ಪ್ರೀತಿಸಿ ಮದ್ವೆಯಾದ ಅಕ್ಕ, ತಂಗಿ – ನಮ್ಮನ್ನು ಆಡಿಕೊಳ್ಳೋರಿಗೆ ನಾಚಿಕೆ ಇಲ್ಲ ಅಂದ್ರು

– ಐದು ವರ್ಷದ ಪ್ರೀತಿಗೆ ಮದುವೆಯ ಮುದ್ರೆ

ರಾಂಚಿ: ಜಾರ್ಖಂಡ್ ರಾಜಧಾನಿ ರಾಂಚಿಯಿಂದ 160 ಕಿಲೋ ಮೀಟರ್ ದೂರದಲ್ಲಿರುವ ಕೊಡರಮಾ ಜಿಲ್ಲೆಯಲ್ಲಿ ಯುವತಿಯರಿಬ್ಬರು ಮದುವೆ ಆಗಿದ್ದಾರೆ. ಮದುವೆಯಾದ ಜೋಡಿ ಸಂಬಂಧದಲ್ಲಿ ಸೋದರಿಯರಾಗಿದ್ದು, ಕಳೆದ ಐದು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.

24 ಮತ್ತು 20 ವಯಸ್ಸಿನ ಯುವತಿಯರು ನವೆಂಬರ್ 8, 2020ರಂದು ಕೊಡರಮಾ ಬಳಿ ಶಿವನ ದೇಗುಲದಲ್ಲಿ ಮದುವೆ ಆಗಿದ್ದಾರೆ. ಮೂಲತಃ ಝುಮರಿ ತಿಲೈಯಾ ನಿವಾಸಿಗಳಾದ ಜೋಡಿ ಬೇರೆ ಊರಿನಲ್ಲಿ ಸುಂದರ ಬದುಕು ಕಟ್ಟಿಕೊಳ್ಳಲು ಸಿದ್ಧರಾಗಿದ್ದಾರೆ. ಗ್ರಾಮ ಮತ್ತು ಕುಟುಂಬಸ್ಥರ ಟೀಕೆಗಳಿಂದ ದೂರ ಹೋಗಲು ಜೋಡಿ ಪ್ಲಾನ್ ಮಾಡಿಕೊಂಡಿದೆ. ಓರ್ವ ಯುವತಿ ಪದವಿಧರೆಯಾಗಿದ್ದು, ಮತ್ತೋರ್ವಳು 12ನೇ ತರಗತಿವರೆಗೆ ಓದಿದ್ದಾಳೆ. ಇದನ್ನೂ ಓದಿ: ಸಂಪ್ರದಾಯದಂತೆ ‘ಗೇ ಲವ್ವರ್’ ಜೊತೆ ಮದುವೆಯಾದ ಭಾರತದ ಎಂಜಿನಿಯರ್

ಮಾಧ್ಯಮವೊಂದರ ಜೊತೆ ಮಾತನಾಡಿರುವ ಜೋಡಿ, ನಮ್ಮ ಸಂಬಂಧದ ಬಗ್ಗೆ ಮಾತನಾಡಿಕೊಳ್ಳುವ ಜನಕ್ಕೆ ನಾಚಿಕೆ ಇಲ್ಲ ಎಂದು ನಾವು ಭಾವಿಸುತ್ತೇವೆ. ನಮ್ಮಿಂದ ಯಾರಿಗೂ ತೊಂದರೆ ಅನುಭವಸೋದು ಬೇಡ ಅಂತ ದೂರದಲ್ಲಿ ನೆಲೆ ಕಂಡುಕೊಳ್ಳಲು ತೀರ್ಮಾನಿಸಿದ್ದೇವೆ. ಎಷ್ಟೇ ಕಷ್ಟಗಳು ಬಂದರೂ ನಾವಿಬ್ಬರು ಜೊತೆಯಾಗಿ ಬಾಳುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್ ಚೆಲುವೆಯರ ಪ್ರೇಮ ಕಥೆ

ಕುಟುಂಬಸ್ಥರಿಗೆ ತಮ್ಮ ಸಂಬಂಧದ ಬಗ್ಗೆ ತಿಳಿಸದೇ ಇಬ್ಬರು ಕೆಲ ದಿನ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಜೀವನ ನಡೆಸಿದ್ದರು. ನವೆಂಬರ್ ಪರಪ್ಪರ ಒಪ್ಪಿಗೆ ಮೇರೆಗೆ ಮದುವೆ ಆಗಿದ್ದಾರೆ. ಇಬ್ಬರು ನ್ಯೂಯಾರ್ಕ್ ನಲ್ಲಿರುವ ಅಂಜಲಿ ಚಕ್ರಾ ಮತ್ತು ಸುಂದಾಸ್ ಮಲಿಕ್ ಜೋಡಿಯಿಂದ ಪ್ರೇರಿತರಾಗಿರೋದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಮದ್ವೆಯಾಗಿ ಗ್ರಾಮಕ್ಕೆ ಬಂದ ಇಬ್ಬರು ಯುವತಿಯರು

ಯಾರು ಈ ಅಂಜಲಿ , ಸುಂದಾಸ್?: ಪಾಕಿಸ್ತಾನ ಮೂಲದ ಸುಂದಾಸ್ ಮಲಿಕ್ ಮತ್ತು ಭಾರತ ಮೂಲದ ಅಂಜಲಿ ಚಕ್ರಾ ಇಬ್ಬರು ಯುವತಿಯರಿಬ್ಬರ ರೊಮ್ಯಾಂಟಿಕ್ ಫೋಟೋಗಳನ್ನು ಫೋಟೋಗ್ರಾಫರ್ ಸರೋವರ್ ಎಂಬವರು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡು, ಇದು ನ್ಯೂಯಾರ್ಕ್ ಲವ್ ಸ್ಟೋರಿ ಎಂದು ಬರೆದುಕೊಂಡಿದ್ದರು. ತದನಂತರ ಫೋಟೋಗಳು ಸೋ ಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು. ಸುಂದಾಸ್ ಮತ್ತು ಅಂಜಲಿ ಛತ್ರಿಯ ಕೆಳಗೆ ನಿಂತು ಪೋಸ್ ಕೊಟ್ಟಿದ್ದು, ಒಂದು ಫೋಟೋದಲ್ಲಿ ಇಬ್ಬರು ತುಟಿಗೆ ತುಟಿ ಸೇರಿಸಿದ್ದರು.  ಇದನ್ನೂ ಓದಿ: ಯುವಕರೊಂದಿಗೆ ಸೆಕ್ಸ್ ಮಾಡುವಾಗ ಪತ್ನಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿರಾಯ!

Comments

Leave a Reply

Your email address will not be published. Required fields are marked *