ಬೈಕ್ ಕೀ ನೀಡಲಿಲ್ಲವೆಂದು ಪತ್ನಿ ಎದುರಲ್ಲೇ ಕೆರೆಗೆ ಹಾರಿ ಪತಿ ಆತ್ಮಹತ್ಯೆ!

ಹುಬ್ಬಳ್ಳಿ: ಕೌಟುಂಬಿಕ ಕಲಹ ಹಾಗೂ ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿರುವ ವ್ಯಕ್ತಿಯೋರ್ವ ಪತ್ನಿ ಎದುರಿನಲ್ಲಿಯೇ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ರೋಹಿತ್ ಗೌಡ ಪಾಟೀಲ್ ಎಂದು ಗುರುತಿಸಲಾಗಿದೆ. ಈತ ಹುಬ್ಬಳ್ಳಿಯ ಸಂತೋಷ ನಗರದ ನಿವಾಸಿ.

ರೋಹಿತ್ ಗೌಡ ಪಾಟೀಲ್ ನಿನ್ನೆ ರಾತ್ರಿ ಕುಡಿದು ಬಂದು ಪತ್ನಿ ಜೊತೆ ಜಗಳವಾಡಿದ್ದ. ಆದರೆ ಇಂದು ಮುಂಜಾನೆ ಎಂದಿನಂತೆ ತನ್ನ ಹೋಟೆಲ್‍ಗೆ ಬಂದಿದ್ದಾನೆ. ಈ ವೇಳೆ ಪತ್ನಿಯ ಬಳಿ ಬೈಕ್ ಕೀ ಕೊಡುವಂತೆ ವಾಗ್ವಾದ ನಡೆಸಿದ್ದಾನೆ. ಪತ್ನಿ ಬೈಕ್ ಕೀ ನೀಡದ ಪರಿಣಾಮ ಅಸಮಾಧಾನಗೊಂಡ ರೋಹಿತ್ ಗೌಡ ತನ್ನ ಹೋಟೆಲ್ ಹಿಂಭಾಗದ ಸಂತೋಷ ನಗರದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರೋಹಿತ್ ಗೌಡ ಕೆರೆಗೆ ಜಿಗಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರಿಬ್ಬರು ರಕ್ಷಣೆಗೆ ಮುಂದಾದರು. ಆದರೆ ರೋಹಿತ್ ಗೌಡನನ್ನು ಉಳಿಸಲು ಸಾಧ್ಯವಾಗಲಿಲ್ಲ. ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿ ನೆರವಿನೊಂದಿಗೆ ಮೃತದೇಹವನ್ನು ಹೊರತಗೆಯಲಾಗಿದೆ. ಈ ಘಟನೆ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Comments

Leave a Reply

Your email address will not be published. Required fields are marked *