ಐದು ಭಾಷೆ, 65 ಸಿಂಗರ್ಸ್, ಒಂದು ಹಾಡು – ಲಹರಿ ಸಂಸ್ಥೆಯಿಂದ ವಿಶೇಷ ಗೀತೆ ಬಿಡುಗಡೆ

– ಕನ್ನಡಿಗರು ಎಂದೆಂದಿಗೂ ಭಾರತಕ್ಕಾಗಿ ನಿಲ್ಲುವೆವು

ಬೆಂಗಳೂರು: ಲಹರಿ ಸಂಸ್ಥೆಯಿಂದ ಸ್ವಾತಂತ್ರ ದಿನಾಚರಣೆಗೆ ವಿಶೇಷವಾದ ‘ಒಟ್ಟಿಗೆ ಒಂದಾಗಿ..’ ಎಂಬ ಹಾಡೊಂದನ್ನು ಇಂದು ಬೆಳಗ್ಗೆ 11 ಗಂಟೆಗೆ ಬಿಡುಗಡೆ ಮಾಡಲಾಗಿದೆ.

ಈ ಹಾಡನ್ನು ಸುಮಾರು 65 ಸಿಂಗರ್‍ಗಳು ಹಾಡಿದ್ದು, 5 ಭಾಷೆಯಲ್ಲಿ ಈ ಹಾಡು ಮೂಡಿ ಬಂದಿದೆ. ಈ ಹಾಡು ಕನ್ನಡ, ಹಿಂದಿ, ತಮಿಳು, ತೆಲಗು ಹಾಗೂ ಮಲಯಾಳಂ ಭಾಷೆಯಲ್ಲಿ ಹಾಡಲಾಗಿದೆ. ಈ ಹಾಡು ಲಹರಿ ಯುಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಹಾಡು ಭಾರತದವರಾದ ನಾವು ಎಲ್ಲರೂ ಒಂದೇ ಎಂಬ ಸಂದೇಶವನ್ನು ಸಾರಿದೆ.

ಈ ಹಾಡನ್ನು ರಾಕಿಂಗ್ ಸ್ಟಾರ್ ಯಶ್, ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್, ನಟ ರಾಮ್‍ಚರಣ್ ಮತ್ತು ಮಾಲಿಯಾಳಂ ನಟ ಮೋಹನ್ ಲಾಲ್ ಬಿಡುಗಡೆ ಮಾಡಿದ್ದಾರೆ. ಕನ್ನಡದ ಹೆಸರಾಂತ ಸಿಂಗರ್‍ಗಳಾದ ವಿಜಯ್ ಪ್ರಕಾಶ್ ಮತ್ತು ರಾಜೇಶ್ ಕೃಷ್ಣನ್ ಸೇರಿದಂತೆ ಹಲವಾರು ಗಾಯಕ ಮತ್ತು ಗಾಯಕಿಯರು ದನಿಗೂಡಿಸಿದ್ದಾರೆ. ದಿಗ್ಗಜ ಗಾಯಕ ಎಸ್‍ಪಿ ಬಾಲಸುಬ್ರಮಣ್ಯಂ ಅವರು ಮೊದಲ ಸಾಲನ್ನು ಹಾಡಿದ್ದಾರೆ. ಜೊತೆಗೆ ಬೇರೆ ಬೇರೆ ಭಾಷೆಯ ಹಲವಾರು ಯುವ ಮತ್ತು ಹಿರಿಯ ಗಾಯಕರು ಈ ಹಾಡಿಗೆ ದನಿಯಾಗಿದ್ದಾರೆ.

ಈ ಹಾಡನ್ನು ಇಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬಿಡುಗಡೆ ಮಾಡಿದ್ದು, ಈ ವಿಚಾರವಾಗಿ ಟ್ವೀಟ್ ಮಾಡಿರುವ ರಾಕಿಂಗ್ ಸ್ಟಾರ್ ಯಶ್, ಯುನೈಟೆಡ್ ಸಿಂಗರ್ಸ್ ಚಾರಿಟೇಬಲ್ ಟ್ರಸ್ಟ್ ಒಂದು ದೊಡ್ಡ ಕಾರಣಕ್ಕಾಗಿ ಈ ಹಾಡನ್ನು ಮಾಡಿದೆ. ಈ ಕಷ್ಟದ ಸಮಯದಲ್ಲಿ ಅನೇಕ ಅದ್ಭುತ 65 ಗಾಯಕರು ಸೇರಿ ಈ ಒಟ್ಟಿಗೆ ಒಂದಾಗಿ ಎಂಬ ಹಾಡನ್ನು ತಯಾರಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿ ಹಾಡಿನ ಯುಟ್ಯೂಬ್ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ.

ರಾಮ್‍ಚರಣ್ ಅವರು ಕೂಡ ಟ್ವೀಟ್ ಮಾಡಿದ್ದು, ಈ ಕಷ್ಟದ ಸಮಯದಲ್ಲಿ ಏಕತೆಯನ್ನು ತೋರಿಸುವ ‘ಒಟ್ಟಿಗೆ ಒಂದಾಗಿ..’ ಎಂಬ ಹಾಡನ್ನು ಬಿಡುಗಡೆ ಮಾಡುತ್ತಿರುವುದು ಸಂತೋಷವಾಗಿದೆ. 65 ಗಾಯಕರು ಒಟ್ಟಾಗಿ ಇದನ್ನು ಒಂದು ಪ್ರಮುಖ ಕಾರಣಕ್ಕಾಗಿ ಹಾಡಿದ್ದಾರೆ ಎಂದಿದ್ದಾರೆ. ಎ.ಆರ್ ರೆಹಮಾನ್ ಮತ್ತು ಮೋಹನ್ ಲಾಲ್ ಕೂಡ ಟ್ವೀಟ್ ಮಾಡಿದ್ದು, ಈ ಹಾಡನ್ನು ಬಿಡುಗಡೆ ಮಾಡಿದಕ್ಕೆ ಸಂತೋಷವಾಗಿದೆ. ಒಂದು ಒಳ್ಳೆಯ ಕಾರಣಕ್ಕೆ 65 ಜನ ಗಾಯಕರು ಈ ಹಾಡನ್ನು ಹಾಡಿದ್ದಾರೆ ಎಂದಿದ್ದಾರೆ.

Comments

Leave a Reply

Your email address will not be published. Required fields are marked *