ಅಣ್ಣಾವ್ರ ಅಭಿಮಾನಿಗಳಿಂದ ಕೋರಿಕೆ- ರಚಿತಾ ಅಭಿನಯದ ಕಸ್ತೂರಿ ನಿವಾಸ ಟೈಟಲ್ ಚೇಂಜ್

ಬೆಂಗಳೂರು: ಸ್ಯಾಂಡಲ್‍ವುಡ್ ಡಿಂಪಲ್ ಕ್ವೀನ್ ರಚಿತಾರಾಮ್ ಅಭಿನಯದ ಮುಂದಿನ ಚಿತ್ರ ಕಸ್ತೂರಿ ನಿವಾಸದ ಮುಹೂರ್ತ ಸಮಾರಂಭ ಅದ್ಧೂರಿಯಾಗಿ ನೆರವೇರಿತ್ತು. ಸಿನಿಮಾದ ಪೋಸ್ಟರ್ ನ್ನು ಸಹ ಬಿಡುಗಡೆ ಮಾಡಲಾಗಿತ್ತು. ಆದರೆ ಇದೀಗ ಚಿತ್ರತಂಡ ಸಿನಿಮಾ ಹೆಸರನ್ನು ಬದಲಾಯಿಸಲು ಮುಂದಾಗಿದೆ.

ಡಾ.ರಾಜ್‍ಕುಮಾರ್ ಅಭಿನಯದ ಮಾಸ್ಟರ್ ಪೀಸ್ ಸಿನಿಮಾ ಇದಾಗಿರುವುದರಿಂದ ಅವರ ಅಭಿಮಾನಿಗಳು ಚಿತ್ರತಂಡಕ್ಕೆ ಹೆಸರು ಬದಲಿಸುವಂತೆ ಮನವಿ ಮಾಡಿದ್ದರು. ಹೀಗಾಗಿ ಇದೀಗ ಚಿತ್ರತಂಡ ಸಿನಿಮಾ ಹೆಸರು ಬದಲಾಯಿಸಲು ನಿರ್ಧರಿಸಿದೆ. 1971 ರಲ್ಲಿ ತೆರೆ ಕಂಡಿದ್ದ ಡಾ.ರಾಜ್‍ಕುಮಾರ್ ಅಭಿನಯದ ‘ಕಸ್ತೂರಿ ನಿವಾಸ’ ಸಿನಿಮಾದ ಟೈಟಲ್‍ನ್ನು ಈ ಚಿತ್ರಕ್ಕೆ ಬಳಸಿಕೊಳ್ಳಲಾಗಿತ್ತು.

ಡಾ.ರಾಜ್‍ಕುಮಾರ್ ಅಭಿನಯದ ಕಸ್ತೂರಿ ನಿವಾಸ ಸಿನಿಮಾ ನಿರ್ಮಾಪಕರಾದ ಕೆ.ಸಿ.ಎನ್.ಚಂದ್ರು ಅವರ ಒಪ್ಪಿಗೆ ಮೇರೆಗೆ ಚಿತ್ರತಂಡ ಈ ಹೆಸರನ್ನು ಬಳಸಿಕೊಂಡಿತ್ತು. ಆದರೆ ಸಿನಿಮಾ ಹೆಸರನ್ನು ಬದಲಿಸುವಂತೆ ಡಾ.ರಾಜ್ ಅಭಿಮಾನಿಗಳು ಮನವಿ ಮಾಡಿದ್ದರಿಂದ ಹೆಸರು ಬದಲಾಯಿಸುವ ನಿರ್ಧಾರ ಮಾಡಲಾಗಿದೆ. ಡಾ.ರಾಜ್ ಅಭಿಮಾನಿಗಳು ರಚಿತಾ ಅಭಿನಯದ ಚಿತ್ರದ ನಿರ್ದೇಶಕ ದಿನೇಶ್ ಬಾಬು ಅವರಲ್ಲಿ ಮನವಿ ಮಾಡಿದ್ದು, ಟೈಟಲ್ ಚೇಂಜ್ ಮಾಡುವಂತೆ ಕೋರಿದ್ದಾರೆ.

ಈ ಕೋರಿಕೆಗೆ ದಿನೇಶ್ ಬಾಬು ಒಪ್ಪಿದ್ದು, ಟೈಟಲ್ ಚೇಂಜ್ ಮಾಡೋಕೆ ಮುಂದಾಗಿದ್ದೇನೆ ಎಂದು ತಿಳಿಸಿದ್ದಾರೆ. ಸದ್ಯ ‘ಕಸ್ತೂರಿ’ ಎಂಬ ಟೈಟಲ್ ಇಡೋಣವೆಂದು ಮನಸಲ್ಲಿದೆ ಎಂದು ದಿನೇಶ್ ಬಾಬು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *