‘ಜೀವನ ಬೇಸರವಾಗಿದೆ’- ಫೇಸ್‍ಬುಕ್ ಲೈವ್ ಬಂದು ವ್ಯಕ್ತಿ ನೇಣಿಗೆ ಶರಣು

ಚೆನ್ನೈ: ವ್ಯಕ್ತಿಯೊಬ್ಬ ಫೇಸ್‍ಬುಕ್ ಲೈವ್ ಗೆ ಬಂದು, ಲೈವ್ ನಲ್ಲೇ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತ್ರಿಪುರದಲ್ಲಿ ನಡೆದಿದೆ.

ಘಟನಾ ಸ್ಥಳದಲ್ಲಿ ಅನುಪರ್ಪಾಲಯಂ ಪೊಲೀಸರಿಗೆ ಡೆತ್ ನೋಟ್ ದೊರೆತಿದ್ದು, ನನಗೆ ಜೀವನ ಬೇಸರವಾಗಿದೆ ಎಂದು ಬರೆದಿದ್ದಾನೆ.

ಮೃತ ರವಿಕುಮಾರ್ ಮೂಲತಃ ಧರಪುರಂನ ಚಿನ್ನಾರವುತನ್ಪಾಲಯಂ ನಿವಾಸಿಯಾಗಿದ್ದು, ಬಾಡಿಗೆ ಮನೆಯೊಂದರಲ್ಲಿ ಪತಿ ಹಾಗೂ ಪುತ್ರನೊಂದಿಗೆ ವಾಸವಾಗಿದ್ದಾನೆ. ಖಾಸಗಿ ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವ ರವಿಕುಮಾರ್, ವಿಪರೀತ ಮದ್ಯವ್ಯಸನಿಯಾಗಿದ್ದಾನೆ. ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕಂಠಪೂರ್ತಿ ಕುಡಿದುಕೊಂಡು ಮನೆಗೆ ಬಂದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಮಯದಲ್ಲಿ ಪತ್ನಿ ತಾನು ಕೆಲಸ ಮಾಡುವ ಜಾಗದಲ್ಲಿದ್ದು, ಮಗ ಅಜ್ಜಿ ಮನೆಯಲ್ಲಿದ್ದನು. ಹೀಗೆ ಮನೆಗೆ ಬಂದ ರವಿಕುಮಾರ್, ಕೋಣೆಯೊಳಗೆ ಹೋಗಿ ಚಿಲಕ ಹಾಕಿಕೊಂಡು ಫೇಸ್ಬುಕ್ ಲೈವ್ ಆನ್ ಮಾಡಿದ್ದಾನೆ. ಲೈವ್ ನಲ್ಲಿ ಇದ್ದಂತೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇತ್ತ ಲೈವ್ ನೋಡುತ್ತಿದ್ದ ಕೆಲವರು ಕೂಡಲೇ ತ್ರಿಪುರ ಸಿಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರವಿಕುಮಾರ್ ಪತ್ನಿಗೂ ಈ ವಿಚಾರ ತಿಳಿದು ಕೂಡಲೇ ಆಕೆ ತನ್ನ ಮನೆಯವರಿಗೆ ವಿಚಾರ ಮುಟ್ಟಿಸಿದ್ದು, ಎಲ್ಲರೂ ತಕ್ಷಣವೇ ಮನೆಗೆ ಬಂದಿದ್ದಾರೆ. ಬಾಗಿಲು ಒಡೆದು ನೋಡಿದಾಗ ರವಿಕುಮಾರ್ ನೇಣಿಗೆ ಶರಣಾಗಿದ್ದನು.

ತಕ್ಷಣವೇ ಆತನ ಕುಟುಂಬ ರವಿಕುಮಾರ್ ನನ್ನು ಫ್ಯಾನಿಂದ ಕೆಳಗಿಳಿಸಿ ತ್ರಿಪುರ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅದಾಗಲೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದರು. ರವಿಕುಮಾರ್ 7 ವರ್ಷಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ರವಿಕುಮಾರ್ ಪತ್ನಿ ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಐಪಿಸಿ ಸೆಕ್ಷನ್ 174 (ಅಸ್ವಾಭಾವಿಕ ಸಾವು) ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *