ಮೆರವಣಿಗೆ ಮೂಲಕ ಹಾಸನಾಂಬೆ ದೇವಿ ಒಡವೆ ದೇವಾಲಯಕ್ಕೆ ರವಾನೆ

ಹಾಸನ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಾಸನಾಂಬೆ ದೇವಾಲಯದ ಬಾಗಿಲನ್ನು ನವೆಂಬರ್ 5 ರಂದು ಮಧ್ಯಾಹ್ನ ತೆರೆಯಲಾಗುತ್ತದೆ. ಇಂದು ನಗರದ ಜಿಲ್ಲಾ ಖಜಾನೆಯಿಂದ ಒಡವೆಯನ್ನು ದೇವಾಲಯಕ್ಕೆ ತರಲಾಯಿತು.

ಜಿಲ್ಲಾಧಿಕಾರಿ ಆರ್. ಗಿರೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತರಾಜರಾಮ್, ಹಾಗೂ ತಹಸೀಲ್ದಾರ್ ಶಿವಶಂಕರಪ್ಪ ಸಮ್ಮುಖದಲ್ಲಿ ಮೊದಲು ಖಜಾನೆಯಿಂದ ಒಡವೆ ಪೆಟ್ಟಿಗೆಯನ್ನು ತಂದು ಹೂವಿನಿಂದ ಅಲಂಕೃತಗೊಂಡಿದ್ದ ಅಡ್ಡ ಪಲ್ಲಕ್ಕಿ ಮೇಲೆ ಇಟ್ಟು ಪೂಜೆ ಸಲ್ಲಿಸಿದರು. ನಂತರ ಬಿಗಿ ಪೊಲೀಸ್ ಬಂದೋಬಸ್ತ್‍ನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಒಡವೆಯನ್ನು ಹಾಸನಾಂಬೆ ದೇವಸ್ಥಾನಕ್ಕೆ ತರಲಾಯಿತು. ಈ ಬಾರಿ ಹಾಸನಾಂಬೆ ದೇವಾಲಯದ ಬಾಗಿಲನ್ನು ನವೆಂಬರ್ 5 ರಿಂದ ನವೆಂಬರ್ 16ರ ವರೆಗೂ ತೆರೆಯಲಾಗುತ್ತಿದೆ.

ಈ ಬಾರಿ ಕೊರೊನ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಮೊದಲ ದಿನ ಆಹ್ವಾನಿತ ವಿಐಪಿಗಳಿಗೆ ಮಾತ್ರ ದೇವಸ್ಥಾನದ ಒಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯೆ ಯಾರಿಗೂ ದೇವಸ್ಥಾನದ ಒಳ ಪ್ರವೇಶವನ್ನು ನಿಷೇಧಿಸಲಾಗಿದೆ. ಕೊನೆಯ ದಿವಸದಂದು ಮದ್ಯಾಹ್ನ ಬಾಗಿಲು ಹಾಕಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ದೇವಿ ದರ್ಶನವನ್ನು ಪ್ರೊಜೆಕ್ಟರ್ ಮೂಲಕ ಹಾಗೂ ಟಿವಿ ಮಾಧ್ಯಮಗಳಲ್ಲಿ ನೋಡಲು ಅವಕಾಶ ಮಾಡಿ ಕೊಡಲಾಗುವುದು.

Comments

Leave a Reply

Your email address will not be published. Required fields are marked *