ಕಂಗನಾ ಟ್ವೀಟ್ ಸಮರ್ಥನೆ – ಆರ್ ಜೆ ಮೇಲೆ ಹಲ್ಲೆ

– ಅಂಗಡಿಗೆ ನುಗ್ಗಿ ಜೀವ ಬೆದರಿಕೆಯ ಆರೋಪ
– ಪೊಲೀಸ್ ಭದ್ರೆತೆ ಕೇಳಿದ ನಟ

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿಕೆಗಳನ್ನ ಸಮರ್ಥಿಸಿಕೊಂಡಿದ್ದ ನಟ, ಬಿಗ್‍ಬಾಸ್ ಸ್ಪರ್ಧಿ, ಆರ್.ಜೆ. ಪ್ರೀತಂ ಸಿಂಗ್ ಮೇಲೆ ಹಲ್ಲೆ ನಡೆದಿದೆ. ಹಲ್ಲೆಯ ಬಳಿಕ ಪ್ರೀತಂ ಸಿಂಗ್ ದುಷ್ಕರ್ಮಿಗಳ ವಿರುದ್ಧ ದೂರು ಸಲ್ಲಿಸಿ, ಭಧ್ರತೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಕೆಲ ದಿನಗಳಿಂದ ಪ್ರೀತಂ ಸಿಂಗ್ ತಮ್ಮ ಖಾತೆಗಳಲ್ಲಿ ಕಂಗನಾ ಟ್ವೀಟ್ ಸಮರ್ಥಿಸಿಕೊಂಡಿದ್ದರು. ಇದೀಗ ಇದೇ ಕಾರಣಕ್ಕೆ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಪ್ರೀತಂ ಸಿಂಗ್ ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನನ್ನ ಮೇಲೆ ಹಲ್ಲೆ ನಡೆಸಿ, ಸ್ಥಳೀಯ ಕರಣ್ ತುಲಿ ಎಂಬಾತ ಅಂಗಡಿಗೆ ನುಗ್ಗಿ ಪೋಷಕರ ಮುಂದೆಯೇ ಬೆದರಿಕೆ ಹಾಕಿದ್ದಾರೆ ಎಂದು ಪ್ರೀತಂ ಸಿಂಗ್ ಹೇಳಿದ್ದಾರೆ.

https://twitter.com/iampritampyaare/status/1343407037292507137

ಟ್ವೀಟ್ ಬಳಿಕ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಭದ್ರತೆ ನೀಡುವ ಬಗ್ಗೆ ಮಾತನಾಡಿದ್ದಾರೆ. ಆದ್ರೆ ರಾಜ್ಯ ಸರ್ಕಾರ ನನ್ನ ಮನವಿಯನ್ನ ಆಲಿಸಿಲ್ಲ ಎಂದು ಪ್ರೀತಂ ಸಿಂಗ್ ಆರೋಪಿಸಿ ಟ್ವೀಟ್ ಮಾಡಿದ್ದಾರೆ. ಮತ್ತೊಂದು ಟ್ವೀಟ್ ನಲ್ಲಿ ಆರ್.ಎಸ್.ಎಸ್. ಬಳಿಯೂ ಪ್ರೀತಂ ಸಹಾಯ ಕೇಳಿದ್ದಾರೆ.

https://twitter.com/iampritampyaare/status/1343248649363496961

Comments

Leave a Reply

Your email address will not be published. Required fields are marked *