ಕೌನ್ ಬನೇಗಾ ಕರೋಡ್‍ಪತಿಯಲ್ಲಿ 50 ಲಕ್ಷ ರೂ. ಗೆದ್ದ ಉಡುಪಿ ಬಾಲಕ!

ಉಡುಪಿ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್‍ಪತಿಯಲ್ಲಿ 50 ಲಕ್ಷ ಗೆದ್ದ ಉಡುಪಿ ಬಾಲಕ 1 ಕೋಟಿಗೆ ತಲುಪುವ ಪ್ರಶ್ನೆಗೆ ಉತ್ತರ ಕೊಡುವಲ್ಲಿ ಜಸ್ಟ್ ಮಿಸ್ ಆಗಿದ್ದಾನೆ.

ಕೌನ್ ಬನೇಗಾ ಕರೋಡ್‍ಪತಿ ಹಾಟ್ ಸೀಟಿಗೇರಿದ್ದ ಉಡುಪಿಯ ಅನುಮಯ(12) 50 ಲಕ್ಷ ರೂ.ಪಾಯಿ ಬಹುಮಾನವಾಗಿ ಪಡೆದಿದ್ದಾನೆ. ಒಂದು ಕೋಟಿ ರೂಪಾಯಿ ಬಹುಮಾನದ 12 ನೇ ಪ್ರಶ್ನಗೆ ಆಟದಿಂದ ಅನಮಯ ಹಿಂದೆ ಸರಿದಿದ್ದಾನೆ.

 

ಅನುಮಯ ನೀಡಿರುವ ಸ್ಮಾರ್ಟ್ ಉತ್ತರಗಳಿಗೆ ಬಾಲಿವುಡ್ ಬಾದ್ ಶಾ ಅಮಿತಾಬ್ ಬಚ್ಚನ್ ಫಿದಾ ಆಗಿದ್ದರು. ಅಲ್ಲದೇ ಅಲ್ಲಿ ನೆರೆದಿದ್ದ ಪ್ರೇಕ್ಷಕರು ಕೂಡ ಬಾಲಕನ ಸ್ಮಾರ್ಟ್‍ನೆಸ್‍ಗೆ ತಲೆ ಬಾಗಿದ್ದಾರೆ. ನೋಡಲು ಕ್ಯೂಟ್ ಆಗಿದ್ದ ಅನಮಯ ದಿವಾಕರ್, ಕೇಳಿದ ಪ್ರಶ್ನೆಗೆ ಉತ್ತರ ನೀಡುವಲ್ಲಿ ಅಷ್ಟೇ ಚೂಟಿಯಾಗಿದ್ದನು.

ದೇಶದ ಸ್ಮಾರ್ಟ್ ವಿದ್ಯಾರ್ಥಿಗಳಿಗೆ ಬಿಗ್‍ಬಾಸ್ 12 ನೇ ಆವೃತ್ತಿಯಲ್ಲಿ ಅವಕಾಶ ನೀಡಲಾಗಿತ್ತು. ಆಯ್ಕೆ ಹಂತದಲ್ಲಿ ಗೆದ್ದು ಹಾಟ್‍ಸೀಟ್‍ಗೆ ಅನಮಯ ಬಂದಿದ್ದನು. ಕೊನೆಯ ಪ್ರಶ್ನೆಗೆ ಉತ್ತರ ನೀಡಿದ್ದರೆ ಒಂದು ಕೋಟಿ ರೂಪಾಯಿ ಉಡುಪಿ ಮೂಲದ ಅನಮಯ ಪಾಲಾಗುತ್ತಿತ್ತು.

ಕೌನ್ ಬನೇಗಾ ಕರೋಡ್‍ಪತಿ ಸ್ಟೂಡೆಂಟ್ ಸ್ಪೇಷಲ್‍ನ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿದ ಅನಮಯ ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‍ನ 7ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. 12 ನೇ ಪ್ರಶ್ನೆಯವರೆಗೂ ಬಹಳ ಜಾಣ್ಮೆಯಿಂದ ಉತ್ತರ ಕೊಟ್ಟ ಅನಮಯ 12 ನೇ ಪ್ರಶ್ನೆಗೆ ಉತ್ತರ ಕೊಡಲು ಸಾಧ್ಯವಾಗದೆ 1 ಕೋಟಿ ರೂ. ಕೈ ತಪ್ಪಿತು. ಹೀಗಾಗಿ 50 ಲಕ್ಷ ರೂಪಾಯಿಗಳನ್ನು ತನ್ನದಾಗಿಸಿಕೊಂಡಿದ್ದಾನೆ.

ಒಂದು ಕೋಟಿ ರೂಪಾಯಿ ಮೊತ್ತದ 12ನೇ ಪ್ರಶ್ನೆಯಾದ ಮಹಾಭಾರತ ಯುದ್ಧದಲ್ಲಿ ಬದುಕುಳಿದು ಅಶ್ವಮೇಧ ಯಾಗದಲ್ಲಿ ಪಾಲ್ಗೊಂಡ ಕರ್ಣನ ಪುತ್ರ ಯಾರು ಎಂಬ ಪ್ರಶ್ನೆ ಕೇಳಲಾಯಿತು. (ಉತ್ತರ- ವೃಷಕೇತು) ಒಂದು ಲೈಫ್ ಲೈನ್ ಬಳಸಿ 50:50 ಅವಕಾಶ ಬಳಸಿದರೂ ಉತ್ತರ ಸಿಗದೆ ಕೊನೆಗೆ ಸ್ಪರ್ಧೆಯಿಂದ ಅನಮಯ ಹಿಂದೆ ಸರಿದು 50 ಲಕ್ಷ ರೂ.ಮೊತ್ತಕ್ಕೆ ತೃಪ್ತಿಪಡಬೇಕಾಯಿತು. ಉತ್ತರ ನೀಡಿದ್ದರೆ ಒಂದು ಕೋಟಿ ಅನಮಯ ಪಾಲಾಗುತ್ತಿತ್ತು.

Comments

Leave a Reply

Your email address will not be published. Required fields are marked *