ನೈಟ್ ಕರ್ಫ್ಯೂ ರೂಲ್ಸ್ ಬ್ರೇಕ್ ಮಾಡಿದ್ರೆ ಕಾನೂನು ಕ್ರಮ: ಕಮಲ್ ಪಂಥ್ ಎಚ್ಚರಿಕೆ

– ಏನೇನು ನಿಯಮ ಪಾಲಿಸ್ಬೇಕು..?

ಬೆಂಗಳೂರು: ಲಂಡನ್‍ನಲ್ಲಿ ರೂಪಾಂತರ ಕೊರೊನಾ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾತ್ರಿ 11 ರಿಂದ 5 ರ ತನಕ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಸಾರ್ವಜನಿಕರು ಯಾವೆಲ್ಲ ರೂಲ್ಸ್ ಪಾಲಿಸಬೇಕು ಎಂದು ಕಮಿಷನರ್ ಕಮಲ್ ಪಂಥ್ ಹೇಳಿದ್ದಾರೆ.

ನೈಟ್ ಕರ್ಫ್ಯೂ ಕುರಿತಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಲವು ಚಟುವಟಿಕೆಗಳನ್ನು ಬಿಟ್ಟು ಬೇರೆಯದಕ್ಕೆ ಅವಕಾಶ ಇರುವುದಿಲ್ಲ. ರಾತ್ರಿ ವೇಳೆ ಇಂಡಸ್ಟ್ರೀಸ್ ಕೆಲಸ ಮಾಡಲು ಅವಕಾಶ ಇರುತ್ತದೆ. ಕಂಪನಿಯ ಐಡಿ ಇದ್ದರೆ ಓಡಾಡಲು ಅವಕಾಶ ನೀಡುತ್ತೇವೆ ಎಂದು ಹೇಳಿದ್ದಾರೆ.

ದೂರದ ಪ್ರಯಾಣಕ್ಕೆ ಯಾವುದೇ ತೊಂದರೆ ಇರೋದಿಲ್ಲ. ದೂರದ ಊರಿಗೆ ಹೋಗುವವರು ಟಿಕೆಟ್ ತೋರಿಸಬೇಕು. ನಾಕಾಬಂದಿಯಲ್ಲಿ ಟಿಕೆಟ್ ಬುಕ್ಕಿಂಗ್ ಚೆಕ್ ಮಾಡಲಾಗುತ್ತದೆ. ಇಂದು ಕ್ರಿಸ್ಮಸ್ ಆಚರಣೆಗೆ ಯಾವುದೇ ಅಡ್ಡಿಯೂ ಇಲ್ಲ ಎಂದು ತಿಳಿಸಿದ್ದಾರೆ.

ಅನಾವಶ್ಯಕವಾಗಿ ಹೊರಗೆ ಬಂದರೆ ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ. ಈ ವೇಳೆ ಕೇಸನ್ನು ಕೂಡ ಬುಕ್ ಮಾಡಲಾಗುತ್ತೆದೆ. ರಾತ್ರಿಯಿಂದ ಬೆಳಗ್ಗೆಯವರೆಗೂ ಚೆಕ್ಕಿಂಗ್ ಇರುತ್ತದೆ. ಎಲ್ಲಾ ಪ್ಲೈ ಓವರ್ ಬಂದ್ ಮಾಡುತ್ತೇವೆ. ಎಲ್ಲಾ ಕಡೆ ನಾಕಾಬಂದಿ ಹಾಕಲಾಗುತ್ತದೆ. ಕೆಎಸ್ ಆರ್ ಪಿ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತೆ ಎಂದರು.

ಹೊಸ ವರ್ಷದ ಆಚರಣೆಗೆ ಯಾವುದೇ ಅವಕಾಶ ಇರೋದಿಲ್ಲ. ಬ್ಯಾರಿಕೇಡ್‍ಗಳನ್ನು ಹಾಕಿ ಚೆಕ್ಕಿಂಗ್ ಮಾಡಲಾಗುತ್ತದೆ. ಬಾರ್ ಅಲ್ಲಿ ಕೆಲಸ ಮಾಡುವವರು ಕೂಡ 11 ಗಂಟೆ ಒಳಗೆ ಕೆಲಸ ಮುಗಿಸಿ ಮನೆಗೆ ಸೇರಬೇಕು. ಕೊರೊನಾ ನೈಟ್ ಕರ್ಫ್ಯೂ ರೂಲ್ಸ್ ಬ್ರೇಕ್ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

Comments

Leave a Reply

Your email address will not be published. Required fields are marked *