ಅಯ್ಯೋ ಸಿದ್ದರಾಮಯ್ಯನವರೇ ಹಿಂದೂಗಳಿಗೆ ನಿಮ್ಮ ನಿಜ ಬಣ್ಣದ ಅರಿವಿದೆ: ಕಟೀಲ್

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯರ ನಡುವಿನ ವಾಕ್ಸಮರ ಮುಂದುವರಿದಿದೆ. ಮಾಜಿ ಸಿಎಂ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನಳಿನ್ ಕುಮಾರ್ ಕಟೀಲ್, ಅಯ್ಯೋ ಸಿದ್ದರಾಮಯ್ಯನವರೇ ಹಿಂದೂಗಳಿಗೆ ನಿಮ್ಮ ನಿಜ ಬಣ್ಣದ ಅರಿವಿದೆ ಎಂದು ತಿರುಗೇಟು ನೀಡಿದ್ದಾರೆ.

ಕಟೀಲ್ ಟ್ವೀಟ್: ಅಯ್ಯೋ ಸಿದ್ದರಾಮಯ್ಯನವರೇ, ಹಿಂದೂಗಳಿಗೆ ನಿಮ್ಮ ನಿಜ ಬಣ್ಣದ ಅರಿವಿದೆ. ಎಸ್‍ಡಿಪಿಐ ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ಹಿಂಪಡೆದವರು ಯಾರು ಎಂಬುದನ್ನು ಹಿಂದೂಗಳು ಮರೆತಿಲ್ಲ. ನೀವು ಜಾತಿ- ಧರ್ಮಗಳ ಹೆಸರಿನಲ್ಲಿ ಜನರನ್ನು ಒಡೆದು ಆಳಲು ಪ್ರಯತ್ನಿಸಿದ್ದು ಗುಟ್ಟಾಗೇನೂ ಉಳಿದಿಲ್ಲ.

ಬುದ್ದಿವಂತರ ಜಿಲ್ಲೆ ಎಂಬ ದಕ್ಷಿಣಕನ್ನಡ ದ ಖ್ಯಾತಿಗೆ ಅಸೂಯೆಪಟ್ಟು ಬಿಜೆಪಿ ವರಿಷ್ಠರು, ನಳಿನ್‍ಕುಮಾರ್ ಕಟೀಲ್ ಎಂಬ ನಕಲಿ ಶ್ಯಾಮನನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿರಬಹುದು. ಇಲ್ಲವೇ ಪಕ್ಷದಲ್ಲಿ ಈ ಮಟ್ಟದ ಬೌದ್ದಿಕ ದಾರಿದ್ರ್ಯ ಇದ್ದಿರಬಹುದು ಎಂದು ಸಿದ್ದರಾಮಯ್ಯನವರು ಶುಕ್ರವಾರ ಟ್ವೀಟ್ ಮಾಡಿದ್ದರು.

Comments

Leave a Reply

Your email address will not be published. Required fields are marked *