ಕಾಲಿವುಡ್‍ಗೆ ಎಂಟ್ರಿ ಕೊಟ್ಟ ಅಭಿನಯ ಚತುರ ನೀನಾಸಂ ಸತೀಶ್

ಲೂಸಿಯಾ ಸಿನಿಮಾ ಮುಖಾಂತರ ಕನ್ನಡ ಸಿನಿರಸಿಕರ ಮನಗೆದ್ದು, ತಮ್ಮದೇ ಆದ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವ ನಟ ನೀನಸಾಂ ಸತೀಶ್. ಅಭಿನಯ ಚತುರ ಎಂದೇ ಕರೆಸಿಕೊಳ್ಳೊವ, ಮಂಡ್ಯದ ಗಂಡು, ಲೂಸಿಯಾ ನಂತರ ಚಿತ್ರರಂಗದಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ. ನಟನೆ ಜೊತೆಗೆ ನಿರ್ಮಾಣದಲ್ಲೂ ಬ್ಯುಸಿಯಾದ ನೀನಾಸಂ ಸತೀಶ್ ಚಂದನವನದ ಬೇಡಿಕೆಯ ನಟ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನೀನಾಸಂ ಸತೀಶ್ ತಮಿಳು ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ.

ನಿರ್ದೇಶಕ ಅನಿಸ್ ಅಬ್ಬಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ಪಗೈವಾನುಕ್ಕು ಅರುಲ್ವಾಯ್ ಚಿತ್ರದ ಮೂಲಕ ಕಾಲಿವುಡ್‍ಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ ನೀನಾಸಂ ಸತೀಶ್. ಖೈದಿ ಪಾತ್ರದಲ್ಲಿ ಸತೀಶ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರೀಕರಣದಲ್ಲಿ ಭಾಗಿಯಾದ ಪೆÇೀಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಚಿತ್ರತಂಡ ಕೂಡ ಸತೀಶ್ ನೀನಾಸಂ ಅವರನ್ನು ಸಂಭ್ರಮದಿಂದ ಬರಮಾಡಿಕೊಂಡಿದೆ.

ತಮಿಳು ಖ್ಯಾತ ನಟ ಸಸಿಕುಮಾರ್, ಸತೀಶ್ ನೀನಾಸಂ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರದಲ್ಲಿ ಬಿಂದು ಮಾಧವಿ, ವಾಣಿ ಭೋಜನ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟರಾದ ನಾಸರ್, ಜಯಪ್ರಕಾಶ್ ಪಗೈವಾನುಕ್ಕು ಅರುಲ್ವಾಯ್ ಚಿತ್ರತಂಡದಲ್ಲಿದ್ದು, ಗಿಬ್ರನ್ ಸಂಗೀತ ನಿರ್ದೇಶನ, ಕಾರ್ತಿಕ್ ತಿಳ್ಳೈ ಛಾಯಾಗ್ರಹಣ ಚಿತ್ರಕ್ಕಿರಲಿದೆ. ಈಗಾಗಲೇ ಪಗೈವಾನುಕ್ಕು ಅರುಲ್ವಾಯ್ ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಸತೀಶ್ ನೀನಾಸಂ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಥ್ರಿಲ್ಲರ್ ಕಥಾಹಂದರ ಒಳಗೊಂಡಿರೋ ಈ ಚಿತ್ರ ಬಹುತೇಕ ಚಿತ್ರೀಕರಣ ಜೈಲಿನಲ್ಲೇ ನಡೆಯಲಿದೆ. ನೀನಾಸಂ ಸತೀಶ್ ಕೂಡ ಖೈದಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

 

ಕನ್ನಡ ಸಿನಿಮಾಗಳಲ್ಲೂ ಬ್ಯುಸಿಯಾಗಿರುವ ಸತೀಶ್ ನೀನಾಸಂ ಇತ್ತೀಚೆಗೆ ಪೆಟ್ರೋಮ್ಯಾಕ್ಸ್ ಚಿತ್ರೀಕರಣ ಕಂಪ್ಲೀಟ್ ಮಾಡಿದ್ದಾರೆ. ಅಲ್ಲದೆ ದಸರಾ, ಮ್ಯಾಟ್ನಿ ಸಿನಿಮಾ ಶೂಟಿಂಗ್ ಕೂಡ ಲಿಸ್ಟ್‍ನಲ್ಲಿದ್ದು, ಸತೀಶ್, ಶ್ರದ್ದಾ ಶ್ರೀನಾಥ್ ಜೋಡಿಯ ಗೋದ್ರಾ ಸಿನಿಮಾ ಬಿಡುಗಡೆಯಾಗಬೇಕಿದೆ. ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಸತೀಶ್ ನೀನಾಸಂ ಇದೀಗ ಕಾಲಿವುಡ್‍ನಲ್ಲೂ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

Comments

Leave a Reply

Your email address will not be published. Required fields are marked *