ಪೊಲೀಸ್ ಠಾಣೆಯಲ್ಲಿಯೇ ಕಳ್ಳರ ಕೈ ಚಳಕ

-ಗನ್ ಎಗರಿಸಿ ಎಸ್ಕೇಪ್

ಪಾಟ್ನಾ: ಪೊಲೀಸ್ ಠಾಣೆಗೆ ನುಗ್ಗಿ ಕಳ್ಳರು ಗನ್ ಕದ್ದಿರುವ ಘಟನೆ ಬಿಹಾರದ ಆರರಿಯಾ ಜಿಲ್ಲೆಯ ಫಾರಬಿಸಗಂಜ್ ಠಾಣೆಯಲ್ಲಿ ನಡೆದಿದೆ.

ಫಾರಬಿಸಗಂಜ್ ಠಾಣೆಯೊಳಗೆ ಪೊಲೀಸರಿಗೆ ವಿಶ್ರಾಂತಿ ಗೃಹ ಕಲ್ಪಿಸಲಾಗಿದೆ. ರಾತ್ರಿ ಡ್ಯೂಟಿಯಲ್ಲಿದ್ದ ಇನ್‍ಸ್ಪೆಕ್ಟರ್ ವಿಮಲ್ ಮಂಡಲ್ ನಿದ್ದೆಗೆ ಜಾರಿದ ವೇಳೆ ಕಳ್ಳರು ಠಾಣೆಗೆ ನುಗ್ಗಿ ಗನ್ ಎಗರಿಸಿದ್ದಾರೆ. ವಿಮಲ್ ಮಂಡಲ್ 2011ರ ಬ್ಯಾಚಿನ್ ಪೊಲೀಸ್ ಅಧಿಕಾರಿಯಾಗಿದ್ದು, ಗನ್ ಲೋಡ್ ಆಗಿತ್ತು ಎಂದು ವರದಿಯಾಗಿದೆ.

ಪೊಲೀಸ್ ಠಾಣೆಗೆ ಆಗಮಿಸಿದ ಎಸ್‍ಡಿಪಿಓ ಮನೊಜ್ ಕುಮಾರ್ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದ್ದಾರೆ. ಪೊಲೀಸ್ ಠಾಣೆಯಲ್ಲಿ ಕಳ್ಳತನ ಮಾಡಿದವನ್ನು ಕೂಡಲೇ ಪತ್ತೆ ಮಾಡಲಾಗುವುದು. ಕಳ್ಳನ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಮನೋಜ್ ಕುಮಾರ್ ಹೇಳಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಕಳ್ಳತನ ನಡೆದಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಪೊಲೀಸ್ ಠಾಣೆಗೆ ನುಗ್ಗಿ ಕಳ್ಳರು ಪಿಸ್ತೂಲ್ ತೆಗೆದುಕೊಂಡು ಹೋಗಿರೋದು ನೋಡಿದ್ರೆ ಸಾಮಾನ್ಯರ ಗತಿ ಏನು ಎಂದು ಸಾರ್ವಜನಿಕರು ಮಾತನಾಡಿಕೊಳ್ಳಲಾರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *