ರಾಜಕೀಯ ದೃಷ್ಟಿಯಿಂದ ಮರಾಠಾ ನಿಗಮ ಸ್ಥಾಪಿಸಿಲ್ಲ: ರೇಣುಕಾಚಾರ್ಯ

ದಾವಣಗೆರೆ: ರಾಜಕೀಯ, ಚುನಾವಣೆ ದೃಷ್ಟಿಯಿಂದ ಮರಾಠ ಅಭಿವೃದ್ದಿ ನಿಗಮ ಸ್ಥಾಪಿಸಿಲ್ಲ. ಸಮುದಾಯದ ಅಭಿವೃದ್ಧಿಯ ದೃಷ್ಟಿಯಿಂದ ನಿಗಮ ಸ್ಥಾಪಿಸಲಾಗಿದೆ ಎಂದು ಶಾಸಕ ರೇಣುಕಾಚಾರ್ಯ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮರಾಠ ಭಾಷೆಗೆ ಆದ್ಯತೆ ಕೊಟ್ಟಿಲ್ಲ. ಸಮಾಜದವರ ಏಳಿಗೆಗೆ, ಅಭಿವೃದ್ದಿಗೆ ನಿಗಮ ಮಾಡಿದೆ. ನನ್ನ ಕ್ಷೇತ್ರದಲ್ಲಿ ಸಹ ಸಾಕಷ್ಟು ಜನ ಮರಾಠರು ಇದ್ದಾರೆ. ಬಂಜಾರ ನಿಗಮ, ಅಂಬೇಡ್ಕರ್ ಇದೆ. ಅದರಂತೆ ಮರಾಠ ನಿಗಮ ಸ್ಥಾಪಿಸಲಾಗಿದೆ. ಇದಕ್ಕೆ ಭೆರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಮುಖಂಡರು ಅಕ್ರಮ ಕೃತ್ಯ ಎಸಗಿದವರಿಗೆ ಬೆಂಬಲ ನೀಡುತ್ತಾರೆ. ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಚ್ಚಲು ಕಾಂಗ್ರೆಸ್ ನವರೇ ಪ್ರಚೋದನೆ ನೀಡಿದ್ದಾರೆ. ಕಾಂಗ್ರೆಸ್ ಮುಖಂಡರು ಸಂಪತ್ ರಾಜ್ ರಕ್ಷಣೆ ಮಾಡಿದ್ದಾರೆ. ಇದು ಅವರಿಗೆ ಮುಳ್ಳಾಗುತ್ತೆ. ಈ ಹಿಂದೆ ಸಿದ್ದರಾಮಯ್ಯರನ್ನು ಮರೀಗೌಡರ ಬಚಾವ್ ಮಾಡಿದ್ದರು. ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂಪತ್ ರಾಜ್‍ನನ್ನು ಬಚಾವ್ ಮಾಡಲು ಹೊರಟಿದ್ದಾರೆ. ಈ ಮೂಲಕ ಮೌಲ್ಯವಿಲ್ಲದ ರಾಜಕಾರಣ ಮಾಡುತ್ತಿದ್ದಾರೆ. ನೀಚ ಕೃತ್ಯಕ್ಕೆ ಬೆಂಬಲ ಕೊಟ್ಟರೆ ಮುಂದೆ ಅವರೇ ಅನುಭವಿಸುತ್ತಾರೆ ಎಂದು ಪರೋಕ್ಷವಾಗಿ ಡಿಕೆಶಿಗೆ ಟಾಂಗ್ ನೀಡಿದರು.

ಚುನಾವಣೆಗೆ ಸ್ಪರ್ಧೆ ಮಾಡಿ, ಜನರಿಂದ ಆಯ್ಕೆಯಾದವರಿಗೆ ಸಚಿವ ಸ್ಥಾನ ಕೊಡಬೇಕು ಎಂಬುದು ನನ್ನ ಅಭಿಪ್ರಾಯ. ಒಂದೆರಡು ಸ್ಥಾನ ಇರುತ್ತೆ, ಆದರೆ ಇದೇ ಪುನಾರಾವರ್ತನೆ ಆಗಬಾರದು. ಸಿಎಂ ದೆಹಲಿ ಪ್ರವಾಸ ಇದೆ. ಸಮತೋಲನ ಸಚಿವ ಸಂಪುಟ ಆಗುವ ಕುರಿತು ಅಚಲ ವಿಶ್ವಾಸ ಇದೆ. ಒಬ್ಬರಿಗೆ ಕೊಡಿ ಎಂದು ನಾನು ಸಹಿ ಮಾಡಿಲ್ಲ, ಮಧ್ಯ ಕರ್ನಾಟಕಕ್ಕೆ, ಅವಕಾಶ ಕೊಡಿ ಎಂದಿದ್ದೇವೆ. ಸಿಎಂಗೆ ಒಂದೇ ಹೆಸರು ಸೂಚಿಸಿಲ್ಲ. ಯಾರಿಗೆ ಕೊಟ್ಟರು ವಿಶ್ವಾಸದಿಂದ ಜಿಲ್ಲೆ ಅಭಿವೃದ್ದಿ ಮಾಡುತ್ತೇವೆ. ವಿಜಯೇಂದ್ರ ಅವರು ನಾನೇ ಕೆ.ಆರ್.ಪೇಟೆ, ಶಿರಾ ಗೆಲ್ಲಿಸಿದ್ದೇನೆ ಎಂದಿಲ್ಲ. ಮುಖಂಡರು, ಸಂಘಟನೆ, ವಿಜಯೇಂದ್ರ ಕಾರ್ಯರೂಪದಿಂದ ಗೆದ್ದಿದ್ದೇವೆ. ಎಲ್ಲ ಶಕ್ತಿ ಕೃಢೀಕರಣದಿಂದ ಜಯ ಆಗಿದೆ ಎಂದರು.

Comments

Leave a Reply

Your email address will not be published. Required fields are marked *