ಎರಡ್ಮೂರು ದಿನದಲ್ಲಿ ಮಂತ್ರಿ ಆಗಬಹುದು: ಆರ್.ಶಂಕರ್

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹಲವು ದಿನಗಳಿಂದ ಕೇಳಿ ಬರುತ್ತಿದ್ದ, ಸಚಿವ ಸಂಪುಟ ವಿಸ್ತರಣೆ ಕೂಗು ಇನ್ನೂ ನಿಂತಿಲ್ಲ. ಇದೀಗ ಮಾಜಿ ಸಚಿವ ಆರ್.ಶಂಕರ್ ಇನ್ನೂ ಮೂರು ದಿನಗಳಲ್ಲಿ ನಾನೂ ಮಂತ್ರಿಯಾ ಅಗೋದಾಗಿ ಹೇಳಿ ಸಚಿವ ಸಂಪುಟದ ವಿಸ್ತರಣೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರನ್ನು ಭೇಟಿ ಮಾಡಿ ಬರುತ್ತಿದ್ದಂತೆ ಪಬ್ಲಿಕ್‍ಟಿವಿ ಜೊತೆ ಮಾತಾನಾಡಿದ ಆರ್ ಶಂಕರ್, ಇನ್ನೂ ಎರಡ್ಮೂರು ದಿನಗಳಲ್ಲಿ ಮಂತ್ರಿ ಸ್ಥಾನ ಕೊಡುವ ಭರವಸೆಯನ್ನು ಮಾನ್ಯ ಮುಖ್ಯಮಂತ್ರಿಗಳು ನೀಡಿದ್ದಾರೆ. ನಾನು ಉಮೇಶ್ ಕತ್ತಿ ಮತ್ತು ಇತರ ಶಾಸಕರು ಉಪಹಾರ ಸೇವಿಸಲು ಬಂದ ಸಂದರ್ಭದಲ್ಲಿ ಉಮೇಶ್ ಕತ್ತಿಯವರು ಲಿಖಿತ ಪತ್ರವನ್ನು ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ. ಈ ಸಂದರ್ಭ ಕೆಲದಿನಗಳಲ್ಲೇ ಮಂತ್ರಿಯಾಗುವ ಸುಳಿವು ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಈ ಹಿಂದೆಯೇ ಸಚಿವ ಸಂಪುಟ ವಿಸ್ತರಣೆ ಮಾಡಿ ಮಂತ್ರಿ ಪಟ್ಟ ಸಿಗಬೇಕಿತ್ತು. ಅದರೆ ಹಲವು ಕಾರಣಗಳಿಂದ ಇಷ್ಟೂ ತಡವಾಗಿದೆ. ಇದೀಗ ಪರಿಸ್ಥಿತಿ ಎಲ್ಲವೂ ತಿಳಿಯಾಗಿದೆ ಮುಖ್ಯ ಮಂತ್ರಿಗಳು ಇಂದು ಸಂಜೆಯೇ ಮಾಡಿದರು ಮಾಡಬಹುದು ಅವರಿಗೆ ಆ ಅಧಿಕಾರ ಇದೆ. ಅವರೂ ಯಾರನ್ನೆಲ್ಲ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆಂದು ಕಾದು ನೋಡಿ ಎಂದರು. ಇದೀಗ ಆರ್ ಶಂಕರ್ ಅವರ ಈ ಹೇಳಿಕೆಯಿಂದ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮತ್ತಷ್ಟೂ ಕುತೂಹಲ ಮನೆಮಾಡುವಂತಾಗಿದೆ.

Comments

Leave a Reply

Your email address will not be published. Required fields are marked *