ಕೇಂದ್ರ ಸರ್ಕಾರ ಬೆನ್ನು ತೋರಿಸಿ ಓಡ್ತಿದೆ: ಅಸಾದುದ್ದೀನ್ ಓವೈಸಿ

-ಚೀನಾ ಹೆಸ್ರು ಹೇಳಲು ಪ್ರಧಾನಿ ಧೈರ್ಯ ಮಾಡ್ತಿಲ್ಲ

ನವದೆಹಲಿ: ಕೇಂದ್ರ ಸರ್ಕಾರ ಬೆನ್ನು ತೋರಿಸಿ ಓಡುವ ಕೆಲಸವನ್ನು ಮಾಡುತ್ತಿದೆ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.

ಅಧಿವೇಶನ ಆರಂಭಕ್ಕೂ ಮುನ್ನ ಖಾಸಗಿ ವಾಹಿನಿ ಜೊತೆ ಮಾತನಾಡಿದ ಓವೈಸಿ, ದೇಶ ಕಷ್ಟ ಕಾಲದಲ್ಲಿದ್ದು, ಕೊರೊನಾದಿಂದ ಸಾವುಗಳು ಆಗುತ್ತಿವೆ. ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಚೀನಾ ದೇಶದೊಳಗೆ ನುಗ್ಗಿದೆ. ಈ ಎಲ್ಲ ವಿಷಯಗಳ ಮೇಲೆ ಚರ್ಚೆ ನಡೆಯಬೇಕು ಎಂಬುವುದು ನಮ್ಮೆಲ್ಲರ ಇಚ್ಛೆ. ಆದ್ರೆ ಸರ್ಕಾರ ಪ್ರಶ್ನಾವಳಿ ಸಮಯವನ್ನ ರದ್ದುಗೊಳಿಸುವ ಮೂಲಕ ವಿಪಕ್ಷಗಳ ಧ್ವನಿ ಅಡಗಿಸುವ ಕೆಲಸವನ್ನ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ಪ್ರಧಾನಿಗಳು ಚೀನಾದ ಹೆಸರು ಯಾಕೆ ಹೆದರುತ್ತಿದ್ದಾರೆ ಎಂಬುವುದು ತಿಳಿಯುತ್ತಿಲ್ಲ. ಈ ಬಗ್ಗೆ ಯಾರು ಮಾತನಾಡುತ್ತಿಲ್ಲ. ಪ್ರಧಾನಿಗಳು ದೇಶದ ಜನರನ್ನ ದಾರಿ ತಪ್ಪಿಸುವ ಕೆಲಸ ಮಾಡುವಲ್ಲಿ ನಿರತರಾಗಿದ್ದಾರೆ. ಯಾರು ದೇಶದ ಗಡಿ ಒಳ ಪ್ರವೇಶಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಚೀನಾ ಸೇನೆ ಸಾವಿರ ಕಿಲೋ ಮೀಟರ್ ನಷ್ಟು ಒಳಪ್ರವೇಶಿಸಿದೆ. ನಾವು ದೇಶದ ಸೇನೆಯ ಜೊತೆಯಲ್ಲಿದ್ದೇವೆ. ಚೀನಾ ವಿಷಯದಲ್ಲಿ ಸರ್ಕಾರ ದೇಶದ ಜನತೆಯ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ಯಾವುದೇ ಪೂರ್ವಾಪರ ಯೋಚಿಸದೇ ಲಾಕ್‍ಡೌನ್ ಘೋಷಣೆ ಮಾಡಿತು. ಸದ್ಯದ ದೇಶದ ಪರಿಸ್ಥಿತಿಗೆ ಪ್ರಧಾನಿಗಳು ನೇರ ಕಾರಣ. ಸರ್ಕಾರ ಅಮೆರಿಕಾದ ಜೊತೆ ನಮ್ಮ ದೇಶವನ್ನು ಹೋಲಿಸಿಕೊಳ್ಳುತ್ತಿದೆ. ಅಲ್ಲಿ ಹಿರಿಯ ನಾಗರಿಕ ಸಂಖ್ಯೆ ಹೆಚ್ಚು, ಅಲ್ಲಿಯ ಕಾರಣಗಳು ಸಂಪೂರ್ಣ ಭಿನ್ನ. ಸರ್ಕಾರ ತೆಗೆದುಕೊಂಡ ತಪ್ಪು ನಿರ್ಧಾರಗಳಿಂದ ನಮ್ಮಲ್ಲಿ ಕೊರೊನಾದಿಂದ ಜನರು ಸಾವನ್ನಪ್ಪುತ್ತಿದ್ದಾರೆ ಎಂದರು.

Comments

Leave a Reply

Your email address will not be published. Required fields are marked *