ಬಾಡಿ ಚೆಕ್‌ ಮಾಡಲು ಬಂದ ರಾಹುಲ್‌ಗೆ ಪಂಚ್‌ ಕೊಟ್ಟ ಫಿಂಚ್‌

ಸಿಡ್ನಿ: ಟೀಂ ಇಂಡಿಯಾದ ವಿಕೆಟ್‌ ಕೀಪರ್‌ ಕೆಎಲ್‌ ರಾಹುಲ್‌ ಅವರಿಗೆ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಆರನ್‌ ಫಿಂಚ್‌ ಅವರು ಕೈಯಿಂದ ಪಂಚ್‌ ಮಾಡಿದ್ದಾರೆ.

ಎರಡನೇ ಪಂದ್ಯದಲ್ಲಿ ನವದೀಪ್‌ ಸೈನಿ 12ನೇ ಓವರ್‌ ಬೌಲ್‌ ಮಾಡುತ್ತಿದ್ದರು. ಗಂಟೆಗೆ 146 ಕಿ.ಮೀ ವೇಗದಲ್ಲಿ ಎಸೆದ 5ನೇ ಎಸೆತವನ್ನು ಹೊಡೆಯಲು ಫಿಂಚ್‌ ಪ್ರಯತ್ನ ಪಟ್ಟಿದ್ದರು. ಆದರೆ ಬಾಲ್‌ ಬ್ಯಾಟ್‌ಗೆ ಸಿಗದೇ ಹೊಟ್ಟೆಗೆ ಬಡಿಯಿತು. ಫುಲ್‌ ಟಾಸ್‌ ಆಗಿದ್ದ ಕಾರಣ ಅಂಪೈರ್‌ ನೋಬಾಲ್‌ ನೀಡಿದರು.

ಬಳಿಕ ಫಿಂಚ್‌ ಮತ್ತು ವಾರ್ನರ್‌ ಮಾತನಾಡುತ್ತಿದ್ದರು. ಈ ವೇಳೆ ಹತ್ತಿರ ಬಂದ ರಾಹುಲ್‌ ಗ್ಲೌಸ್‌ ನೋಡಿ ಎಡಕೈಯಲ್ಲಿ ದೇಹ ಮುಟ್ಟಲು ಯತ್ನಿಸಿದಾಗ ಫಿಂಚ್‌ ಎರಡು ಕೈಯಲ್ಲಿ ರಾಹುಲ್‌ ಹೊಟ್ಟೆಗೆ ಮೆಲ್ಲಗೆ ಕೈಯಿಂದ ಪಂಚ್‌ ಮಾಡಿದ್ದಾರೆ. ನಂತರ ಇಬ್ಬರು ಆಟಗಾರರು ನಕ್ಕಿದ್ದಾರೆ.

ಈ ಹಿಂದೆ ಆಸ್ಟ್ರೇಲಿಯಾದ ಆಟಗಾರರು ಎದುರಾಳಿ ತಂಡದ ಆಟಗಾರರನ್ನು ಕಿಚಾಯಿಸುತ್ತಿದ್ದರು. ಆದರೆ ಐಪಿಎಲ್‌ನಿಂದ ಆಟಗಾರರ ವರ್ತನೆಯೇ ಬದಲಾಗಿದ್ದು ಎಲ್ಲರೂ ಸ್ನೇಹಿತರಂತೆ ಆಡುತ್ತಿದ್ದಾರೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆರಿಸಿಕೊಂಡ ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು 389 ರನ್‌ ಗಳಿಸಿದೆ.

ಸ್ಮಿತ್‌ 104 ರನ್‌ (64 ಎಸೆತ, 14 ಬೌಂಡರಿ, 2 ಸಿಕ್ಸರ್‌), ಡೇವಿಡ್‌ ವಾರ್ನರ್‌ 83 ರನ್‌(77 ಎಸೆತ, 7ಬೌಂಡರಿ, 3 ಸಿಕ್ಸರ್‌) ಲಬುಶೇನ್‌ 70 ರನ್‌(61 ಎಸೆತ, 5 ಬೌಂಡರಿ) ಗ್ಲೇನ್‌ ಮ್ಯಾಕ್ಸ್‌ವೆಲ್‌ 63 ರನ್‌(29 ಎಸೆತ, 4 ಬೌಂಡರಿ, 4 ಸಿಕ್ಸರ್‌), ನಾಯಕ ಫಿಂಚ್‌ 60 ರನ್‌(69 ಎಸೆತ, 6 ಬೌಂಡರಿ, 1 ಸಿಕ್ಸರ್‌) ಹೊಡೆದರು.

ಸೈನಿ 7ಓವರ್‌ ಮಾಡಿ 70 ರನ್‌ ನೀಡಿ ದುಬಾರಿಯಾದರು. 10 ಓವರ್‌ ಎಸೆದ ಬುಮ್ರಾ 79 ರನ್‌, ಶಮಿ 73 ರನ್‌ ನೀಡಿದರು. ಚಹಲ್‌ 9 ಓವರ್‌ ಎಸೆದು 71 ರನ್‌ ನೀಡಿದರು.

https://twitter.com/Gajal_Dalmia/status/1332908132717142019

 

Comments

Leave a Reply

Your email address will not be published. Required fields are marked *