ಅಂಬಿ ಪುಣ್ಯಸ್ಮರಣೆ – ಮಿಸ್ ಯೂ ಅಣ್ಣ ಅಂದ್ರು ಪ್ರತಾಪ್ ಸಿಂಹ

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ ಎರಡನೇ ಪುಣ್ಯಸ್ಮರಣೆ ಹಿನ್ನೆಲೆ ಸಂಸದ ಪ್ರತಾಪ್ ಸಿಂಹ ಸಹ ಟ್ವಿಟ್ಟರ್ ನಲ್ಲಿ ಮಿಸ್ ಯೂ ಅಣ್ಣ ಎಂದು ಬರೆದುಕೊಂಡಿದ್ದಾರೆ.

ಎರಡನೇ ಪುಣ್ಯಸ್ಮರಣೆ ಹಿನ್ನೆಲೆ ಕಲಾವಿದರು, ಗಣ್ಯರು ಸೇರಿದಂತೆ ಅಭಿಮಾನಿಗಳು ಅಂಬರೀಶ್ ಅವರ ಜೊತೆಗಿನ ಒಡನಾಟ ನೆನಪು ಮಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ ಸಂಸದ ಪ್ರತಾಪ್ ಸಿಂಹ ಟ್ವಿಟ್ಟರ್ ನಲ್ಲಿ ಅಂಬರೀಶ್ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.

ಪ್ರತಾಪ್ ಸಿಂಹ ಟ್ವೀಟ್: ಎಲ್ಲರಿಂದಲೂ ಪ್ರೀತಿಸಲ್ಪಡುವುದಕ್ಕೂ, ಎಲ್ಲರೂ ಭಯಪಡುವುದಕ್ಕೂ ಬಹಳ ವ್ಯತ್ಯಾಸವಿದೆ. ಎಲ್ಲರ ಪ್ರೀತಿ, ಅಭಿಮಾನ ಗಳಿಸುವಂಥದ್ದಾಗಿತ್ತು ಅಂಬರೀಶಣ್ಣನ ವ್ಯಕ್ತಿತ್ವ. ಎಲ್ಲರಿಗೂ ಒಬ್ಬರೋ, ಇಬ್ಬರೋ ಅಥವಾ ನಾಲ್ಕೈದು ಜನರೋ ಆಪ್ತ ಸ್ನೇಹಿತರಿರುತ್ತಾರೆ. ಆದರೆ ನೂರಾರು ಜನ ಆಪ್ತ ಸ್ನೇಹಿತರಿದ್ದಿದ್ದು, ಭೇಟಿಯಾದವರಿಗೆಲ್ಲ ನನ್ನ ಆಪ್ತರು ಎಂಬ ಫೀಲಿಂಗ್. ಶಾಶ್ವತವಾದ ನೆನಪಿನ ಬುತ್ತಿ ಕೊಡುತ್ತಿದ್ದಿದ್ದು ಅಂಬರೀಶಣ್ಣ ಮಾತ್ರ ಮಿಸ್ ಯು ಅಣ್ಣ.

ಸುಮಲತಾ ಅಂಬರೀಶ್, ಪುತ್ರ ಅಭಿಷೇಕ್, ದರ್ಶನ್ ಹಾಗೂ ಇತರ ಗಣ್ಯರು ಅಂಬಿ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಭಿಷೇಕ್, ಅರ್ಜುನ್ ಸರ್ಜಾ ಅವರು ಮನೆಗೆ ಬಂದಿದ್ದ ಸಮಯದಲ್ಲಿ ಸುಮಾರು 4 ಗಂಟೆಗಳ ಕಾಲ ಅಪ್ಪನ ಬಗ್ಗೆ ಚರ್ಚೆ ಮಾಡಿದ್ವಿ. ನಿನ್ನೆ ಕೂಡ ನಾನು ಹಾಗೂ ದರ್ಶನ್ ಅಣ್ಣ ಇಬ್ಬರೇ ಮನೆಯಲ್ಲಿ ಕುಳಿತುಕೊಂಡು ಹಳೆಯ ನೆನಪುಗಳನ್ನು ಹಂಚಿಕೊಳ್ತಿದ್ವಿ. ಹೀಗೆ ಅಪ್ಪ ತುಂಬಾ ನೆನಪಾಗ್ತಾರೆ ಎಂದರು. ಇದನ್ನೂ ಓದಿ: ಅಂಬರೀಶ್ ಮಗನಾಗಿ ಹುಟ್ಟಿದ್ದು ನನ್ನ ಪುಣ್ಯ: ಅಭಿಷೇಕ್

ಅಪ್ಪ ನನಗೆ ಪ್ರತಿದಿನ ನೆನಪಾಗ್ತಾರೆ. ಅದರಲ್ಲೂ ಪುಣ್ಯತಿಥಿ ಹತ್ತಿರ ಆಗ್ತಿದ್ದಂತೆ ಅವರ ಬಗ್ಗೆಯೇ ಚರ್ಚೆ ಶುರುವಾಗುತ್ತೆ. ಇಂದು ಅವರ ಹೆಸರಲ್ಲಿ ಒಳ್ಳೊಳ್ಳೆಯ ಕಾರ್ಯಗಳು ನಡೆಯುತ್ತವೆ. ಅದರಲ್ಲಿ ನಾವು ಸುಖ- ಸಂತೋಷವನ್ನು ಹುಡುಕಬೇಕು ಎಂದು ತಿಳಿಸಿದರು

Comments

Leave a Reply

Your email address will not be published. Required fields are marked *