ಕುರ್ಚಿಗೆ ಕಟ್ಟಿ, ಚಿತ್ರಹಿಂಸೆ ನೀಡಿ ದೇವಾಲಯದ ಆವರಣದಲ್ಲೇ ಟೆಕ್ಕಿಯ ಸಜೀವ ದಹನ!

– ಬೆಂಗಳೂರಲ್ಲಿ ಟೆಕ್ಕಿಯಾಗಿ ಕೆಲಸ ಮಾಡ್ತಿದ್ದ ಪವನ್
– ಸಂಬಂಧಿಗಳಿಂದಲೇ ಕೃತ್ಯ

ಹೈದ್ರಾಬಾದ್: ಸೋದರ ಮಾವನನ್ನು ಕೊಲ್ಲಲು ಮಾಟಮಂತ್ರ ಮಾಡಿದ್ದಾನೆ ಎಂಬ ಅನುಮಾನದ ಮೇಲೆ ಟೆಕ್ಕಿಯನ್ನು ಕುರ್ಚಿಗೆ ಕಟ್ಟಿ ದೇವಾಲಯದಲ್ಲಿ ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಮಲ್ಲಯಾಲ್ ಬ್ಲಾಕ್‍ನ ಬಲ್ವಂತಪುರ ಗ್ರಾಮದ ಹೊರವಲಯದಲ್ಲಿರುವ ಮಂಜುನಾಥ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಪಾಗಿಲ್ಲಾ ಪವನ್ ಕುಮಾರ್(38) ಎಂದು ಗುರುತಿಸಲಾಗಿದೆ. ಇವರು ಅಲ್ವಾಲ್ ನಿವಾಸಿ. ಬೆಂಗಳೂರಿನಲ್ಲಿ ಸಾಫ್ಟ್‍ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪವನ್ ತನ್ನ ಪತ್ನಿ ಕೃಷ್ಣವೇಣಿಯೊಂದಿಗೆ ಬಲ್ವಂತಪುರಕ್ಕೆ ಸೋದರ ಮಾವನ ಮನೆಗೆ ಹೋಗಿದ್ದರು. ಈ ವೇಳೆ ಕೃತ್ಯ ನಡೆದಿದೆ.

ಪವನ್ ಕೊಲೆಗೆ ಕಾರಣವೇನು?
ಪವನ್ ಕುಮಾರ್ ಸೋದರ ಮಾವ ಜಗನ್ ಸುಮಾರು 12 ದಿನಗಳ ಹಿಂದೆ ಹೃದಯಾಘಾತದಿಂದ ಮರಣ ಹೊಂದಿದ್ದನು. ಸೋದರ ಮಾವನನ್ನು ಕೊಲ್ಲಲು ಪವನ್ ಮಾಟಮಂತ್ರ ಮಾಡಿದ್ದಾನೆ ಎಂಬ ಅನುಮಾನದ ಮೇಲೆ ಸ್ವಂತ ಸಂಬಂಧಿಗಳು ಸೇರಿ ಕುರ್ಚಿಗೆ ಕಟ್ಟಿ ಚಿತ್ರ ಹಿಂಸೆ ನೀಡಿದ್ದಾರೆ. ಅಲ್ಲದೆ ದೇವಾಲಯದ ಆವರಣದಲ್ಲಿಯೇ ಜೀವಂತವಾಗಿ ಸುಟ್ಟು ಹಾಕಿದ್ದಾರೆ.

ಯಾರೋ ನೋವಿನಿಂದ ಕೂಗುವುದನ್ನು ಕೇಳಿದ ಸ್ಥಳೀಯರು ದೇವಾಲಯಕ್ಕೆ ಓಡಿ ಬಂದಿದ್ದಾರೆ. ದೇವಸ್ಥಾನದ ಆವರಣದಲ್ಲಿ ಇರುವ ಕೋಣೆಗೆ ಬೀಗ ಹಾಕಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಅನುಮಾನದಿಂದ ಬಾಗಿಲು ಒಡೆದು ನೋಡಿದಾಗ ಸುಟ್ಟ ದೇಹವೊಂದು ಕುರ್ಚಿಯ ಮೇಲೆ ಇರುವುದನ್ನು ನೋಡಿ ಸ್ಥಳೀಯರು ಭಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ಪತಿಯನ್ನು ಕೋಣೆಯೊಳಗೆ ಹಾಕಿ ಬೀಗ ಹಾಕಿ ಬೆಂಕಿ ಹಚ್ಚಲಾಯಿತ್ತು. ನನ್ನ ಪತಿಯನ್ನು ಕುರ್ಚಿಗೆ ಕಟ್ಟಿ, ಅವನ ಮೇಲೆ ಪೆಟ್ರೋಲ್ ಸುರಿದು ಅವರ ಅಣ್ಣ ಬೆಂಕಿ ಹಚ್ಚಿದ್ದಾರೆ. ತನ್ನ ಸಹೋದರ ಮತ್ತು ಗಂಡನಿಗೆ ಕೆಲವು ಭಿನ್ನಾಭಿಪ್ರಾಯಗಳಿವೆ ಎಂದು ಕುಮಾರ್ ಪತ್ನಿ ಕೃಷ್ಣವೇಣಿ ಪೊಲೀಸರಿಗೆ ತಿಳಿಸಿದ್ದಾರೆ.

ಟೆಕ್ಕಿಗೆ ಬೆಂಕಿ ಹಚ್ಚಿ ಕೊಂದಿರುವ ವ್ಯಕ್ತಿ ಪತ್ತೆ ಆಗಿಲ್ಲ. ಕುಮಾರ್ ಜಗನ್ ಮೇಲೆ ಮಾಟ-ಮಂತ್ರ ಅಭ್ಯಾಸ ಮಾಡುತ್ತಾನೆ ಮತ್ತು ಅದೇ ಅವನ ಸಾವಿಗೆ ಕಾರಣವಾಗಬಹುದು ಎಂದು ಆರೋಪಿಸಿದ್ದಾರೆ. ಎಂದು ಮಲ್ಯಾಲ್ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ನಾಗರಾಜು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *