ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಮದುವೆಯಾದ ನಂತರ ತಮ್ಮ ಪತ್ನಿಯ ಜೊತೆಗಿನ ಫೋಟೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ನಿಖಿಲ್ ತಮ್ಮ ಪತ್ನಿಯನ್ನು ವಿಶೇಷವಾದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು.
ನಟ ನಿಖಿಲ್ ಹಬ್ಬದ ದಿನ ಅಥವಾ ವಿಶೇಷ ದಿನಗಳಲ್ಲಿ ಪತ್ನಿ ರೇವತಿಯ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ನಿಖಿಲ್ ಪತ್ನಿ ರೇವತಿಯನ್ನು ನಾಗರಹೊಳೆ ಅಭಯಾರಣ್ಯಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲದೇ ದಸರಾದಲ್ಲಿ ಅಂಬಾರಿ ಹೊರುವ ಗಜಪಡೆಯನ್ನು ಕೂಡ ಭೇಟಿ ಮಾಡಿಸಿದ್ದಾರೆ.

“ನಾಗರಹೊಳೆ ಅಭಯಾರಣ್ಯಕ್ಕೆ ಭೇಟಿ ನೀಡಿದ್ದೆ. ಈ ಸಂದರ್ಭದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾದ ಅಂಬಾರಿ ಹೊರುವ ಗಜಪಡೆಯ ನಾಯಕ ಅರ್ಜುನ ಹಾಗೂ ದುರ್ಗಾಪರಮೇಶ್ವರಿಯೊಂದಿಗೆ” ಎಂದು ಇನ್ಸ್ಟಾಗ್ರಾಂನಲ್ಲಿ ನಿಖಿಲ್ ಬರೆದುಕೊಂಡಿದ್ದಾರೆ. ಜೊತೆಗೆ ಗಜಪಡೆಯ ಜೊತೆ ದಂಪತಿ ಫೋಟೋ ತೆಗೆಸಿಕೊಂಡಿದ್ದು, ಆ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.

ನಿಖಿಲ್ ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ದಸರಾದ ಎಲ್ಲಾ ಆನೆಗಳು ಮೈಸೂರಿಗೆ ಆಗಮಿಸಿ, ದಸರಾ ಉತ್ಸವದ ತಾಲೀಮಿನಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಆದರೆ ಕೊರೊನಾ ಇರುವ ಕಾರಣ ಎಲ್ಲಾ ಆನೆಗಳು ಇನ್ನೂ ಶಿಬಿರದಲ್ಲಿಯೇ ಇದೆ. ಹೀಗಾಗಿ ನಿಖಿಲ್ ಪತ್ನಿಯೊಂದಿಗೆ ಶಿಬಿರಕ್ಕೆ ಭೇಟಿ ಕೊಟ್ಟಿದ್ದರು.
https://www.instagram.com/p/CEvyTlspo9p/?igshid=i8frrrtsrlaq

Leave a Reply