‘ರಾಖಿ ಕಳುಹಿಸಲು ಸಾಧ್ಯವಾಗಿಲ್ಲ’ – ಬೇಸರದ ನಡುವೆಯೇ ಸಂಜೆ ಸರ್ಪ್ರೈಸ್ ಕೊಡಲಿರೋ ರಾಧಿಕಾ

ಬೆಂಗಳೂರು: ಇಂದು ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನದ ಹಬ್ಬವನ್ನು ಆಚರಿಸುತ್ತಿದ್ದಾರೆ. ಅದೇ ರೀತಿ ನಟಿ ರಾಧಿಕಾ ಪಂಡಿತ್ ಪ್ರೀತಿಯ ಸಹೋದರನಿಗೆ ಸೋಶಿಯಲ್ ಮೀಡಿಯಾದ ಮೂಲಕ ಶುಭಾಶಯವನ್ನು ಕೋರಿದ್ದಾರೆ. ಜೊತೆಗೆ ಈ ಸಂಜೆ ಸರ್ಪ್ರೈಸ್ ಇದೆ ತಿಳಿಸಿದ್ದಾರೆ.

ನಟಿ ರಾಧಿಕಾ ಪಂಡಿತ್ ಪ್ರತಿ ವರ್ಷವೂ ತಮ್ಮ ಸಹೋದರ ಗೌರಂಗ್‍ಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸುತ್ತಿದ್ದರು. ಆದರೆ ಈ ಬಾರಿ ರಾಖಿಯನ್ನು ಕಳುಹಿಸಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ರಾಧಿಕಾ ಇನ್‍ಸ್ಟಾಗ್ರಾಂನಲ್ಲಿ ಸಹೋದರನೊಂದಿಗೆ ಇರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ರಕ್ಷಾ ಬಂಧನದ ಶುಭಾಶಯವನ್ನು ತಿಳಿಸಿದ್ದಾರೆ.

“ಈ ಬಾರಿ ರಾಖಿಯನ್ನು ಕಳುಹಿಸಲು ಸಾಧ್ಯವಾಗಿಲ್ಲ. ಅದೇನೇ ಇದ್ದರೂ ಚಿಕಾಗೋದಲ್ಲಿರುವ ನನ್ನ ಪ್ರೀತಿಯ ಗೌರಂಗ್‍ಗೆ ಎಲ್ಲ ಪ್ರೀತಿಯನ್ನು ಕಳುಹಿಸುತ್ತಿದ್ದೇನೆ. ನೀನಿನ್ನೂ ನನ್ನ ಚಿಕ್ಕ ಮಗು. ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀನಿ ಗೊಲ್ಲು” ಎಂದು ರಾಧಿಕಾ ಸಹೋದರನ ಬಗ್ಗೆ ಬರೆದುಕೊಂಡಿದ್ದಾರೆ.

ಕೊನೆಯಲ್ಲಿ “ನನ್ನ ಎಲ್ಲ ವಿಶೇಷ ಸಹೋದರರು ಹಾಗೂ ಸಹೋದರಿಯರಿಗೆ ರಕ್ಷಾ ಬಂಧನದ ಶುಭಾಶಯಗಳು” ಎಂದು ತಿಳಿಸಿದ್ದಾರೆ. ಜೊತೆಗೆ ಈ ಸಂಜೆ ನಮ್ಮ ಸಣ್ಣದೊಂದು ಸರ್ಪ್ರೈಸ್ ಇದೆ, ನೋಡಿ ಎಂದು ಹೇಳುವ ಮೂಲಕ ರಾಧಿಕಾ ಕುತೂಹಲ ಮೂಡಿಸಿದ್ದಾರೆ.

ರಾಧಿಕಾ ಪಂಡಿತ್ ಅವರ ಸಹೋದರ ಗೌರಂಗ್ ಪಂಡಿತ್, ಪತ್ನಿ ಮತ್ತು ಮಗಳ ಜೊತೆ ಅಮೆರಿಕದ ಚಿಕಾಗೋದಲ್ಲಿ ನೆಲೆಸಿದ್ದಾರೆ.

https://www.instagram.com/p/CDa1RszAsUj/?igshid=1pxg1g332f8gl

Comments

Leave a Reply

Your email address will not be published. Required fields are marked *