ಪಿಪಿಇ ಕಿಟ್ ಕಳಚಿ ಆಸ್ಪತ್ರೆಯ ಶೌಚಾಲಯದಲ್ಲೇ ಸೋಂಕಿತನೊಂದಿಗೆ ಸಲಿಂಗಿ ನರ್ಸ್ ಸೆಕ್ಸ್!

ಜಕಾರ್ತಾ: ಮಾರಣಾಂತಿಕ ರೋಗ ಕೊರೊನಾ ವಿರುದ್ಧ ಜನರು ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಆದ್ರೆ ಈ ಮಧ್ಯೆ ಇಂಡೋನೇಷ್ಯಾದ ಜಕಾರ್ತಾ ಆಸ್ಪತ್ರೆಯಲ್ಲಿ ಬೇಜವಾಬ್ದಾರಿಯಿಂದ ಸಲಿಂಗಕಾಮಿ ನರ್ಸ್, ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯೊಂದಿಗೆ ಆಸ್ಪತ್ರೆಯ ಶೌಚಾಲಯದಲ್ಲಿಯೇ ಸೆಕ್ಸ್ ಮಾಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅಲ್ಲದೆ ರೋಗಿ ತನ್ನ ಟ್ವಿಟರ್ ಖಾತೆಯಲ್ಲಿ ಲೈಂಗಿಕ ಕ್ರಿಯೆ ನಡೆಸಿರುವ ವಿವರವನ್ನು ಹಂಚಿಕೊಂಡಿದ್ದು, ಇದೀಗ ಈ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.

ಕೋವಿಡ್-19 ಸೋಕಿಂತರಿಗೆಂದೇ ಹಲವು ವಿಶೇಷ ಸೌಲಭ್ಯವನ್ನು ಜಕಾರ್ತಾದ ವಿಸ್ಮಾ ಅಟ್ಲಟ್ ತುರ್ತು ಆಸ್ಪತ್ರೆಯಲ್ಲಿ ನೀಡಲಾಗಿತ್ತು. ಕೊರೊನಾ ಸೋಕಿಂತ ವ್ಯಕ್ತಿ ವಾಟ್ಸಾಪ್‍ನಲ್ಲಿ ನರ್ಸ್ ಜೊತೆ ಜನನಾಂಗ ಮತ್ತು ಲೂಬ್ರಿಕಂಟ್‍ಗಳ ವಿಚಾರವಾಗಿ ಮಾತನಾಡಿರುವ ಸ್ಕ್ರೀನ್ ಶಾಟ್‍ಗಳನ್ನು ಒಳಗೊಂಡಂತೆ ಶೌಚಾಲಯದಲ್ಲಿ ನರ್ಸ್ ಪಿಪಿಇ ಸೂಟ್‍ನಲ್ಲಿ ಕೆಳಗೆ ಮಲಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾನೆ.

ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದಂತೆಯೇ ಈ ವಿಚಾರ ಅಧಿಕಾರಿಗಳ ಗಮನಕ್ಕೆ ಬಂದಿದೆ. ಈ ಕುರಿತಂತೆ ಪ್ರಾದೇಶಿಕ ಮಿಲಿಟರಿ ಕಮಾಂಡ್ ಮತ್ತು ಸಿಒವಿಐಡಿ-19 ತನಿಖೆ ನಡೆಸಿದ್ದು, ಸದ್ಯ ನರ್ಸ್ ಮತ್ತು ರೋಗಿಯ ಗುರುತು ಪತ್ತೆ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ನಂತರ ತನಿಖೆಯಲ್ಲಿ ಇಬ್ಬರು ಆಸ್ಪತ್ರೆಯ ಶೌಚಾಲಯದಲ್ಲಿ ಲೈಂಗಿಕ ಸಂಬಂಧ ಹೊಂದಿದ್ದಾಗಿ ಒಪ್ಪಿಕೊಂಡಿದ್ದಾರೆ.

ನರ್ಸ್‍ಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ನೆಗೆಟಿವ್ ರಿಪೋರ್ಟ್ ಬಂದಿದೆ. ಆದ್ರೆ ರೋಗಿಗೆ ಇನ್ನೂ ಕೊರೊನಾ ಸೋಂಕು ಇರುವ ಹಿನ್ನೆಲೆ ಆತನಿಗೆ ಪಾಸಿಟಿವ್ ರಿಪೋರ್ಟ್ ಬರುವವರೆಗೂ ಆಸ್ಪತ್ರೆಯಲ್ಲಿಯೇ ಪ್ರತ್ಯೇಕ ವಾರ್ಡ್ ನಿರ್ಮಿಸಿ ಚಿಕಿತ್ಸೆ ನೀಡಲಿದ್ದಾರೆ.

Comments

Leave a Reply

Your email address will not be published. Required fields are marked *