ಅಕ್ಕ ರಿಯಾಗೆ ಜಾಮೀನು ಸಿಕ್ಕರೂ ಶೌವಿಕ್ ಬೇಲ್ ರಿಜೆಕ್ಟ್

-ರಿಯಾ ಸೇರಿದಂತೆ ಮೂವರಿಗೆ ಬೇಲ್
-ರಿಯಾಗೆ ಕೋರ್ಟ್ ಹಾಕಿದ ಷರತ್ತುಗಳೇನು?

ಮುಂಬೈ: ಒಂದು ತಿಂಗಳ ಬಳಿಕ ನಟಿ ರಿಯಾ ಚಕ್ರವರ್ತಿಗೆ ಜಾಮೀನು ಸಿಕ್ಕಿದ್ದು, ಇಂದು ಸಂಜೆಯೊಳಗಾಗಿ ಜೈಲಿನಿಂದ ಹೊರ ಬರುವ ಸಾಧ್ಯತೆಗಳಿವೆ. ಆದ್ರೆ ರಿಯಾ ಬಂಧನಕ್ಕೂ ಎರಡು ದಿನ ಮುಂಚೆಯೇ ಜೈಲು ಸೇರಿದ್ದ ಸೋದರ ಶೌವಿಕ್ ಚಕ್ರವರ್ತಿಯ ಜಾಮೀನು ಅರ್ಜಿಯನ್ನ ಬಾಂಬೈ ಹೈಕೋರ್ಟ್ ವಜಾಗೊಳಿಸಿದೆ.

ಸೆಪ್ಟೆಂಬರ್ 8ರಂದು ಎನ್‍ಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದ ವೇಳೆ ಅಧಿಕಾರಿಗಳು ರಿಯಾ ಚಕ್ರವರ್ತಿಯನ್ನ ಬಂಧಿಸಿ, ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ನ್ಯಾಯಾಲಯದ ಬಳಿ ಮನವಿ ಮಾಡಿಕೊಂಡಿದ್ದರು. ಎನ್‍ಸಿಬಿ ಮನವಿಗೆ ಸ್ಪಂದಿಸಿದ್ದ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಇತ್ತ ರಿಯಾ ಚಕ್ರವರ್ತಿ ವಕೀಲರ ಮೂಲಕ ಜಾಮೀನಿಗಾಗಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು.

ಮಂಗಳವಾರ ಎನ್‍ಡಿಪಿಎಸ್ ವಿಶೇಷ ನ್ಯಾಯಾಲಯ ಅಕ್ಟೋಬರ್ 20ವರೆಗೆ ನ್ಯಾಯಾಂಗ ಬಂಧನವನ್ನ ವಿಸ್ತರಣೆ ಮಾಡಿತ್ತು. ಕಳೆದ ಕೆಲ ದಿನಗಳಿಂದ ಬಾಂಬೆ ಹೈಕೋರ್ಟ್ ನಲ್ಲಿ ರಿಯಾ ಜಾಮೀನು ಅರ್ಜಿ ಸಂಬಂಧ ವಾದ-ಪ್ರತಿವಾದ ನಡೆದಿತ್ತು. ಸುಮಾರು 8 ಗಂಟೆಗೂ ಅಧಿಕ ಕಾಲ ನ್ಯಾಯಾಲಯ ವಾದ-ಪ್ರತಿವಾದವನ್ನ ಆಲಿಸಿ ಇಂದು ರಿಯಾ, ಸ್ಯಾಮುಯೆಲ್ ಮಿರಂಡಾ, ದೀಪೇಶ್ ಸಾವಂತ್ ಗೆ ಜಾಮೀನು ನೀಡಿದೆ. ರಿಯಾ ಸೋದರ ಶೌವಿಕ್ ಮತ್ತು ಡ್ರಗ್ ಪೆಡ್ಲರ್ ಅಬ್ದುಲ್ ಬಸಿತ್ ಸೇರಿದಂತೆ ಇನ್ನುಳಿದ ಆರೋಪಿಗಳ ಅರ್ಜಿಯನ್ನ ವಜಾಗೊಳಿಸಲಾಗಿದೆ.ಇದನ್ನೂ ಓದಿ: ಸಾರಾ, ರಿಯಾ, ಸುಶಾಂತ್ ಸೇರಿ ತೋಟದ ಮನೆಯಲ್ಲಿ ಪಾರ್ಟಿ ಮಾಡ್ತಿದ್ರು: ಮ್ಯಾನೇಜರ್- ಗಾಂಜಾ, ಡ್ರಿಂಕ್ಸ್ ಎಲ್ಲ ಬರುತ್ತಿತ್ತು

ಶೌವಿಕ್ ಅರ್ಜಿ ವಜಾಗೊಂಡಿದ್ಯಾಕೆ?: ಡ್ರಗ್ಸ್ ಖರೀದಿ ಸಂಬಂಧ ಪೆಡ್ಲರ್ ಗಳ ಜೊತೆ ಶೌವಿಕ್ ನಡೆಸಿದ ಸಂಭಾಷಣೆಯ ತನಿಖೆ ಇನ್ನು ಮುಂದುವರಿದೆ. ಶೌವಿಕ್ ಹಲವರ ಜೊತೆ ಡ್ರಗ್ಸ್ ಖರೀದಿಸಿರುವ ಬಗ್ಗೆ ಎನ್‍ಸಿಬಿಗೆ ಮಹತ್ವದ ಸಾಕ್ಷ್ಯ ಲಭ್ಯವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆ ಶೌವಿಕ್ ಚಕ್ರವರ್ತಿ ಜಾಮೀನು ಅರ್ಜಿ ವಜಾಗೊಂಡಿದೆ ಎಂದು ವರದಿಯಾಗಿದೆ. . ಇದನ್ನೂ ಓದಿ: ಸುಶಾಂತ್ ತನ್ನ ಹೆಸರಿನಲ್ಲಾಗ್ತಿರುವ ಸರ್ಕಸ್ ನೋಡಿ ನಗುತ್ತಿರಬಹುದು: ಸೋನು ಸೂದ್

ಷರತ್ತುಬದ್ಧ ಜಾಮೀನು: ರಿಯಾ ಒಂದು ಲಕ್ಷ ರೂ. ಬಾಂಡ್ ನ್ನು ಒಂದು ತಿಂಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ರಿಯಾ ತಮ್ಮ ಪಾಸ್‍ಪೋರ್ಟ್ ಪೊಲೀಸರ ವಶಕ್ಕೆ ನೀಡಬೇಕು ಮತ್ತು ಮುಂಬೈನಿಂದ ಹೊರ ಹೋಗಲು ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕು. ಪ್ರತಿ 10 ದಿನಕ್ಕೊಮ್ಮೆ ಪೊಲೀಸ್ ಠಾಣೆಗೆ ಆಗಮಿಸಿ ಹಾಜರಾತಿ ದಾಖಲಿಸಬೇಕೆಂದು ನ್ಯಾಯಾಲಯ ಸೂಚಿಸಿದೆ. ದನ್ನೂ ಓದಿ: ಸುಶಾಂತ್ ರೀತಿಯಲ್ಲಿ ಮತ್ತೋರ್ವ ನಟನ ಅನುಮಾನಾಸ್ಪದ ಸಾವು

ರಿಯಾ ವಕೀಲರ ಪ್ರತಿಕ್ರಿಯೆ: ನನ್ನ ಕಕ್ಷಿದಾರರ ಮೇಲೆ ಅನಗತ್ಯವಾಗಿ 27ಎ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಲಾಗಿದೆ. ರಿಯಾ ಪರಿಚಯಕ್ಕೂ ಮುನ್ನವೇ ಸುಶಾಂತ್ ಡ್ರಗ್ಸ್ ಸೇವಿಸುತ್ತಿರುವ ವಿಚಾರವನ್ನು ಮೂವರು ನಟಿಯರು ರಿವೀಲ್ ಮಾಡಿದ್ದಾರೆ. ನನ್ನ ಕಕ್ಷಿದಾರರು ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ರೂ ಅವರನ್ನ ಬಂಧನದಲ್ಲಿರಿಸಲಾಗಿತ್ತು. ಕೇಂದ್ರದ ಮೂರು ಏಜೆನ್ಸಿಗಳ ರಿಯಾ ವಿರುದ್ಧ ಅನಗತ್ಯವಾಗಿ ನಡೆಸುತ್ತಿರುವ ತನಿಖೆಗಳು ಅಂತ್ಯಗೊಳ್ಳಬೇಕಿದೆ. ನಾನು ಸತ್ಯಕ್ಕೆ ಬದ್ಧರಾಗಿದ್ದು, ಸತ್ಯಮೇವ ಜಯತೆ ಎಂದು ಸತೀಶ್ ಮನಶಿಂಧೆ ಹೇಳಿದ್ದಾರೆ. ಇದನ್ನೂ ಓದಿ: ಎಲ್ಲ ಆಯಾಮಗಳಲ್ಲಿ ಸುಶಾಂತ್ ಕೇಸ್ ತನಿಖೆ: ಸಿಬಿಐ

Comments

Leave a Reply

Your email address will not be published. Required fields are marked *