ರಾಜಸ್ಥಾನ ವಿರುದ್ಧ ಸಿಎಸ್‍ಕೆ ಅಧಿಪತ್ಯ ಮುಂದುವರಿಯುತ್ತಾ?

ದುಬೈ: ಐಪಿಎಲ್ 2020ರ ಟೂರ್ನಿಯಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ನಡುವೆ ಪಂದ್ಯ ನಡೆಯಲಿದೆ. ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಇತ್ತಂಡಗಳ ಮುಖಾಮುಖಿ ಪಂದ್ಯಗಳಲ್ಲಿ ಚೆನ್ನೈ ತಂಡ ರಾಜಸ್ಥಾನ ವಿರುದ್ಧ ಮೇಲುಗೈ ಸಾಧಿಸಿದೆ. ಐಪಿಎಲ್ ನಲ್ಲಿ ಇದುವರೆಗೂ 21 ಪಂದ್ಯಗಳಲ್ಲಿ ಎರಡು ತಂಡಗಳು ಮುಖಾಮುಖಿಯಾಗಿದ್ದು, ಇದರಲ್ಲಿ ಚೆನ್ನೈ 14 ಪಂದ್ಯಗಳಲ್ಲಿ ಜಯ ಪಡೆದಿದ್ದರೇ ರಾಜಸ್ಥಾನ 7 ಪಂದ್ಯಗಳಲ್ಲಿ ಜಯ ಪಡೆದಿದೆ. ಚೆನ್ನೈ ತಂಡದ ಐಪಿಎಲ್‍ನಲ್ಲಿ ರಾಜಸ್ಥಾನದ ವಿರುದ್ಧವೇ 246 ರನ್ ಗಳ ಗರಿಷ್ಠ ಸ್ಕೋರ್ ಗಳಿಸಿತ್ತು. ಇತ್ತ ರಾಜಸ್ಥಾನ ಚೆನ್ನೈ ವಿರುದ್ಧ 109 ರನ್ ಗಳ ಕನಿಷ್ಠ ಸ್ಕೋರ್ ಗಳಿಸಿತ್ತು.

ದುಬೈ, ಅಬುಧಾಬಿ ಪಿಂಚ್‍ಗಳನ್ನು ನೋಡುವುದಾದರೆ ಶಾರ್ಜಾ ಕ್ರೀಡಾಂಗಣ ಭಿನ್ನವಾಗಿರುತ್ತದೆ. ಇಲ್ಲಿ ಬ್ಯಾಟ್ಸ್ ಮನ್ ಹವಾ ಹೆಚ್ಚಾಗಿದ್ದು, ಬೌಲರ್ ಗಳು ಸವಾಲುಗಳನ್ನು ಎದುರಿಸಬೇಕಿದೆ. ಇಂದಿನ ಪಂದ್ಯದಲ್ಲಿ ಹೈ ಸ್ಕೋರ್ ದಾಖಲಾಗುವ ಸಾಧ್ಯತೆ ಇದೆ.

ರಾಜಸ್ಥಾನದ ತಂಡಕ್ಕೆ ಇದೇ ವೇಳೆ ಮತ್ತೊಂದು ಹೊಡೆತ ಎದುರಾಗಿದ್ದು, ಕ್ವಾರಂಟೈನ್ ನಿಯಮಗಳ ಹಿನ್ನೆಲೆಯಲ್ಲಿ ರಾಜಸ್ಥಾನ ತಂಡದಿಂದ ಜೋಸ್ ಬಟ್ಲರ್ ದೂರವುಳಿಯಲಿದ್ದಾರೆ. ಇತ್ತ ಬೆನ್ ಸ್ಟೋಕ್ಸ್ ಕೂಡ ತಂಡಕ್ಕೆ ಇನ್ನೂ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಟಾಮ್ ಕರ್ರನ್, ಡೇವಿಡ್ ಮಿಲ್ಲರ್ ಅವರಿಗೆ ಪಂದ್ಯದಲ್ಲಿ ಅವಕಾಶ ಲಭಿಸುವ ಸಾಧ್ಯತೆ ಇದೆ.

ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನ್ನು ಮಣಿಸಿ ಶುಭಾರಂಭ ಮಾಡಿರುವ ಚೆನ್ನೈ ತಂಡದಲ್ಲಿ ಬದಲಾವಣೆ ಮಾಡುವ ನಿರೀಕ್ಷೆ ಇಲ್ಲ. ತಂಡದ ಆರಂಭಿಕ ಆಟಗಾರ ಋತುರಾಜ್ ಗಯಾಕ್ವಾಡ್ ಅವರ ಕೊರೊನಾ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ನೆಟ್ ಅಭ್ಯಾಸ ಆರಂಭಿಸಿದ್ದಾರೆ. ಆದರೆ ಈ ಪಂದ್ಯಕ್ಕೆ ಲಭ್ಯರಿದ್ದಾರಾ ಅಥವಾ ಇಲ್ಲವಾ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಲಭಿಸಿಲ್ಲ.

ಸಂಭಾವ್ಯ ತಂಡ:
ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಉತ್ತಪ್ಪ, ಸ್ಮಿತ್ (ನಾಯಕ), ಡೇವಿಡ್ ಮಿಲ್ಲರ್, ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ಶ್ರೇಯಾಸ್ ಗೋಪಾಲ್, ಜೋಪ್ರಾ ಆರ್ಚರ್, ಜಯದೇವ್ ಉನಾದ್ಕತ್, ಅಂಕಿತ್ ರಾಜ್‍ಪೂತ್/ವರುಣ್ ಅರನ್/ಕಾರ್ತಿಕ್ ತ್ಯಾಗಿ.

Comments

Leave a Reply

Your email address will not be published. Required fields are marked *