ನನ್ನ ಮಂತ್ರಿ ಮಾಡಿಲ್ಲ ಅಂತ ಆರೋಪ ಮಾಡೋರಲ್ಲಿ ಸಿಎಂ ಬಿಎಸ್‍ವೈ ಮನವಿ

– ಯಾರು ಏನೇ ಮಾತನಾಡಿದ್ರು ಕೇಂದ್ರದಲ್ಲಿ ದೂರು ಕೊಡಲಿ

ದಾವಣಗೆರೆ: ನನ್ನನ್ನು ಮಂತ್ರಿ ಮಾಡಿಲ್ಲ ಎಂದು ಆರೋಪ ಮಾಡುವವರಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಶಸ್ವಿಯಾಗಿ ಮಂತ್ರಿ ಮಂಡಲದ ವಿಸ್ತರಣೆ ಮಾಡಿದ್ದೇವೆ. ಕೇಂದ್ರದ ನಾಯಕರ ಅಪೇಕ್ಷೆಯಂತೆ ಒಂದು ಸಚಿವ ಸ್ಥಾನ ಖಾಲಿ ಇಟ್ಟುಕೊಂಡಿದ್ದೇವೆ. 10-12 ಜನ ಮಂತ್ರಿ ಮಾಡಿಲ್ಲ ಅಂತ ಆರೋಪ ಮಾಡ್ತಾ ಇದ್ದಾರೆ. ನನ್ನ ಇತಿಮಿತಿ ಒಳಗೆ ಏನು ಮಾಡೋಕೆ ಸಾಧ್ಯ ಅದನ್ನ ಮಾಡಿದ್ದೇನೆ ಎಂದರು.

ನನ್ನ ಮಂತ್ರಿ ಮಾಡಿಲ್ಲ ಅಂತ ಕೆಲವರು ಆರೋಪ ಮಾಡುತ್ತಿದ್ದಾರೆ. ಆರೋಪ ಮಾಡುವವರಲ್ಲಿ ವಿನಂತಿ ಮಾಡ್ತೀನಿ. ನಿಮ್ಮ ಆರೋಪ ಏನೇ ಇದ್ದರೂ ಕೇಂದ್ರದ ನಾಯಕರಿಗೆ ದೂರು ನೀಡಲು ಯಾರೂ ಅಡ್ಡಿ ಮಾಡಲ್ಲ. ಇಲ್ಲಿ ಹೇಳಿಕೆ ಕೊಡೋದರ ಮೂಲಕ ಗೊಂದಲ ಉಂಟು ಮಾಡಿ ವಾತಾವರಣ ಕೆಡಿಸುವುದು ಶಿಸ್ತಿಗೆ ಧಕ್ಕೆ ತರುವಂತಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೇಂದ್ರದ ನಾಯಕರು ಹೇಳಿದಂತೆ ಎರಡೂವರೆ ವರ್ಷ ಆಡಳಿತ ನಡೆಯುತ್ತೆ. ಅದನ್ನು ಯಾರು ಏನೂ ಮಾಡಿಕೊಳ್ಳೋಕೆ ಆಗಲ್ಲ. ಕೇಂದ್ರದ ನಾಯಕರ ಆಶೀರ್ವಾದ ಇರುವುದರಿಂದ ಉತ್ತಮ ಆಡಳಿತ ಮಾಡುತ್ತೇನೆ. ಈ ತಿಂಗಳು ಕೊನೆ ವಿಧಾನ ಮಂಡಲ ಅಧಿವೇಶ ನಡೆಯುತ್ತೆ. ಮಾರ್ಚ್‍ನಲ್ಲಿ ಬಜೆಟ್ ಅಧಿವೇಶನ ಮಾಡುತ್ತೇನೆ. ಹಣಕಾಸಿನ ಇತಿ-ಮಿತಿಯಲ್ಲಿ ರೈತ ಪರ ಬಜೆಟ್ ಮಂಡನೆ ಮಾಡ್ತೀನಿ ಎಂದು ಹೇಳಿದರು.

Comments

Leave a Reply

Your email address will not be published. Required fields are marked *