25ರ ಸಂಭ್ರಮದಲ್ಲಿ ಡಿಡಿಎಲ್‍ಜೆ

ಮುಂಬೈ: ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದ ‘ದಿಲ್‍ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಸಿನಿಮಾ 25 ವರ್ಷವನ್ನ ಪೂರ್ಣಗೊಳಿಸಿದೆ. ಚಿತ್ರದಲ್ಲಿ ನಟಿಸಿದ ಕಲಾವಿದರು ಸೇರಿದಂತೆ ತಂತ್ರಜ್ಞರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಬಾಲಿವುಡ್ ಬಾದ್‍ಶಾ ಶಾರೂಖ್ ಖಾನ್ ಮತ್ತು ಕಾಜೋಲ್ ನಟನೆಯ ಡಿಡಿಎಲ್‍ಜೆ ಇಂದಿಗೂ ಎವರ್ ಗ್ರೀನ್.

ಆರಂಭದಲ್ಲಿ ನೆಗೆಟಿವ್ ಶೇಡ್ ಗಳಲ್ಲಿ ಮಿಂಚಿದ್ದ ಶಾರೂಖ್ ಖಾನ್‍ಗೆ ಡಿಡಿಎಲ್‍ಜೆ ಲವರ್ ಬಾಯ್ ಇಮೇಜ್ ನೀಡಿತ್ತು. 90ರ ದಶಕದಲ್ಲಿ ಅದಾಗಲೇ ಸ್ಟಾರ್ ಪಟ್ಟಕ್ಕೇರಿದ್ದ ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ನಡುವೆ ಶಾರೂಖ್ ಖಾನ್ ದೊಡ್ಡ ಹಿಟ್ ನಿರೀಕ್ಷೆಯಲ್ಲಿದ್ದರು. ಡಿಡಿಎಲ್‍ಜೆ ಶಾರೂಖ್ ಕಲ್ಪನೆಗೂ ಊಹಿಸಲಾಗದ ಯಶಸ್ಸನ್ನು ಕಿಂಗ್‍ಖಾನ್‍ಗೆ ನೀಡಿತ್ತು. ಅದರ ಜೊತೆಗೆ ಕಾಜೋಲ್ ತಾವು ಏನು ಎಂಬುದನ್ನ ಡಿಡಿಎಲ್‍ಜೆ ಮೂಲಕ ಸಾಬೀತು ಮಾಡುವ ಮೂಲಕ ಬಾಲಿವುಡ್ ಅಂಗಳದ ಟಾಪ್ ನಟಿಯರ ಪಟ್ಟಕ್ಕೇರಿದರು.

ಇಂದಿನ ಯುವಕರಿಗೆ ಡಿಡಿಎಲ್‍ಜೆ ಪ್ರೇಮಕಥೆ ಇಷ್ಟವಾಗುತ್ತೆ. ಸಿನಿಮಾ ನೋಡುತ್ತಾ ಅವರೊಳಗಿರುವ ಪ್ರೇಮದ ಅಲೆ ಅಪ್ಪಳಿಸುತ್ತೆ. ರಾಜ್ ಮತ್ತು ಸಿಮ್ರನ್ ಪಾತ್ರಗಳಿಗೆ ಜೀವ ತುಂಬಿದ್ದ ಶಾರೂಖ್ ಮತ್ತು ಕಾಜೋಲ್ ನೋಡುಗರಿಗೆ ಹತ್ತಿರವಾಗಿದ್ದರು. ಇಂದಿಗೂ ಚಿತ್ರದ ಹಾಡುಗಳು ಹಚ್ಚ ಹಸಿರಾಗಿವೆ. ಸಿನಿಮಾದಲ್ಲಿ ಶಾರೂಖ್ ಹೇಳುವ ಡೈಲಾಗ್ ಗಳು ಸೋಶಿಯಲ್ ಮೀಡಿಯಾದಲ್ಲಿ ಇಂದಿಗೂ ಸದ್ದು ಮಾಡುತ್ತಿವೆ.

ಮೊದಲಿಗೆ ನಿರ್ದೇಶಕ ಆದಿತ್ಯ ಚೋಪ್ರಾ ಕಥೆ ಹೇಳಿದಾಗ ಸಿನಿಮಾದಲ್ಲಿ ನಟಿಸಲು ಶಾರೂಖ್ ಖಾನ್ ಒಪ್ಪಿರಲಿಲ್ಲವಂತೆ. ಪ್ರೀತಿಸಿದ ಯುವತಿಯನ್ನ ಓಡಿಸಿ ಹೋಗಿಕೊಂಡು ಹೋಗುವದರಿಂದ ಮತ್ತೆ ನೆಗೆಟಿವ್ ಶೇಡ್ ಆಗಬಹುದು ಎಂದು ಶಾರೂಖ್ ಸಿನಿಮಾದಲ್ಲಿ ನಟಿಸಲು ಹಿಂಜರಿದ್ದರು. ಶಾರೂಖ್ ಖಾನ್ ಇದಕ್ಕೆ ಸೂಕ್ತ ಎಂದು ನಟ ನಿರ್ಧರಿಸಿದ ಆದಿತ್ಯ ಚೋಪ್ರಾ ಪದೇ ಪದೇ ಕಥೆ ಹೇಳಿದ್ದರು. ಕೊನೆಗೆ ಶಾರೂಖ್ ಒಪ್ಪದಿದ್ರೆ ಸೈಫ್ ಅಲಿ ಖಾನ್ ಆ ಪಾತ್ರಕ್ಕೆ ತರಲು ಆದಿತ್ಯ ಚೋಪ್ರಾ ಮುಂದಾಗಿದ್ದರು ಎಂದು ವರದಿಯಾಗಿದೆ. ಕೊನೆಗೆ ಶಾರೂಖ್ ಪಾತ್ರ ಒಪ್ಪಿ ನಟಿಸಿದ್ದು ಸಿನಿ ಇತಿಹಾಸದ ಪುಟಗಳಲ್ಲಿ ಸೇರಿದೆ.

ಈ ಹಿಂದೆ ಸಂದರ್ಶನದಲ್ಲಿ ಸಿನಿಮಾ ಬಗ್ಗೆ ಮಾತನಾಡಿದ್ದ ಕಾಜೋಲ್, ಕಥೆ ಕೇಳಿದಾಗ ಸಿಮ್ರನ್ ಬೋರಿಂಗ್ ಹುಡುಗಿ ಅನ್ನಿಸಿದಳು. ನಂತರ ಪ್ರತಿಯೊಬ್ಬರಲ್ಲಿಯೂ ಒಬ್ಬ ಸಿಮ್ರನ್ ಇರುತ್ತಾಳೆ. ಸಿಮ್ರನ್ ಹೃದಯದ ಮಾತು ಕೇಳುವ ಹುಡಗಿಯಾಗಿದ್ದು, ಸದಾ ಸತ್ಯ ಹೇಳುತ್ತಿದ್ದರಿಂದ ಆಕೆ ನನಗೆ ಇಷ್ಟವಾದಳು ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *