ಕಮಲ್‍ನಾಥ್ ತಾಯಿ, ಸೋದರಿ ಬಂಗಾಳದ ‘ಐಟಂ’-ಇಮರ್ತಿ ದೇವಿ

ಭೋಪಾಲ್: ಮಾಜಿ ಸಿಎಂ ಕಮಲ್‍ನಾಥ್ ತಾಯಿ ಮತ್ತು ಸೋದರಿ ಬಂಗಾಳದ ಐಟಂ ಎಂದು ಬಿಜೆಪಿ ನಾಯಕಿ ಇಮರ್ತಿ ದೇವಿ ಅವರ ಹೇಳಿಕೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾಂಗ್ರೆಸ್ ಸ್ಟಾರ್ ಪ್ರಚಾರಕ ಆಚಾರ್ಯ ಪ್ರಮೋದ್ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಇಮರ್ತಿ ದೇವಿ ಹೇಳಿದ್ದೇನು?: ಅವನು ಬಂಗಾಳದ ವ್ಯಕ್ತಿ. ಸಿಎಂ ಆಗಲು ಮಧ್ಯಪ್ರದೇಶಕ್ಕೆ ಬಂದಿದ್ದಾನೆ. ಹೇಗೆ ಮಾತನಾಡಬೇಕು ಎಂದು ಸಭ್ಯತೆ ಇಲ್ಲದ ವ್ಯಕ್ತಿ ಬಗ್ಗೆ ಏನು ಹೇಳಬೇಕು. ಸಿಎಂ ಸ್ಥಾನದಿಂದ ಇಳಿದ ಬಳಿಕ ಕಮಲ್‍ನಾಥ್ ಹುಚ್ಚನಾಗಿ ಮಧ್ಯಪ್ರದೇಶದ ತುಂಬಾ ಓಡಾಡುತ್ತಿದ್ದಾನೆ. ಹುಚ್ಚನಾಗಿದ್ದರಿಂದ ಅವನು ಏನು ಬೇಕಾದರೂ ಹೇಳಬಹುದು. ಅವನು ನಮ್ಮ ರಾಜ್ಯದವನಲ್ಲ. ಅವನ ತಾಯಿ ಮತ್ತು ಸೋದರಿ ಬಂಗಾಳದ ಐಟಂ ಆಗಿರಬಹುದು ನಮಗೆ ಗೊತ್ತಿಲ್ಲ.

ಕಮಲ್‍ನಾಥ್ ಹೇಳಿಕೆ: ಕಾಂಗ್ರೆಸ್ ನಿಂದ ಗ್ವಾಲಿಯರ್ ನ ದಬ್ರಾ ಕ್ಷೇತ್ರದಿಂದ ಮೂರು ಬಾರಿ ಶಾಸಕಿಯಾಗಿ ಆಯ್ಕೆಯಾಗಿರುವ ಇಮರ್ತಿ ದೇವಿ ಸದ್ಯ ಶಿವರಾಜ್ ಸಿಂಗ್ ಚೌಹಾಣ್ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆಯಾಗಿದ್ದಾರೆ. ಈಗ ಹಾಲಿ ಕ್ಷೇತ್ರದಿಂದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ.

ದಬ್ರಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ರಾಜೆ ಅವರ ಪರ ಮತ ಯಾಚನೆ ಮಾಡುತ್ತಾ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕಮಲ್ ನಾಥ್, ನಮ್ಮ ಅಭ್ಯರ್ಥಿ ಸುರೇಶ್ ರಾಜೆ ಸರಳ ವ್ಯಕ್ತಿ ಆಗಿದ್ದು ಆಕೆಯಂಥಲ್ಲ. ಆಕೆಯ ಹೆಸರೇನು? ನಿಮಗೆಲ್ಲರಿಗೂ ಆಕೆಯ ಬಗ್ಗೆ ನನಗಿಂತ ಚೆನ್ನಾಗಿ ಗೊತ್ತಿದೆ. ನೀವು ನನಗೆ ಮೊದಲೇ ಎಚ್ಚರಿಕೆ ನೀಡಬೇಕಾಗಿತ್ತು. ಎಂತಹ `ಐಟಂ’ ಎಂದು ಕುಹಕವಾಡಿದ್ದರು.

https://twitter.com/ShobhaBJP/status/1317839445576404998

ಕಮಲ್‍ನಾಥ್ ಹೇಳಿಕೆಗೆ ಇರ್ಮತಿ ಕಣ್ಣೀರು: ಬಂಗಾಳದಿಂದ ಬಂದ ಈ ವ್ಯಕ್ತಿಗಳಿಗೆ ಮಧ್ಯ ಪ್ರದೇಶದಲ್ಲಿರುವ ಹಕ್ಕು ಇಲ್ಲ. ಮಧ್ಯ ಪ್ರದೇಶದಲ್ಲಿ ಮಹಿಳೆಯರನ್ನ ಅತ್ಯಂತ ಗೌರವದಿಂದ ಕಾಣಲಾಗುತ್ತಿದೆ. ಮಹಿಳೆಯರನ್ನ ಮನೆಯ ಲಕ್ಷ್ಮಿ ಎಂದು ಕರೆಯಲಾಗು ತ್ತದೆ. ಇಂದು ಕಮಲ್‍ನಾಥ್ ಮಧ್ಯಪ್ರದೇಶ ಎಲ್ಲ ಮಹಿಳೆಯರನ್ನ ಕಮಲ್‍ನಾಥ್ ನಿಂದಿಸಿದ್ದಾರೆ. ಕಾಂಗ್ರೆಸ್ ನಲ್ಲಿರುವ ಇಂತಹ ಹೊಲಸನ್ನು ಕೈ ಅಧಿನಾಯಕಿ ಸೋನಿಯಾಗಾಂಧಿ ತೆಗೆದು ಹಾಕಬೇಕು. ನೀವು ಒಬ್ಬರು ಮಹಿಳೆ, ಮಗಳು, ತಾಯಿ. ಹಾಗಾಗಿ ಕಮಲ್‍ನಾಥ್ ಅವರನ್ನ ನಿಮ್ಮ ಪಕ್ಷದಿಂದ ಕೈ ಬಿಡಿ ಎಂದು ಮನವಿ ಮಾಡಿಕೊಂಡಿದ್ದರು.

ಕಮಲ್‍ನಾಥ್ ಹೇಳಿಕೆಗೆ ರಾಹುಲ್ ಗಾಂಧಿ ಬೇಸರ: ಇನ್ನು ಕಮಲ್‍ನಾಥ್ ಹೇಳಿಕೆಗೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಹ ಬೇಸರ ವ್ಯಕ್ತಪಡಿಸಿದ್ದರು. ಕಮಲ್‍ನಾಥ್ ನಮ್ಮ ಪಕ್ಷದವರೇ ಆಗಿದ್ದರೂ, ಓರ್ವ ಮಹಿಳೆಗೆ ಬಳಸಿದ ಪದ ಸರಿಯಾಗಿರಲಿಲ್ಲ. ಅವರು ಯಾರೇ ಆಗಿದ್ದರೂ ಇಂತಹ ಹೇಳಿಕೆಯನ್ನ ನಾನು ಪ್ರಶಂಸಿಸುವದಿಲ್ಲ. ಕಮಲ್‍ನಾಥ್ ಹೇಳಿಕೆ ದುರದೃಷ್ಟಕರ ಎಂದು ಅಸಮಾಧಾನ ಹೊರ ಹಾಕಿದ್ದರು.

Comments

Leave a Reply

Your email address will not be published. Required fields are marked *