ಬಿಎಂಟಿಸಿಯ ಬಹು ವರ್ಷಗಳ ಕನಸಿನ ಯೋಜನೆ ನನಸು

ಬೆಂಗಳೂರು: ಬಿಎಂಟಿಸಿಯ ಬಹು ವರ್ಷಗಳ ಕನಸಿನ ಯೋಜನೆ ನನಸಾಗುತ್ತಿದೆ. ಸಿಲಿಕಾನ್ ಸಿಟಿಗೆ 300 ಐಷಾರಾಮಿ ಎಲೆಕ್ಟ್ರಿಕ್ ಬಸ್‍ಗಳು ಬರಲಿವೆ.

300 ಐಷಾರಾಮಿ ಎಲೆಕ್ಟ್ರಿಕ್ ಬಸ್‍ಗಳನ್ನು ಗುತ್ತಿಗೆ ಪಡೆದು ಬಿಎಂಟಿಸಿ ಓಡಿಸಲಿದೆ. ಪ್ರಯೋಗಿಕವಾಗಿ ಬಿಎಂಟಿಸಿಯ ಡಿಪೋ ನಂಬರ್ 7ಕ್ಕೆ ಮೊದಲ ಬಸ್ ಬಂದಿದೆ. 15 ದಿನದ ಬಳಿಕ ಪ್ರಯಾಣಿಕರ ಪ್ರಯಾಣಕ್ಕೆ ಅವಕಾಶ ಸಿಗಲಿದೆ. ವಾಯು ಮಾಲಿನ್ಯ ಪ್ರಮಾಣವನ್ನು ಈ ಬಸ್‍ಗಳು ಕಡಿಮೆ ಮಾಡಲಿದ್ದು, 2 ಗಂಟೆ ಚಾರ್ಜ್ ಮಾಡಿದರೆ 120 ಕಿಲೋಮೀಟರ್ ಓಡಿಸಬಹುದಾಗಿದೆ.

ತೆಲಂಗಾಣ ಮೂಲದ ಒಲೆಕ್ಟ್ರಾ (olectra) ಕಂಪನಿಗೆ ಈ ಬಸ್ ಸೇರಿದೆ. ಸದ್ಯ ತಾಂತ್ರಿಕ ದೋಷಗಳನ್ನ ಪತ್ತೆ ಹಚ್ಚಲು ಹಾಗೂ ಸಾಮರ್ಥ್ಯ ತಿಳಿಯಲು ಬಸ್ಸಿನ ಒಳಗೆ ಕ್ಯಾನ್‍ಗಳ ಮೂಲಕ ಗರಿಷ್ಠ ಭಾರವನ್ನ ಹಾಕಿ 15 ದಿನ ಸಂಚಾರ ಮಾಡಲಾಗುತ್ತದೆ. ಅನಂತರ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗುತ್ತದೆ.

ಒಂದು ಎಲೆಕ್ಟ್ರಿಕ್ ಬಸ್ಸಿನ ಬೆಲೆ ಸುಮಾರು 2 ರಿಂದ 2.80 ಕೋಟಿ ರೂಪಾಯಿ ಆಗಿದೆ. ಈ ಹಿಂದಿನ ಸರ್ಕಾರಗಳು ಬೆಂಗಳೂರಿನ ರಸ್ತೆಗಳಲ್ಲಿ ಎಲೆಕ್ಟ್ರಿಕ್ ಬಸ್‍ಗಳನ್ನು ಓಡಿಸಲು ವಿಫಲವಾಗಿದ್ದವು. ಆದರೆ ಇದೀಗ ಮೊದಲ ಬಾರಿಗೆ ಬೆಂಗಳೂರಿಗೆ ಎಲೆಕ್ಟ್ರಿಕ್ ಬಸ್ ಬಂದಿದೆ.

ಎಲೆಕ್ಟ್ರಿಕ್ ಬಸ್ಸಿನ ಪ್ರಯೋಜನಗಳು:
* ವಾಯು ಮಾಲಿನ್ಯ ಪ್ರಮಾಣವನ್ನು ಎಲೆಕ್ಟ್ರಿಕ್ ಬಸ್‍ಗಳು ಕಡಿಮೆ ಮಾಡುತ್ತವೆ
* ಪ್ರಮುಖವಾಗಿ ಇಂಧನ ಉಳಿತಾಯವಾಗುತ್ತದೆ.
* ಈ ಬಸ್ಸನ್ನು 2 ಗಂಟೆ ಚಾರ್ಜ್ ಮಾಡಿದರೆ 120 ಕಿಮೀ ಸಂಚಾರ ಮಾಡಬಹುದು.

Comments

Leave a Reply

Your email address will not be published. Required fields are marked *