, ಪಿಯೂಶ್‌ ಚಾವ್ಲಾ, ಶೇನ್‌ ವಾಟ್ಸನ್‌, ಮೋನು ಸಿಂಗ್‌

ರಾಜಸ್ಥಾನ ರಾಯಲ್ಸ್‌: ಸ್ವೀವ್‌ ಸ್ಮಿತ್‌, ಅಂಕಿತ್‌ ರಜಪೂತ್‌, ಒಶಾನೆ ಥಾಮಸ್‌, ಆಕಾಶ್‌ ಸಿಂಗ್‌, ವರುಣ್‌ ಅರುಣ್‌, ಟಾಮ್‌ ಕರ್ರನ್‌, ಅನಿರುದ್ಧ ಜೋಶಿ, ಶಶಾಂಕ್‌ ಸಿಂಗ್‌

ಕೋಲ್ಕತ್ತಾ ನೈಟ್‌ ರೈಡರ್ಸ್‌: ಎಂ ಸಿದ್ಧಿಕಿ, ನಿಖಿಲ್‌ ನಾಯ್ಕ್‌, ಸಿದ್ದೇಶ್‌ ಲಾಡ್‌, ಕ್ರೀಸ್‌ ಗ್ರೀನ್‌, ಟಾಮ್‌ ಬಾಂಟನ್‌

ಮುಂಬೈ ಇಂಡಿಯನ್ಸ್‌: ಲಸಿತ್ ಮಾಲಿಂಗ, ಮಿಚ್ ಮೆಕ್‌ಕ್ಲೆನಾಘನ್, ಜೇಮ್ಸ್ ಪ್ಯಾಟಿನ್ಸನ್, ನಾಥನ್ ಕೌಲ್ಟರ್-ನೈಲ್, ಶೆರ್ಫೇನ್ ರುದರ್‌ಫೋರ್ಡ್, ಪ್ರಿನ್ಸ್ ಬಲ್ವಂತ್ ರೇ, ದಿಗ್ವಿಜಯ್‌ ದೇಶ್‌ಮುಖ್‌.

Comments

Leave a Reply

Your email address will not be published. Required fields are marked *