ರಫೇಲ್‌ ಲ್ಯಾಂಡ್‌ ಆಗಿದ್ದ ವಾಯುನೆಲೆಯ ಸಮೀಪವೇ ಬಿತ್ತು ಇರಾನ್‌ ಕ್ಷಿಪಣಿ

– ವಾಯುನೆಲೆಯಲ್ಲಿ ಹೈ ಅಲರ್ಟ್‌ ಘೋಷಣೆ
– ಸೈನಿಕರಿಗೆ ಬಂಕರ್‌ಗೆ ಹೋಗುವಂತೆ ಸೂಚನೆ

ಅಬುಧಾಬಿ: ಅತ್ಯಾಧುನಿಕ ಯುದ್ಧ ವಿಮಾನ ರಫೇಲ್‌ ಇಂದು ಮಧ್ಯಾಹ್ನ ಹರ್ಯಾಣದಲ್ಲಿರುವ ಅಂಬಾಲ ವಾಯುನೆಲೆಯಲ್ಲಿ ಲ್ಯಾಂಡ್‌ ಆಗಲಿದೆ. ಈ ಮಧ್ಯೆ ಮಂಗಳವಾರ ರಾತ್ರಿ ರಫೇಲ್‌ ತಂಗಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಲ್ ದಫ್ರಾ ವಾಯುನೆಲೆಯ ಸಮೀಪ ಇರಾಕ್‌ನ  ಕ್ಷಿಪಣಿಗಳು ಲ್ಯಾಂಡ್‌ ಆದ ವಿಚಾರ ಬೆಳಕಿಗೆ ಬಂದಿದೆ.

ಭಾರತದ ಮೂರು ಸಿಂಗಲ್‌ ಸೀಟರ್‌ ಮತ್ತು ಎರಡು ಡಬಲ್‌ ಸೀಟರ್‌ ರಫೇಲ್‌ ವಿಮಾನಗಳು ಸೋಮವಾರ ಫ್ರಾನ್ಸ್‌ನ ಮೆರಿಗ್ನಾಕ್‌ನಿಂದ ಟೇಕಾಫ್‌ ಆಗಿ ಅಮೆರಿಕ ಮತ್ತು ಫ್ರಾನ್ಸ್‌ ವಾಯುನೆಲೆಯಾಗಿರುವ ಅಲ್ ದಫ್ರಾದಲ್ಲಿ ಲ್ಯಾಂಡ್‌ ಆಗಿತ್ತು. ಈ ನಡುವೆ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಮೂರು ಕ್ಷಿಪಣಿಗಳನ್ನು ಹಾರಿಸಿತ್ತು. ಕ್ಷಿಪಣಿ ಹಾರಿಸಿದ್ದ ವಿಚಾರ ತಿಳಿಯುತ್ತಿದ್ದಂತೆ ಅಲ್‌ ದಫ್ರಾ ಮತ್ತು ಕತಾರ್‌ನಲ್ಲಿರುವ ಅಮೆರಿಕದ ವಾಯು ನೆಲೆ ಅಲ್‌ ಉದಿದ್‌ನಲ್ಲಿ ಹೈ ಅಲರ್ಟ್‌ ಅಲರ್ಟ್‌ ಘೋಷಿಸಲಾಗಿತ್ತು.

ಇರಾನ್‌ ಕ್ಷಿಪಣಿಗಳು ಬರುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕ ಎರಡು ವಾಯು ನೆಲೆಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿತ್ತು. ಆದರೆ ಈ ಕ್ಷಿಪಣಿಗಳು ಯಾವುದು ವಾಯುನೆಲೆಯ ಮೇಲೆ ಅಪ್ಪಳಿಸಲಿಲ್ಲ. ವಾಯು ನೆಲೆಯ ಸಮೀಪ ಇರುವ ಪರ್ಷಿಯನ್‌ ಕೊಲ್ಲಿಯಲ್ಲಿ ಬಿತ್ತು ಎಂದು ಫಾಕ್ಸ್‌ ನ್ಯೂಸ್‌ ವರದಿ ಮಾಡಿದೆ.

ಮಿಲಿಟರಿ ತಾಲೀಮಿನ ಭಾಗವಾಗಿ ಇರಾನ್‌ ಕ್ಷಿಪಣಿಗಳನ್ನು ಉಡಾವಣೆ ಮಾಡಿತ್ತು. ಅಮೆರಿಕದ ವಿಮಾನ ವಾಹಕ ಯುದ್ಧ ನೌಕೆಯ ಮಾದರಿಯನ್ನು ನಿಲ್ಲಿಸಿ ಅದರ ಮೇಲೆ ದಾಳಿ ನಡೆಸುವ ಭಾಗವಾಗಿ ಕ್ಷಿಪಣಿ ಹಾರಿಸಿತ್ತು. ಈ ಕ್ಷಿಪಣಿಗಳು ಎರಡು ವಾಯುನೆಲೆಯ ಸಮೀಪವೇ ಬಿದ್ದ ಕಾರಣ ಕೆಲ ಹೊತ್ತು ಆತಂಕಕ್ಕೆ ಕಾರಣವಾಗಿತ್ತು ಇರಾನ್‌ ಕ್ಷಿಪಣಿ ಬರುತ್ತಿರುವ ಸಿಗ್ನಲ್‌ ತಿಳಿಯುತ್ತಿದ್ದಂತೆ ಆಲ್‌ ದಫ್ರಾ ವಾಯುನೆಲೆಯಲ್ಲಿರುವ ಸೈನಿಕರಿಗೆ ಬಂಕರ್‌ ಒಳಗಡೆ ಹೋಗುವಂತೆ ಅಮೆರಿಕ ಸೂಚಿಸಿತ್ತು.

 

ಕ್ಷಿಪಣಿ ಹಾರಿಸಿದ್ದು ಯಾಕೆ?
ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಕೋರ್‌ನ ಕಮಾಂಡರ್‌ ಮೇಜರ್‌ ಜನರಲ್‌ ಖಾಸಿಂ ಸುಲೇಮಾನಿ ಅವರನ್ನು ಅಮೆರಿಕ ಸೇನೆ ಈ ವರ್ಷದ ಜನವರಿ 3 ರಂದು ಹತ್ಯೆ ಮಾಡಿತ್ತು. ಇರಾಕ್ ರಾಜಧಾನಿ ಬಾಗ್ದಾದ್‍ನಲ್ಲಿ ಬಿಗಿ ಭದ್ರತೆಯಲ್ಲಿದ್ದ ಸುಲೇಮಾನಿಯ ಮೇಲೆ ವೈಮಾನಿಕ ದಾಳಿ ನಡೆಸಿತ್ತು.

ಇರಾಕ್‍ನ ಮಿಲಿಟರಿ ಕಮಾಂಡರ್ ಅಬು ಮಹ್ದಿ ಅಲ್ ಮುಹಾಂದಿಸ್ ಜೊತೆ ಇರಾಕ್ ರಾಜಧಾನಿ ಬಾಗ್ದಾದ್‍ನ ವಿಮಾನ ನಿಲ್ದಾಣಕ್ಕೆ ಇರಾನ್ ಸೇನಾ ಮುಖ್ಯಸ್ಥರಾಗಿದ್ದ ಸುಲೇಮಾನಿ ಕಾರಿನಲ್ಲಿ ತೆರಳುತ್ತಿದ್ದರು. ಈ ಇಬ್ಬರು ತೆರಳುತ್ತಿದ್ದ ಕಾರನ್ನು ಟಾರ್ಗೆಟ್ ಮಾಡಿದ ಅಮೆರಿಕ ಸೇನೆಗಳು ಡ್ರೋನ್ ಮೂಲಕ ಕ್ಷಿಪಣಿಯನ್ನು ಉಡಾವಣೆ ಮಾಡಿ ಏರ್ ಸ್ಟ್ರೈಕ್ ಮಾಡಿತ್ತು. ದಾಳಿಯ ತೀವ್ರತೆಗೆ ಇಬ್ಬರು ತೆರಳುತ್ತಿದ್ದ ಕಾರುಗಳು ಛಿದ್ರ-ಛಿದ್ರವಾಗಿದ್ದವು.

ಈ ಘಟನೆಯ ಬಳಿಕ ಇರಾಕ್ ರಾಜಧಾನಿ ಬಾಗ್ದಾದ್‍ನಲ್ಲಿರುವ ಅಮೆರಿಕ ಸೇನೆ ಬೀಡು ಬಿಟ್ಟಿರುವ ಅಲ್-ಬಲಾದ್ ವಾಯುನೆಲೆ ಮೇಲೆ ಇರಾನ್ ಎರಡು ರಾಕೆಟ್ ದಾಳಿ ನಡೆಸಿತ್ತು. ಅಮೆರಿಕದ ವಿರುದ್ಧ ಪ್ರತೀಕಾರ ತೀರಿಸಲು ಇರಾನ್‌ ಮುಂದಾಗುತ್ತಿದ್ದು ಈಗ ಕ್ಷಿಪಣಿಗಳನ್ನು ಉಡಾಯಿಸುವ ಮೂಲಕ ಸಮರಾಭ್ಯಾಸ ನಡೆಸುತ್ತಿದೆ.  ಇದನ್ನೂ ಓದಿ: ಅಮೆರಿಕ, ಇರಾನ್ ಯುದ್ಧದ ಕಾರ್ಮೋಡ- ಭಾರೀ ಸಂಕಷ್ಟಕ್ಕೆ ಸಿಲುಕಿದ ಬಳ್ಳಾರಿ ರೈತರು

 

Comments

Leave a Reply

Your email address will not be published. Required fields are marked *