ಬಿಜೆಪಿ ಪರಿಷತ್ ಸದಸ್ಯ ರವಿಕುಮಾರ್‌ಗೆ ಕೊರೊನಾ ಸೋಂಕು ದೃಢ

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಟ್ವೀಟ್ ಮಾಡುವ ಮೂಲಕ ಸ್ವತಃ ಅವರೇ ಖಚಿತಪಡಿಸಿದ್ದು, ಇಂದು ಕೊರೊನಾ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ಯಾವುದೇ ರೋಗ ಲಕ್ಷಣಗಳು ಇಲ್ಲ. ವೈದ್ಯರ ಸಲಹೆಯಂತೆ ಹೋಮ್ ಕ್ವಾರಂಟೈನ್ ಆಗಿದ್ದೇನೆ. ಚಿಕಿತ್ಸೆ ಕಾರಣ ನಿಮ್ಮ ಕರೆಗಳಿಗೆ ಸ್ಪಂದಿಸಲಾಗುತ್ತಿಲ್ಲ, ಕ್ಷಮೆ ಇರಲಿ. ನನ್ನ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಚಿಕಿತ್ಸೆಗೆ ಒಳಪಡಬೇಕೆಂದು ವಿನಂತಿಸುತ್ತೇನೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಉಪಚುನಾವಣೆ ಹಿನ್ನೆಲೆ ಶುಕ್ರವಾರವಷ್ಟೆ ಶಿರಾ ಕ್ಷೇತ್ರಕ್ಕೆ ತೆರಳಿದ್ದ ರವಿ ಕುಮಾರ್, ವಿವಿಧೆಡೆ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಸಭೆಯೊಂದರಲ್ಲಿ ಒಬ್ಬರಿಗೊಬ್ಬರ ಕೈ ಹಿಡಿದು ನಿಲ್ಲುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದರು. ಆದರೆ ಇಂದು ಅವರಿಗೆ ಕೊರೊನಾ ಸೋಂಕು ದೃಢವಾಗಿದೆ.

Comments

Leave a Reply

Your email address will not be published. Required fields are marked *