ಐತಿಹಾಸಿಕ ಕೌತುಕಕ್ಕೆ ಸಾಕ್ಷಿಯಾಗಲಿದೆ ಗವಿಗಂಗಾಧರೇಶ್ವರನ ಸನ್ನಿಧಿ

ಬೆಂಗಳೂರು: ಇಂದು ಸಂಕ್ರಾತಿಯ ಸುದಿನ. ಉತ್ತರಾಯಣ ಆರಂಭಗೊಳ್ಳುವ ಶುಭ ಘಳಿಗೆ. ಭಾಸ್ಕರ್ ತನ್ನ ಪಥ ಬದಲಿಸೋ ಹಿನ್ನೆಲೆ,ಸೂರ್ಯ ರಶ್ಮಿ ಗವಿಗಂಗಾಧರೇಶ್ವರನನ್ನು ಸ್ಪರ್ಶಿಸಲಿದೆ. ಪ್ರತಿವರ್ಷದಂತೆ ಈ ವರ್ಷವೂ, ಮಕರ ಸಂಕ್ರಾಂತಿಯಂದು ಸೂರ್ಯದೇವ, ಪರಶಿವನಿಗೆ ಪೂಜಿಸಲಿದ್ದಾನೆ. ಈ ಐತಿಹಾಸಿಕ ನೆರಳು-ಬೆಳಕಿನಾಟಕ್ಕೆ ಬೆಂಗಳೂರಿನ ಗುಟ್ಟಳ್ಳಿಯ ಗವಿಗಂಗಾಧರ ದೇವಾಲಯ ಸಾಕ್ಷಿಯಾಗಲಿದೆ.

ಇಂದು ಸಂಜೆ 5.14 ರಿಂದ 5.18 ರವಳಗೆ ಸುಮಾರು 30 ಸೆಕೆಂಡ್ ಗಳ ಕಾಲ ಈಶ್ವರನಿಗೆ ಸೂರ್ಯರಶ್ಮಿ ಸ್ಪರ್ಶಿಸಲಿದ್ದು, ಇದು ಅನಾದಿ ಕಾಲದಿಂದಲೂ ನಡೆದು ಬಂದಿರೋ ವೈಶಿಷ್ಟ್ಯವಾಗಿದೆ ಎಂದು ಗವಿಗಂಗಾಧರ ದೇವಾಲಯದ ಪ್ರಧಾನ ಅರ್ಚಕ ಡಾ.ಸೋಮಸುಂದರ್ ದೀಕ್ಷಿತ್ ಹೇಳಿದ್ರು.

ಈ ಹಿನ್ನೆಲೆ ಗವಿಗಂಗಾಧರ ಸನ್ನಿಧಿಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು ಮುಂಜಾನೆಯಿಂದಲೇ ದೇವಾಲಯದಲ್ಲಿ ಶಿವನಿಗೆ ರುದ್ರಾಭಿಷೇಕ ಸೇರಿ ವಿಶೇಷ ಪೂಜಾ ಕೈಂಕರ್ಯ ಜರುಗಲಿದೆ. ಇನ್ನೂ ಸಂಜೆಯ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಭಕ್ತಾದಿಗಳಿಗೆ ದೇವಸ್ಥಾನದ ಆವರಣದಲ್ಲಿ ಪೆಂಡಲ್ ಹಾಕಿ ಎಲ್‍ಇಡಿ ಟಿವಿ ಅಳವಡಿಸಲಾಗಿದೆ. ಭಕ್ತಾದಿಗಳೆಲ್ಲಾ ಸಹಕರಿಸಿದ್ರೇ ಮೂಲಮೂರ್ತಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ಒಂದು ವೇಳೆ ಭಕ್ತಾದಿಗಳು ಸಹಕರಿಸದಿದ್ರೇ ದೇವಸ್ಥಾನ ಕ್ಲೋಸ್ ಮಾಡ್ತೇವೆ. ಸರ್ಕಾರ ಈಗಾಗಲೇ ಹೇಳಿದ್ದಾರೆ ಭಕ್ತಾದಿಗಳಿಗೆ ಒಳಗಡೆ ಬಿಡಬೇಡಿ. ನೂಕು ನುಗ್ಗಲು ಆಗುತ್ತೆ. ಕೊರೋನಾ ಪರಿಸ್ಥಿತಿಗೆ ಅನುಗುಣವಾಗಿ ಈ ಆದೇಶ ಕೊಟ್ಟಿದ್ದಾರೆ. ಆದ್ದರಿಂದ ಭಕ್ತಾದಿಗಳು ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡು ಬಂದರೆ ಮೂಲಮೂರ್ತಿಯ ದರ್ಶನಕ್ಕೆ ಅವಕಾಶ ಮಾಡಿಕೊಡ್ತೇವೆ ಅಂತಾ ದೇವಾಲಯದ ಪ್ರಧಾನ ಅರ್ಚಕರಾದ ಸೋಮಸುಂದರ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *