ರಾಜಕೀಯವಾಗಿ ನನ್ನ ಮುಗಿಸ್ಬೇಕು ಅಂದಿದ್ರೆ ಈ ಮಟ್ಟಕ್ಕೆ ಇಳೀಬಾರದಿತ್ತು: ಅಖಂಡ ಕಣ್ಣೀರು

ಬೆಂಗಳೂರು: ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಅಂದಿದ್ರೆ ಈ ಮಟ್ಟಕ್ಕೆ ಇಳಿಯಬಾರದಿತ್ತು. ರಾಜಕೀಯವಾಗಿ ನನ್ನನ್ನು ಫೇಸ್ ಮಾಡಬೇಕಿತ್ತು ಎಂದು ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಕಣ್ಣೀರು ಹಾಕಿದ್ದಾರೆ.

ಇಂದು ಕಮಿಷನರ್ ಕಚೇರಿಗೆ ಆಗಮಿಸಿದ ಅಖಂಡ ಶ್ರೀನಿವಾಸ್ ಅವರನ್ನು ಸಿಸಿಬಿ ಡಿಸಿಪಿ ರವಿಕುಮಾರ್ ವಿಚಾರಣೆ ನಡೆಸಿದರು. ಈ ವೇಳೆ ಅಖಂಡ ಅವರು, ನನಗೆ ಈ ರೀತಿ ಮಾಡುತ್ತಾರೆ ಅಂತ ಅಂದುಕೊಂಡಿರಲಿಲ್ಲ. ಸಾಕಷ್ಟು ಆಸ್ತಿ ಪತ್ರ ಹಾಳಾಗಿದೆ. ಡೈರಿ ಎಲ್ಲಾ ಸುಟ್ಟು ಹೋಗಿದೆ. ರಾಜಕೀಯವಾಗಿ ಮುಗಿಸಬೇಕು ಅಂದಿದ್ರೆ ಈ ಮಟ್ಟಕ್ಕೆ ಇಳಿಯಬಾರದಿತ್ತು. ರಾಜಕೀಯವಾಗಿಯೇ ನನ್ನನ್ನು ಫೇಸ್ ಮಾಡಬೇಕಿತ್ತು ಎಂದು ಕಣ್ಣೀರು ಹಾಕಿದರು.

ನನ್ನ ಮೇಲೆ ದ್ವೇಷ ಇದ್ದರೆ ರಾಜಕೀಯವಾಗಿ ಮುಗಿಸಲಿ. ನಾನು ಅಂದು ಸಿಕ್ಕಿದ್ರೆ ಜೀವಂತವಾಗಿ ಸುಡುತ್ತಾ ಇದ್ರು. ಜೀವಂತವಾಗಿಯೇ ಸುಡಲು ಪ್ಲಾನ್ ಕೂಡ ಮಾಡಿದ್ರು. ನಾನು ಗೆದ್ದೇ ಗೆಲ್ತೀನಿ ಸರ್. ಇದನ್ನು ಸಹಿಸೋಕೆ ಆಗದೆ ಈ ರೀತಿ ಮಾಡುತ್ತಾರೆ. ನಾನು ಪಕ್ಷಾಂತರವಾಗಿ ಚುನಾವಣೆ ಸ್ಪರ್ಧಿಸಿದ್ರೂ ಗೆಲ್ತೀನಿ ಸರ್. ನನಗೆ ನನ್ನ ಜನ ಇದ್ದಾರೆ. ಇವತ್ತು ಅವರೇ ತಿರುಗಿ ಬಿದ್ರಾ ಅನ್ನೋ ಅನುಮಾನ ಇದೆ ಎಂದಿದ್ದಾರೆ. ಇದನ್ನೂ ಓದಿ: ಪೋಸ್ಟ್ ಕೇವಲ ನೆಪ, ಇದು ದಲಿತ ಶಾಸಕರ ವಿರುದ್ಧ ನಡೆದ ವ್ಯವಸ್ಥಿತ ಪಿತೂರಿ – ಇದು ಬಿಜೆಪಿ ಶೋಧಿಸಿದ ಸತ್ಯ

ಘಟನೆಯಿಂದ ಇಂದು ನನ್ನ ಹೆಂಡತಿ ಮಕ್ಕಳೆಲ್ಲಾ ಬೀದಿಯಲ್ಲಿ ನಿಂತಿದ್ದಾರೆ. ನಾನು ಎಷ್ಟೇ ಸಂಪಾದನೆ ಮಾಡಿದರೂ ಪ್ರಯೋಜನ ಆಗಲಿಲ್ಲ. ನಮ್ಮ ಪಕ್ಷದವರೇ ನನಗೆ ಈ ರೀತಿ ಡ್ಯಾಮೇಜ್ ಮಾಡುತ್ತಾರೆ. ನಾನು ಕಾರ್ಪೊರೇಟರ್ ಗಳ ಜೊತೆ ಚೆನ್ನಾಗಿಯೇ ಇದ್ದೆ. ಯಾರಿಗೂ ನಾನು ಹಿಂಸೆ ಕೊಟ್ಟಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರ್ಫ್ಯೂ ತೆಗೆಯಿರಿ, ಒಂದು ವೇಳೆ ಅಲ್ಲಿ ಮತ್ತೆ ಏನಾದ್ರೂ ಆದರೆ ಅದಕ್ಕೆ ನಾವು ಜವಾಬ್ದಾರರಲ್ಲ

ಟೆಂಡರ್ ಅಲ್ಲೂ ಯಾರಿಗೂ ಮೋಸ ಮಾಡಿಲ್ಲ. ಖಲೀಂ ಪಾಷಾ ನನ್ನನ್ನು ಬೈಯಾ ಅಂತ ಚೆನ್ನಾಗಿಯೇ ಇದ್ದ. ಅವನಿಗೂ ನನ್ನ ಮೇಲೆ ಹೇಗೆ ದ್ವೇಷ ಬಂತೋ ಗೊತ್ತಿಲ್ಲ ಎಂದು ಸುಮಾರು 2 ಗಂಟೆಗಳ ಕಾಲ ನಡೆದ ವಿಚಾರಣೆಯ ವೇಳೆ ಅಖಂಡ ಕಣ್ಣೀರುಡುತ್ತಲೇ ಹೇಳಿಕೆಗಳನ್ನು ನೀಡಿದ್ದಾರೆ. ಇದನ್ನೂ ಓದಿ: ನಮ್ಮವರು ನಿರ್ದೋಷಿಗಳು, ಅರೆಸ್ಟ್ ಮಾಡಿದ್ರೆ ಮನೆ ನಡೆಯುವುದಾದ್ರೂ ಹೇಗೆ?

Comments

Leave a Reply

Your email address will not be published. Required fields are marked *