ಯಾಕೆ ಗುರಾಯಿಸ್ತೀಯಾ ಎಂದು ಪ್ರಶ್ನಿಸಿದ್ದಕ್ಕೆ ಬಿತ್ತು ಗೂಸಾ

ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಸೋಮು ಎಂದು ಗುರುತಿಸಲಾಗಿದೆ. ಹಲ್ಲೆ ಮಾಡಿದ ವ್ಯಕ್ತಿ ಫೈಜಲ್ ಲಪ್ಪಿಯಾಗಿದ್ದಾನೆ. ವಿಜಯಪುರ ನಗರದ ಜಿಲ್ಲಾಪಂಚಾಯತ್ ಕಚೇರಿ ಹತ್ತಿರ ಇರುವ ಸಾಯಿಗ್ರ್ಯಾಂಡ್ ಹೊಟೇಲ್‍ನಲ್ಲಿ ಘಟನೆ ನಡೆದಿದೆ. ಹಲ್ಲೆಯ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಹೊಟೇಲ್‍ನಲ್ಲಿ ಟೀ ಕುಡಿಯುವಾಗ ಸೋಮು ಎಂಬಾತ ಫೈಜಲ್‍ಗೆ ಗುರಾಯಿಸಿದ್ದಾನೆ. ಅದನ್ನು ಸೋಮು ಪ್ರಶ್ನಿಸಿದ್ದಾನೆ. ಅಷ್ಟಕ್ಕೆ ಫೈಜಲ್ ಲಪ್ಪಿ, ಅಫ್ಜಲ್, ಪಡೆಗಂ, ರಿಯಾನ್ ಚಟ್ಟರಕಿ ಎಲ್ಲರೂ ಸೇರಿ ಸೋಮು ಮೇಲೆ ಹಲ್ಲೆ ಮಾಡಿದ್ದಾರೆ.

ಹೋಟೆಲ್ ಒಳಗೆ ಹೊಡೆದಿದ್ದು ಮಾತ್ರವಲ್ಲದೇ, ಹೊರಗೆ ಎಳೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಫೈಜಲ್ ಮತ್ತು ಅವನ ಗ್ಯಾಂಗ್‍ನವರು ಹಲ್ಲೆ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಈ ಬಗ್ಗೆ ದೂರು ದಾಖಲಿಸಲು ಜಲನಗರ ಪೊಲೀಸ್ ಠಾಣೆಗೆ ಸೋಮು ಹೋಗಿದ್ದಾನೆ. ಆದರೆ ಇದುವರೆಗೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಫೈಜಲ್ ನಗರದ ಪ್ರತಿಷ್ಠಿತ ಹೊಟೇಲ್ ಮಾಲೀಕರ ಮಗ ಆಗಿರುವುದರಿಂದ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂದು ಹಲ್ಲೆಗೊಳಗಾದ ಸೋಮು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *