ಎಣ್ಣೆ ಗಲಾಟೆಯಲ್ಲಿ ಮೂರು ಬೈಕ್ ಭಸ್ಮ

ಉಡುಪಿ: ಕುಡಿದ ಮತ್ತಿನಲ್ಲಿ ಎರಡು ತಂಡಗಳು ಕೈ ಕೈ ಮಿಲಾಯಿಸಿಕೊಂಡಿದ್ದು, ಜಗಳ ಅತಿರೇಕಕ್ಕೆ ಹೋಗಿ ಮೂರು ಬೈಕ್ ಗಳು ಭಸ್ಮವಾಗಿದೆ.

ಉಡುಪಿ ತಾಲೂಕಿನ ಕೊಳಲಗಿರಿಯಲ್ಲಿ ಈ ಘಟನೆ ಸಂಭವಿಸಿದ್ದು, ಕೊಳಲಗಿರಿ ಸರ್ಕಾರಿ ಶಾಲೆ ಬಳಿ ಕಳೆದ ರಾತ್ರಿ ಜಗಳ ನಡೆದಿತ್ತು. ಉಪ್ಪೂರಿನ ಸೂರಜ್, ಅಲ್ವಿನ್, ಮೋಹಿತ್, ಬಾಲಕೃಷ್ಣ, ಮಣಿಕಂಠ ಹಾಗೂ ಪಪ್ಪು ಮದ್ಯಪಾನ ಮಾಡಿ ಜಗಳವಾಡಿದ್ದಾರೆ. ಮಾತಿಗೆ ಮಾತು ಬೆಳೆದು ಹೊಡೆದಾಟ ಆರಂಭವಾಗಿದೆ. ಗುಂಪಲ್ಲಿದ್ದ ದುಷ್ಕರ್ಮಿ ಬೈಕಿಗೆ ಬೆಂಕಿ ಹಚ್ಚಿದ್ದಾನೆ.

ಗಲಾಟೆ ತಾರಕಕ್ಕೇರಿದ್ದು, ಪಕ್ಕದಲ್ಲಿದ್ದ ಎರಡು ಬೈಕ್ ಗೆ ಬೆಂಕಿ ಇಟ್ಟುಕೊಂಡಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಸ್ಥಳೀಯ ಮೂಲಗಳು ಮಾಹಿತಿ ನೀಡಿವೆ. ಬ್ರಹ್ಮಾವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಘಟನೆಗೆ ಸಂಬಂಧಿಸಿದಂತೆ ಐವರನ್ನು ವಶಕ್ಕೆ ಪಡೆದಿದ್ದಾರೆ. ಬೆಂಕಿ ಹಚ್ಚಿದ ಜಗಳಗಂಟರು ಪೊಲೀಸ್ ವಶದಲ್ಲಿದ್ದಾರೆ.

Comments

Leave a Reply

Your email address will not be published. Required fields are marked *