‘ಅತ್ಯುತ್ತಮ ಗಿಫ್ಟ್’ – ಗೆಳತಿಗೆ ಹಾರ್ದಿಕ್ ಪಾಂಡ್ಯ ಧನ್ಯವಾದ

ಮುಂಬೈ: ಹಾರ್ದಿಕ್ ಪಾಂಡ್ಯ ತಂದೆಯಾಗಿರುವ ಸಂತಸದಲ್ಲಿದ್ದು, ತಮ್ಮ ಮಗುವಿನ ಜೊತೆ ಕಾಲಕಳೆಯುತ್ತಿದ್ದಾರೆ. ಇದೀಗ ತಮಗೆ ಅತ್ಯುತ್ತಮ ಉಡುಗೊರೆ ನೀಡಿದ್ದಕ್ಕಾಗಿ ತಮ್ಮ ಗೆಳತಿ ನತಾಶಾ ಸ್ಟಾಂಕೋವಿಕ್‍ಗೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಮಗನನ್ನ ಎತ್ತಿಕೊಂಡು ನೋಡುತ್ತಾ ನಗು ಬೀರಿದ ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ ಹಾಗೂ ಬಿಗ್ ಬಾಸ್‍ನ ಮಾಜಿ ಸ್ಪರ್ಧಿ ಹಾಗೂ ಡಾನ್ಸರ್ ನತಾಶಾ ಸ್ಟಾಂಕೋವಿಕ್ ದಂಪತಿಗೆ ಗಂಡು ಮಗುವಾಗಿದೆ. ಈ ಹಿನ್ನೆಲೆಯಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಆಸ್ಪತ್ರೆಯಲ್ಲಿ ಗೆಳತಿ ನತಾಶಾ ಜೊತೆಯಿರುವ ಫೋಟೋವನ್ನು ಪೋಸ್ಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ.

https://www.instagram.com/p/CDVV1ZCF7E0/?utm_source=ig_embed

ಪಾಂಡ್ಯ ತಮ್ಮ ಗೆಳತಿ ನತಾಶಾ ಗುಲಾಬಿ ಹೂಗುಚ್ಛವನ್ನು ನೀಡಿದ್ದು, ಅಪ್ಪಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆ ಫೋಟೋಗೆ “ನನ್ನ ಗುಲಾಬಿಗಾಗಿ ಈ ಗುಲಾಬಿಗಳು” ಎಂದು ಹೇಳುವ ಮೂಲಕ ತಮ್ಮ ಗೆಳತಿ ನತಾಶಾರನ್ನು ಪ್ರೀತಿಯಿಂದ ರೋಸ್ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲದೇ “ನನಗೆ ಅತ್ಯುತ್ತಮ ಉಡುಗೊಡೆ ನೀಡಿದ್ದಕ್ಕೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

https://www.instagram.com/p/CDQx8yCF-SX/?utm_source=ig_embed

ನತಾಶಾ ಗುರುವಾರ ಜುಲೈ 30ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮೊದಲಿಗೆ ತಾನು ಗಂಡು ಮಗುವಿನ ತಂದೆಯಾದ ಖುಷಿಯನ್ನು ಪಾಂಡ್ಯ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನಮಗೆ ಗಂಡು ಮಗುವಿನ ಆಗಮನವಾಗಿದೆ ಎಂದು ಬರೆದುಕೊಂಡಿದ್ದರು. ಜೊತೆಗೆ ಪಾಂಡ್ಯ ತನ್ನ ಮಗುವಿನ ಕೈ ಹಿಡಿದುಕೊಂಡಿದ್ದು, ಪುತ್ರನ ಮುಖ ಕಾಣದ ಫೋಟೋವನ್ನು ಅಪ್ಲೋಡ್ ಮಾಡಿದ್ದರು. ನಂತರ ಪಾಂಡ್ಯ ತಮ್ಮ ಮಗುವಿನ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದರು.

https://www.instagram.com/p/CDZBYk_lrLw/?utm_source=ig_embed

ಆಸ್ಪತ್ರೆಯಲ್ಲಿ ತಮ್ಮ ಮಗನನ್ನು ಎರಡು ಕೈಗಳಿಂದ ಎತ್ತಿಕೊಂಡಿದ್ದು, ಮಗುವಿನ ಮುಖ ನೋಡುತ್ತಾ ಪಾಂಡ್ಯ ನಗುತ್ತಿದ್ದಾರೆ. ಈ ಫೋಟೋಗೆ “ದೇವರಿಂದ ಆಶೀರ್ವಾದ” ಎಂದು ಬರೆದಿದ್ದು, ನಮಸ್ಕಾರ ಮಾಡುವ ಮತ್ತು ಹಾರ್ಟ್ ಎಮೋಜಿಯನ್ನು ಹಾಕಿ ಖುಷಿಯನ್ನು ವ್ಯಕ್ತಪಡಿಸಿದ್ದರು.

Comments

Leave a Reply

Your email address will not be published. Required fields are marked *