ಮದ್ವೆ ಆಗ್ತಿರೋ ಪುತ್ರನಿಗೆ ಅಮ್ಮನಿಂದ ಬೇಳೆಗಳ ಅಲ್ಬಂ ಗಿಫ್ಟ್

-ತಾಯಿಯ ಜಾಣ್ಮೆಗೆ ನೆಟ್ಟಿಗರು ಫುಲ್ ಫಿದಾ

ಬೆಂಗಳೂರು: ಮದುವೆ ಆಗುತ್ತಿರುವ ಮಗನಿಗೆ ತಾಯಿ ಬೇಳೆಗಳ ಅಲ್ಬಂ ಗಿಫ್ಟ್ ನೀಡಿದ್ದಾರೆ. ಬೇಳೆಗಳ ಅಲ್ಬಂ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ನೀವು ಬೆಸ್ಟ್ ಮದರ್ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಮನೆಯಿಂದ ಹೊರಗೆ ಇರುವ ಯುವಕರಿಗೆ ಅಡುಗೆ ಮಾಡಿಕೊಳ್ಳುವುದು ದೊಡ್ಡ ಸವಾಲು. ಕೆಲವರು ಹೋಟೆಲ್ ಮೊರೆ ಹೋದ್ರೆ ಬಹುತೇಕರು ಮನೆಯ ಊಟವನ್ನು ಇಷ್ಟಪಡುತ್ತಾರೆ. ಹಾಗಾಗಿ ಮನೆಯಲ್ಲಿಯೇ ಅಡುಗೆ ತಯಾರಿಸಿಕೊಳ್ಳಲು ನಿರ್ಧರಿಸುತ್ತಾರೆ. ಇನ್ನು ಮೊದಲ ಬಾರಿಗೆ ಅಡುಗೆ ಮನೆಗೆ ಎಂಟ್ರಿ ಕೊಟ್ಟಿದ್ರೆ ಹೊಸ ಲೋಕಕ್ಕೆ ಬಂದ ಅನುಭವ ಆಗೋದು ಸತ್ಯ. ಅದರಲ್ಲಿ ಕೆಲ ಬೇಳೆಗಳು ನೋಡಲು ಒಂದೇ ರೀತಿ ಕಾಣಿಸುತ್ತವೆ. ಹಾಗಾಗಿ ಯಾವ ಬೇಳೆ ಎಂಬುದನ್ನು ಕಂಡು ಹಿಡಿಯಲು ಕಷ್ಟ ಆಗುತ್ತದೆ. ಹಾಗಾಗಿ ಮಗನಿಗೆ ಸಮಸ್ಯೆ ಆಗದಿರಲಿ ಎಂದು ತಾಯಿ ಎಲ್ಲ ಬೇಳೆಗಳ ಸ್ಯಾಂಪಲ್ ಪುಸ್ತಕದಲ್ಲಿ ಅಂಟಿಸಿ ಕೆಳಗೆ ಹೆಸರು ಬರೆದಿದ್ದಾರೆ.

ಈ ಫೋಟೋವನ್ನು ಐಪಿಎಸ್ ಅಧಿಕಾರಿ ದಿಪಾಂಶು ಕಾಬ್ರಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ಮದುವೆ ಆಗುತ್ತಿರೋ ಮಗನಿಗೆ ತಾಯಿ ನೀಡುತ್ತಿರುವ ಗಿಫ್ಟ್ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಒಂದು ಸಾವಿರಕ್ಕೂ ಅಧಿಕ ಲೈಕ್ಸ್ ಗಳನು ಪಡೆದುಕೊಂಡಿದ್ದು, ನೂರಕ್ಕೂ ಅಧಿಕ ಬಾರಿ ರಿಟ್ವೀಟ್ ಆಗಿದೆ. ಆದ್ರೆ ಮಗನಿಗೆ ಅಲ್ಬಂ ನೀಡಿದ ತಾಯಿಯ ಮಾಹಿತಿ ಲಭ್ಯವಾಗಿಲ್ಲ.

ಕಾಬ್ರಾ ಟ್ವೀಟಿಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಮಗನಿಗೆ ಒಳ್ಳೆಯ ಟ್ರೈನಿಂಗ್ ಅಂತಾ ಕಮೆಂಟ್ ಮಾಡಿದ್ರೆ, ಬೇಳೆಗಳ ಬಗ್ಗೆ ಮಗ ಮತ್ತು ಮಗಳಿಗೂ ತಿಳಿದಿರಬೇಕು. ಹಲವರು ಬೆಸ್ಟ್ ಮದರ್ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗುಡ್ ಮದರ್, ಮಗನಿಗೆ ಏನು ಹೇಳಿಕೊಡಬೇಕು ಎಂಬುವುದು ತಾಯಿಗೆ ಗೊತ್ತಿದೆ. ಪತ್ನಿ ಲೈಫ್ ಪಾರ್ಟ್‍ನರ್ ಹೊರತು, ಸಂಬಳ ರಹಿತ ಅಡುಗೆ ಮಾಡುವಳಲ್ಲ. ಆಕೆಯ ಮೇಲೆ ಹೆಚ್ಚು ಒತ್ತಡ ಹಾಕೋದು ತಪ್ಪು. ಸಂತೋಷದ ಜೊತೆ ಜವಾಬ್ದಾರಿಗಳನ್ನು ಹಂಚಿಕೊಳ್ಳೋಣ ಎಂದು ಶಶಾಂಕ್ ಶೇಖರ್ ನಾಯಕ್ ಟ್ವೀಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *