ಟಿಕ್‌ಟಾಕ್‌ಗೆ ಕೊನೆಯ ವಾರ್ನಿಂಗ್‌ – ಚೀನಾ ಮಿತ್ರ ಪಾಕ್‌ನಲ್ಲೂ ಬ್ಯಾನ್‌ ಆಗುತ್ತಾ?

ಇಸ್ಲಾಮಾಬಾದ್‌: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಚೀನಾದ ಮಿತ್ರ ದೇಶ ಪಾಕಿಸ್ತಾನ ಟಿಕ್‌ಟಾಕ್‌ ಅಪ್ಲಿಕೇಶನ್‌ಗೆ ಕೊನೆಯ ಎಚ್ಚರಿಕೆಯನ್ನು ನೀಡಿದೆ.

ಅಶ್ಲೀಲತೆ ಮತ್ತು ಅನೈತಿಕತೆ ಪ್ರತಿಬಿಂಬಿಸುವ ವಿಡಿಯೋಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಈಗ ಟಿಕ್‌ಟಾಕ್‌ ಅಪ್ಲಿಕೇಶನ್‌ ತಯಾರಿಸಿದ ಬೈಟ್‌ಡ್ಯಾನ್ಸ್‌ ಪಾಕಿಸ್ತಾನ ಎಚ್ಚರಿಕೆ ನೋಟಿಸ್‌ ನೀಡಿದೆ.

ಅಶ್ಲೀಲತೆ ಮತ್ತು ಅನೈತಿಕ ವಿಡಿಯೋಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಮೊದಲೇ ಟಿಕ್‌ಟಾಕ್‌ ಇವುಗಳನ್ನ ನಿಯಂತ್ರಣ ಮಾಡಬೇಕೆಂದು ಸೂಚಿಸಿತ್ತು. ಈ ನೋಟಿಸ್‌ಗೆ ಟಿಕ್‌ಟಾಕ್‌ ನೀಡಿದ ಪ್ರತಿಕ್ರಿಯೆ ತೃಪ್ತಿ ನೀಡದೇ ಹಿನ್ನೆಲೆಯಲ್ಲಿ ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ಈಗ ಕೊನೆಯ ಎಚ್ಚರಿಕೆಯನ್ನು ನೀಡಿದೆ.

ಎಲೆಕ್ಟ್ರಾನಿಕ್ ಅಪರಾಧಗಳ ತಡೆಗಟ್ಟುವಿಕೆ ಕಾಯ್ದೆಯಡಿ ಲೈವ್ ಸ್ಟ್ರೀಮಿಂಗ್ ಅಪ್ಲಿಕೇಶನ್ ಬಿಗೋವನ್ನು ನಿರ್ಬಂಧಿಸಿದ ನಂತರ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರದ ಈ ಎಚ್ಚರಿಕೆ ಬಂದಿರುವುದು ವಿಶೇಷವಾಗಿದೆ.

ಪಾಕ್‌ನಲ್ಲೂ ಟಿಕ್‌ಟಾಕ್‌ ನಿಷೇಧವಾಗುತ್ತಾ?ʼ
ಭಾರತ ಭದ್ರತಾ ಕಾರಣಗಳನ್ನು ನೀಡಿ ಟಿಕ್‌ಟಾಕ್‌ ಸೇರಿದಂತೆ 59 ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತ್ತು. ಆದರೆ ಪಾಕಿಸ್ತಾನ ಈ ಕಾರಣಗಳನ್ನು ಹೇಳಿ ನಿಷೇಧಿಸಲು ಸಾಧ್ಯವಿಲ್ಲ. ಯಾಕೆಂದರೆ ಚೀನಾ ಈಗಾಗಲೇ ಮಿಲಿಟರಿ, ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ.

ಈಗ ಟಿಕ್‌ಟಾಕ್‌ ದೇಶದ ಭದ್ರತೆಗೆ ಸಮಸ್ಯೆ ತರಬಹುದು ಎಂಬ ವಿಚಾರ ಪಾಕಿಸ್ತಾನಕ್ಕೆ ಗೊತ್ತಾಗಿದೆ. ಹೀಗಾಗಿ ಈ ವಿಚಾರವನ್ನು ಪ್ರಸ್ತಾಪ ಮಾಡದೇ ಹಿಂಬಾಗಿಲಿನ ಮೂಲಕ ಟಿಕ್‌ಟಾಕ್‌ ನಿಷೇಧ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಡಿಜಿಟಲ್‌ ಸ್ಟ್ರೈಕ್‌ಗೆ‌ ಟಿಕ್‌ಟಾಕ್‌ ಬ್ಯಾನ್‌ – ಬೈಟ್‌ಡ್ಯಾನ್ಸ್‌ಗೆ 45 ಸಾವಿರ ಕೋಟಿ ರೂ. ನಷ್ಟ

ಪಾಕಿಸ್ತಾನದಲ್ಲಿ ಟಿಕ್‌ಟಾಕ್‌ ಜನಪ್ರಿಯವಾಗಿದ್ದು 2.5 ಕೋಟಿ ಜನ ಕಳೆದ ವರ್ಷ ಈ ಅಪ್ಲಿಕೇಶನ್‌ನ್ನು ಡೌನ್‌ಲೋಡ್‌ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಟಿಕ್‌ಟಾಕ್‌ ವಿಡಿಯೋಕ್ಕಾಗಿ ಯುವಕನೊಬ್ಬ ಶೂಟ್‌ ಮಾಡಿಕೊಂಡಿದ್ದ. 10 ದಿನಗಳ ಹಿಂದೆ ಟಿಕ್‌ಟಾಕ್‌ ಮೂಲಕ ಪರಿಚಯಗೊಂಡಿದ್ದ ವ್ಯಕ್ತಿ ಮತ್ತು ಆತನ ಸ್ನೇಹಿತರಿಂದ ಹುಡುಗಿಯ ಮೇಲೆ ಗ್ಯಾಂಗ್‌ ರೇಪ್‌ ನಡೆದಿತ್ತು. ಅಪರಾಧಗಳಿಗೆ ಪ್ರೇರಣೆ ನೀಡುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್‌ ಶಾಸನಸಭೆ ಜುಲೈ 6 ರಂದು ಟಿಕ್‌ಟಾಕ್‌ ನಿಷೇಧ ನಿರ್ಣಯವನ್ನು ಪಾಸ್‌ ಮಾಡಿತ್ತು.

Comments

Leave a Reply

Your email address will not be published. Required fields are marked *