ಬಾಲಕಿ ಸಿಗಲೆಂದು ಹರಕೆ- ನಾಲಿಗೆಯನ್ನೇ ಕತ್ತರಿಸಿಕೊಂಡ ಮಹಿಳೆ

– ಯಾರದ್ದೋ ಮಾತು ಕೇಳಿ ನಾಲಿಗೆ ಕತ್ತರಿಸಿಕೊಂಡಳು

ರಾಂಚಿ: ಕಾಣೆಯಾಗಿದ್ದ ಸೊಸೆ ಸುರಕ್ಷಿತವಾಗಿ ಮರಳಿ ಮನೆಗೆ ಬರಲೆಂದು ಮಹಿಳೆ ತನ್ನ ನಾಲಿಗೆಯನ್ನೇ ಕತ್ತರಿಸಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ಜಾರ್ಖಂಡ್‍ನ ಸೆರೈಕೇಲಾ-ಖಸ್ರ್ವಾನ್ ನ ಎನ್‍ಐಟಿ ಕ್ಯಾಂಪಸ್ ಬಳಿ ಘಟನೆ ನಡೆದಿದ್ದು, ನಾಲಿಗೆ ಕತ್ತರಿಸಿಕೊಂಡ ಮಹಿಳೆಯನ್ನು ಲಕ್ಷ್ಮಿ ನಿರಾಲಾ ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಮಹಿಳೆ ನಾಲಿಗೆ ಕತ್ತರಿಸಿಕೊಂಡಿದ್ದಾಳೆ. ಕಳೆದು ಹೋಗಿರುವ ಸೊಸೆ ಮರಳಿ ಮನೆಗೆ ಬಂದರೆ ನಾಲಿಗೆ ಕತ್ತರಿಸಿ ಹರಕೆ ತೀರಿಸುವುದಾಗಿ ಮಹಿಳೆ ಹರಕೆ ಹೊತ್ತುಕೊಂಡಿದ್ದಾಳೆ.

ನಾಲಿಗೆ ಕತ್ತರಿಸಿಕೊಂಡ ಬಳಿಕ ಮಹಿಳೆ ಆಸ್ಪತ್ರೆಗೆ ತೆರಳಲು ನಿರಾಕರಿಸಿದ್ದಾಳೆ. ನಂತರ ಸ್ಥಳೀಯರು ಮನವೊಲಿಸಿ ಜೆಮ್‍ಶೆಡ್‍ಪುರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನೆ ಕುರಿತು ಪೊಲೀಸರು ಮಾಹಿತಿ ನೀಡಿ, ಮಹಿಳೆ ಮನೆಗೆಲಸ ಮಾಡುತ್ತಿದ್ದಾರೆ. ಇದೀಗ ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ತಿಳಿಸಿದ್ದಾರೆ.

ಆಗಸ್ಟ್ 14ರಂದು ತನ್ನ ಮಗಳೊಂದಿಗೆ ಆಟವಾಡುತ್ತ, ಮಹಿಳೆಯ ಸೊಸೆ ಜ್ಯೋತಿ ಕಾಣಿಯಾಗಿದ್ದಾಳೆ. ನಂತರ ಲಕ್ಷ್ಮಿ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದಾಳೆ. ಅಲ್ಲದೆ ಬಾಲಕಿ ಸುರಕ್ಷಿತವಾಗಿ ಮನೆಗೆ ಆಗಮಿಸಿದರೆ ನಾಲಿಗೆ ಕತ್ತಿರಿಸಿಕೊಂಡು ಹರಕೆ ತೀರಿಸುವುದಾಗಿ ಶಿವನ ದೇವಸ್ಥಾನದಲ್ಲಿ ಬೇಡಿಕೊಂಡಿದ್ದಾಳೆ. ಈ ವೇಳೆ ಯಾರೋ ಹೇಳಿದರೆಂದು ಮೂಢನಂಬಿಕೆಯಿಂದ ಬ್ಲೇಡ್‍ನಿಂದ ತನ್ನ ನಾಲಗೆಯನ್ನೇ ಕತ್ತರಿಸಿಕೊಂಡಿದ್ದಾಳೆ.

ಘಟನೆ ಕುರಿತು ಮಹಿಳೆಯ ಪತಿ ನಂದು ಲಾಲ್ ನಿರಾಲಾ ಮಾಹಿತಿ ನೀಡಿದ್ದು, ಯಾರೋ ಹೇಳಿದರೆಂದು ಪತ್ನಿ ಈ ನಿರ್ಧಾರ ತೆಗೆದುಕೊಂಡಿದ್ದಾಳೆ. ನೀವು ನಾಲಿಗೆ ಕತ್ತರಿಸುವ ಹರಕೆ ಹೊತ್ತರೆ ಜ್ಯೋತಿ ಸಿಗುತ್ತಾಳೆ ಎಂದು ಹೇಳಿದ್ದಾರೆ. ಹೀಗಾಗಿ ಈ ರೀತಿ ಮಾಡಿದ್ದಾಳೆ. ಬಾಲಕಿಗಾಗಿ ಶುಕ್ರವಾರವೆಲ್ಲ ಹುಡುಕಿದೆವು, ಸಿಗಲಿಲ್ಲ. ನಂತರ ನನ್ನ ಮಗನೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಶನಿವಾರ ದೂರು ನೀಡಿದೆವು. ಭಾನುವಾರ ಲಕ್ಷ್ಮಿ ನಾಲಿಗೆಯನ್ನು ಕತ್ತರಿಸಿಕೊಂಡಿದ್ದಾಳೆ ಎಂದು ನಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *