ಕಾಲುವೆಗೆ ಬಿದ್ದ 5ರ ಕಂದಮ್ಮನನ್ನು ರಕ್ಷಿಸಲು ಹೋಗಿ ತಂದೆ-ಮಗಳು ದುರ್ಮರಣ

– ಪಾರ್ಕ್ ಬಳಿಯ ಕಾಲುವೆಯಲ್ಲಿ ದುರ್ಘಟನೆ

ಲಕ್ನೋ: ಡ್ಯಾಂ ಬಳಿಯ ಕಾಲುವೆಗೆ ಬಿದ್ದ 5 ವರ್ಷದ ಮಗಳನ್ನು ರಕ್ಷಿಸಲು ಹೋದ ಶಿಕ್ಷಕಿ ಮತ್ತು ಆಕೆಯ ತಂದೆ ಇಬ್ಬರು ಕಾಲುವೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮೃತ ದುರ್ದೈವಿಗಳನ್ನು ನಾಜಿಯಾ ಶರೂನ್(31) ಮತ್ತು ಈಕೆಯ ತಂದೆ ಟಿ.ಪಿ ಹಸ್ಸೆಐನರ್(61) ಎಂದು ಗುರುತಿಸಲಾಗಿದೆ. ನಾಜಿಯಾ ಲಲಿತ್‍ಪುರ್ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿದ್ದಳು. ಈಕೆ ತಂದೆ ತಿರುವನಂತಪುರನ ಕಿಲಿಮನೋರ್ ಪುಲಿಮಥ್ ನಿವಾಸಿಯಾಗಿದ್ದರು.

ನಾಜಿಯಾ ತನ್ನ ಮಗಳು ಹಾಗೂ ತಂದೆ ಮೂವರು ಸೇರಿ ಲಲಿತ್‍ಪುರ್‍ನಲ್ಲಿರುವ ಮತಾತಿಲ ಡ್ಯಾಂ ಬಳಿಯಿರುವ ಪಾರ್ಕಿಗೆ ಹೋಗಿದ್ದಾರೆ. ಈ ವೇಳೆ ಮಗು ಕೊಳದ ಬಳಿ ಆಟವಾಡುತ್ತಿತ್ತು. ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ಇದನ್ನು ಗಮನಿಸಿದ ತಂದೆ- ಮಗಳು ಇಬ್ಬರು ಕಾಲುವೆಗೆ ಹಾರಿದ್ದಾರೆ. ಆದರೆ ಕಾಲುವೆಯಲ್ಲಿ ಬಿದ್ದ ಮಗುವನ್ನು ಅಲ್ಲೇ ಹತ್ತಿರದಲ್ಲಿ ಇದ್ದ ಸ್ಥಳೀಯರು ಬಂದು ರಕ್ಷಿಸಿದ್ದಾರೆ. ಇನ್ನು ತಂದೆ-ಮಗಳನ್ನು ರಕ್ಷಸುವಷ್ಟರಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ.

ಮುಳುಗು ತಜ್ಞರ ಸಹಾಯದಿಂದ ತಂದೆ- ಮಗಳ ಮೃತದೇಹವನ್ನು ನೀರಿನಿಂದ ಹೊರತೆಗಲಾಗಿದೆ. ಇಬ್ಬರ ಮೃತದೇಹವನ್ನು ಉತ್ತರ ಪ್ರದೇಶದಿಂದ ಕೇರಳದ ಪುಲಿಮತ್‍ಗೆ ತಂದು ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ.

Comments

Leave a Reply

Your email address will not be published. Required fields are marked *