ಹೆಚ್‍ಡಿಕೆ ಬಿಟ್ಟ ವಾಗ್ಬಾಣಕ್ಕೆ ಡಿಕೆಶಿ ಕೂಲ್ ಪ್ರತಿಕ್ರಿಯೆ

ಬೆಂಗಳೂರು: ಸಂಪದ್ಭರಿತ ಜಲಸಂಪನ್ಮೂಲ ಸಚಿವ ಸ್ಥಾನ ಹೊಂದಿದ್ದ ಕಾರಣದಿಂದ ಮಾತ್ರ ಡಿಕೆಶಿ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಯತ್ನಿಸಿದ್ರು ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷರು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.

ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಕುಮಾರಸ್ವಾಮಿ ಬಿಟ್ಟ ವಾಗ್ಬಾಣಕ್ಕೆ ಕೂಲ್ ಆಗಿಯೇ ಪ್ರತಿಕ್ರಿಯಿಸಿದ ಡಿಕೆಶಿ ನಾನು ಬಂಡೆನೂ ಅಲ್ಲ, ಮರಳು ಅಲ್ಲ, ಜಲ್ಲಿಯೂ ಅಲ್ಲ. ನನ್ನನ್ನು ಅವರು ಉಪಯೋಗಿಸಿಕೊಂಡಿದ್ದಾರೆ ಬಿಡಿ ಅಂದರು. ಕುಮಾರಸ್ವಾಮಿ ಈಗಲೂ ನನ್ನ ಸ್ನೇಹಿತರು, ಮುಂದೆಯೂ ನನ್ನ ಸ್ನೇಹಿತರು. ನಾನು ದ್ವೇಷ ಮಾಡಲ್ಲ, ಎಲ್ಲ ಬಿಟ್ಟು ಬಿಟ್ಟಿದ್ದೀನಿ ಎನ್ನುವ ಮೂಲಕ ಡಿಕೆಶಿ ಅಚ್ಚರಿ ಮೂಡಿಸಿದರು.

ಸಿಎಂ ಬಿಎಸ್‍ವೈ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆ ಏನೇನು ಇದ್ಯೋ ಗೊತ್ತಿಲ್ಲ. ಬಿಜೆಪಿಯವರು ಈಗ ಯಾವ ರೀತಿ ಜೆಡಿಎಸ್ ನೋಡ್ತಾರೋ ನನಗೆ ಗೊತ್ತಿಲ್ಲ ಎಂದ ಡಿಕೆ ಶಿವಕುಮಾರ್, ಜೆಡಿಎಸ್ ಪಕ್ಷವನ್ನ ನಾನು ಡಿಗ್ರೇಡ್ ಮಾಡಲ್ಲ. ಕುಮಾರಸ್ವಾಮಿ ಅವರು ಏನು ಬೇಕಾದ್ರು ಮಾತಾಡಿಕೊಳ್ಳಲಿ. ಕುಮಾರಸ್ವಾಮಿ ಹೇಳಿಕೆಗೆ ಈಗ ಮಾತಾಡಲ್ಲ, ಟೈಂ ಬರಲಿ ಎಂದು ಡಿಕೆಶಿ ಹೇಳಿದರು.

ಹೆಚ್‍ಡಿಕೆ ಹೇಳಿದ್ದೇನು?: ಮೈತ್ರಿ ಸರ್ಕಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಳಿ ಸಂಪದ್ಭರಿತವಾದ ಖಾತೆ ಅವರ ಬಳಿಯಲ್ಲಿತ್ತು. ಹಾಗಾಗಿ ಸಮ್ಮಿಶ್ರ ಸರ್ಕಾರದ ಉಳಿಸಲು ಮುಂದಾಗಿದ್ದರೆ ಹೊರತು ನನಗಾಗಿ ಅಲ್ಲ. ಕುಮಾರಸ್ವಾಮಿ ಸರ್ಕಾರ ಉಳಿಯಲಿ ಎಂದು ಡಿ.ಕೆ.ಶಿವಕುಮಾರ್ ಎಂದೂ ಪ್ರಯತ್ನಿಸಲಿಲ್ಲ. ಮೈತ್ರಿ ಸರ್ಕಾರದಲ್ಲಿ ಅವರ ಬಳಿ ಸಂಪತ್ತಿನಿಂದ ಕೂಡಿದ ಜಲಸಂಪನ್ಮೂಲ ಖಾತೆ ಅವರ ಬಳಿಯಲಿತ್ತು. ಇಲಾಖೆ ಸಂಪತ್ತು ಭರಿತವಾಗಿತ್ತಾ ಅನ್ನೋದು ಅಧಿಕಾರಿಗಳಿಗೆ ಗೊತ್ತು. ಈ ಇಲಾಖೆಯಿಂದ ರಾಜ್ಯದ ಅಭಿವೃದ್ಧಿ ಆಯ್ತಾ ಅಥವಾ ಯಾರು ಸಂಪದ್ಭರಿತರಾದ್ರೂ ಅನ್ನೋದನ್ನ ಜನರೇ ತೀರ್ಮಾನಿಸಲಿ. ಆ ವಿಷಯದ ಬಗ್ಗೆ ನಾನು ಚರ್ಚೆ ಮಾಡಲ್ಲ ಎಂದು ಕುಮಾರಸ್ವಾಮಿ ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *